ಮತಗಳ್ಳತನದ ವಿರುದ್ಧ ಹೇಳಿಕೆ; ಸಚಿವ ಸ್ಥಾನದಿಂದ ರಾಜಣ್ಣ ವಜಾ

ಬೆಂಗಳೂರು: ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ. ಹೈಕಮಾಂಡ್ ಸೂಚನೆ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಸಂಪುಟದಿಂದ ಕೋಕ್ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಿಂದ ಕೆ.ಎನ್ ರಾಜಣ್ಣ ವಜಾಗೊಂಡಿದ್ದಾರೆ. ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಗೆ ತೆರಳಿದ ರಾಜಣ್ಣ ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದರು.ಸದನ ನಡೆಯುವಾಗಲೇ ಸಚಿವ ಸ್ಥಾನಕ್ಕೆ ರಾಜಣ್ಣ ಗುಡ್ ಬೈ ಹೇಳಿದರು. ಆದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸುವ ಬದಲು ಸಂಪುಟದಿಂದ ವಜಾಗೊಳಿಸಿ ಪತ್ರವನ್ನು ರಾಜಭವನಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅವರಿಂದ ರಾಜೀನಾಮೆ ಕೇಳುವ ಅಗತ್ಯವೇನಿಲ್ಲ,ಸಂಪುಟದಿಂದ ಕೈಬಿಡಿ ಎನ್ನುವ ಹೈಕಮಾಂಡ್ ಆದೇಶವನ್ನು ಸಿಎಂ ಪಾಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ರಾಜಣ್ಣ,ನಾನು ಅಧಿಕಾರಕ್ಕೆಅಂಟಿಕೊಂಡು ಕೂರುವ ಜಾಯಮಾನದವನಲ್ಲ ಎಂದು ಖಾರವಾಗಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಮತಗಳ್ಳತನ ಆರೋಪ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜಣ್ಣ ಮಾತನಾಡಿದ್ದರು,ನಮ್ಮ ಸರ್ಕಾರವಿದ್ದಾಗಲೇ ಮತದಾರರ ಪಟ್ಟಿ ಸಿದ್ದಪಡಿಸಿದ್ದಲ್ಲವೇ ಆಗೇನು ಮಾಡುತ್ತಿದ್ದಿರಿ ಎಂದು ಹೇಳಿದ್ದರು ಅದರ ಬೆನ್ನಲ್ಲೇ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯಿಂದ ರಾಜಣ್ಣ ಹೆಸರನ್ನು ಕೈಬಿಡಲಾಗಿತ್ತು, ಹಾಸನ ಉಸ್ತುವಾರಿಯಾಗಿದ್ದ ರಾಜಣ್ಣ ಬದಲು ಕೃಷ್ಣಬೈರೇಗೌಡರ ಹೆಸರು ಪ್ರಕಟಿಸಲಾಗಿತ್ತು ಆಗಲೇ ರಾಜಣ್ಣ ತಲೆದಂಡದ ಸುಳಿವು ಸಿಕ್ಕಿತ್ತು.

Related Articles

Comments (0)

Leave a Comment