ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಕೊಡಗು: ಜಿಲ್ಲೆಯಲ್ಲಿ ಭಾರೀ ಮಳೆಗಾಳಿ ಮುಂದುವರೆದ ಹಿನ್ನಲೆಯಲ್ಲಿ ಗುರುವಾರವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ.
ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು ನದಿ ತೋರೆಗಳು ತುಂಬಿ ಹರಿಯುತ್ತಿವೆ, ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆ ಹಾಗು ಪ್ರಸ್ತುತ. ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆ ಮುಂದುವರೆದಿರುವುದರಿಂದ ಜಿಲ್ಲೆಯಾದ್ಯಂತ ಅಂಗನವಾಡಿ ಸೇರಿದಂತೆ ಶಾಲಾ ಕಾಲೇಜುಗಳಿಗೆ ರಜೆಯನ್ನು ಗುರುವಾರಕ್ಕೂ ವಿಸ್ತರಿಸಲಾಗಿದೆ.
ನದಿ ತೊರೆಗಳಿಗೆ ಇಳಿದು ಈಜುವುದು,ಸ್ನಾನ ಮಾಡುವುದು,ಜಲಪಾತಗಳ ಸಮೀಪ ಹೋಗುವುದನ್ನು ಮಾಡದಂತೆ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು,ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದಾಗ ದಾಟುವ ಪ್ರಯತ್ನ ನಡೆಸಬಾರದು,ತೊರೆಗಳ ಸಮೀಪ,ಬೃಹತ್ ಬಂಡೆ,ಮರಗಳ ಕೆಳಗೆ ವಾಹನ ನಿಲ್ಲಿಸಬಾರದು ಎನ್ನುವ ಸಲಹೆ ನೀಡಿದೆ.ನದಿ ತೊರೆಗಳ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಸದಾ ಜಾಗೃತವಾಗಿರಬೇಕು,ಯಾವುದೇ ಅಪಾಯವಾದಲ್ಲಿ ಜಿಲ್ಲೆಯ ತುರ್ತು ಸಂಖ್ಯೆಗೆ ಕರೆ ಮಾಡಿ ಎಂದು ಸೂಚಿಸಿದೆ.
Comments (0)