ಬಿಬಿಎಂಪಿ ಕಚೇರಿಯಲ್ಲಿ ತಮಿಳು ಚಿತ್ರದ ಶೂಟಿಂಗ್!
- by Suddi Team
- November 9, 2018
- 138 Views

ಬೆಂಗಳೂರು: ಬಿಜೆಪಿ ಶಾಸಕರಾಗಿರುವ ಸುರೇಶ್ ಕುಮಾರ್ ಅವರು, ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದ ವಿಚಾರವೊಂದು ಇಂದು ಕೆಲಕಾಲ ಬಿಬಿಎಂಪಿ ಅಧಿಕಾರಿಗಳನ್ನು ಗೊಂದಲಕ್ಕಿಡು ಮಾಡಿತ್ತು. ಪಾಲಿಕೆ ಸದಸ್ಯರ ಗೊಂದಲಕ್ಕೆ ಕಾರಣವೇನು ಅಂತೀರಾ ಹಾಗಾದ್ರೆ ಈ ಸ್ಟೋರಿ ಓದಿ.
2016ರಲ್ಲಿ ಚಿತ್ರೀಕರಿಸಿದ ಇಮೈಕ ನೋಡಿಗಕಲ್ ಅನ್ನೋ ತಮಿಳು ಚಿತ್ರವನ್ನು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶೂಟಿಂಗ್ ಮಾಡಲಾಗಿತ್ತು. ಆದ್ರೆ ಈ ಚಿತ್ರಕ್ಕೆ ಬಿಬಿಎಂಪಿ ಅಧಿಕಾರಿಗಳು ಯಾವುದೇ ಅನುಮತಿ ನೀಡಿಲ್ಲ ಎಂದಿದ್ದಾರೆ. ಆದ್ರಿಂದ ಈ ಚಿತ್ರೀಕರಣಕ್ಕೆ ಅನುಮತಿ ನೀಡಿದವರು ಯಾರು ಎಂದು ತನಿಖೆ ನಡಿಸಲೇಬೇಕೆಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ತಮ್ಮ ಟ್ವಿಟರ್ ಅಕೌಂಟ್ ಮೂಲಕ ಒತ್ತಾಯಿಸಿದ್ದಾರೆ
ಪ್ರಕರಣ ಸಂಬಂಧ ಬಿಬಿಎಂಪಿ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ, ಮೇಯರ್ ತನಿಖೆಗೆ ಸೂಚಿಸಿದರು. ತನಿಖೆಯಲ್ಲಿ ತಿಳಿದು ಬಂದಂತೆ, ಈ ಚಿತ್ರೀಕರಣ ಮಾಡೋದಕ್ಕೆ ಚಿತ್ರತಂಡ ಅನುಮತಿ ಪಡೆದಿದ್ದಾರೆ. ಆದ್ರೆ ಇನ್ನು ಮುಂದೆ ಇಂತ ಯಾವುದೇ ಚಿತ್ರಗಳು ಶೂಟ್ ಮಾಡೋದಕ್ಕೆ ಅನುಮತಿ ನೀಡೊಲ್ಲ ಎಂದು ಸ್ಪಷ್ಟನೇ ನೀಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಪದ್ಮನಾಭ, ಬಿಬಿಎಂಪಿ ಕಚೇರಿಯಲ್ಲಿ ಹಲವಾರು ಮಹತ್ವದ ಕಡೆತಗಳು ಇರುತ್ತವೆ ಅಂತದ್ರಲ್ಲಿ ತಮಿಳು ಚಿತ್ರ ನಮ್ಮ ಬಿಬಿಎಂಪಿ ಸರ್ಕಾರಿ ಕಚೇರಿಯಲ್ಲಿ ಶೂಟಿಂಗ್ ಮಾಡೋದಕ್ಕೆ ಅನುಮತಿ ಆದ್ರೂ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
Related Articles
Thank you for your comment. It is awaiting moderation.
Comments (0)