ಪಿಆರ್‌ಸಿಐ ಉಪಾಧ್ಯಕ್ಷರಾಗಿ ಕೆಎಸ್ಆರ್ಟಿಸಿ ಸಿಪಿಆರ್ಒ ಡಾ.ಲತಾ ಪದಗ್ರಹಣ

ಬೆಂಗಳೂರು:ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ ಆಡಳಿತ ಮಂಡಳಿಯ ನೂತನ ಉಪಾಧ್ಯಕ್ಷರಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ.ಎಸ್ ಪದಗ್ರಹಣ ಮಾಡಿದ್ದಾರೆ.

ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ವತಿಯಿಂದ ಬೆಂಗಳೂರು ಜೆ.ಪಿ.ನಗರ ಸಾಂಸ್ಕೃತಿಕ ಸಂಘದಲ್ಲಿ ಪದಗ್ರಹಣ ಹಾಗೂ ಹಸ್ತಾಂತರ ಸಮಾರಂಭವನ್ನು ಗೌರವಪೂರ್ಣವಾಗಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಡಾ. ದೇವಾನಂದ ಗೋಪಾಲ್ (ಡಿಆರ್‌ಡಿಒ ಮಾಜಿ ವಿಜ್ಞಾನಿ) ಮುಖ್ಯ ಅತಿಥಿಯಾಗಿ, ಎಂ.ಬಿ. ಜಯರಾಮ್ (ಚೇರ್ಮನ್ ಎಮೆರಿಟಸ್ ಮತ್ತು ಮುಖ್ಯ ಮಾರ್ಗದರ್ಶಕರು) ಹಾಗೂ ಗೀತಾ ಶಂಕರ್ (ರಾಷ್ಟ್ರೀಯ ಅಧ್ಯಕ್ಷರು) ಉಪಸ್ಥಿತರಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಡಾ. ಟಿ. ವಿನಯ ಕುಮಾರ್ ಅವರು ಆಡಳಿತ ಮಂಡಳಿಯ (ಗವರ್ನಿಂಗ್ ಕೌನ್ಸಿಲ್) ಅಧ್ಯಕ್ಷರಾಗಿ, ಹಾಗೂ ಡಾ. ಲತಾ ಟಿ.ಎಸ್., ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಕೆಎಸ್‌ಆರ್‌ಟಿಸಿ ಅವರು ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ, ಚಿನ್ಮಯೀ ಪ್ರವೀಣ್ ಅವರು ಕಾರ್ಯದರ್ಶಿಯಾಗಿ ಪದಗ್ರಹಣ ಮಾಡಿದರು.

ಆಡಳಿತ ಮಂಡಳಿಯ ಹೆಚ್ಚುವರಿ ನಿರ್ದೇಶಕರಾಗಿ ಡಾ. ಬಿ.ಕೆ. ರವಿ (ಉಪಕುಲಪತಿ, ಉತ್ತರ ಬೆಂಗಳೂರು ವಿಶ್ವವಿದ್ಯಾಲಯ), ರವೀಂದ್ರನ್, ಸಿ.ಜೆ. ಸಿಂಗ್, ಆರ್.ಎನ್. ಮಹಾಪಾತ್ರ ಹಾಗೂ ಅರಿಜಿತ್ ಸಿಂಗ್ ಅವರು ಜವಾಬ್ದಾರಿ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಡಾ. ಪ್ರಶಾಂತ್ ವೇಣುಗೋಪಾಲ್ ಅವರು ಯಂಗ್ ಕಮ್ಯುನಿಕೇಟರ್ಸ್ ಕ್ಲಬ್‌ನ ರಾಷ್ಟ್ರೀಯ ಮುಖ್ಯಸ್ಥರಾಗಿ ಹಾಗೂ ಪಶುಪತಿ ಶರ್ಮಾ ಅವರು ಪಿಆರ್‌ಸಿಐಯ ಪ್ರಧಾನ ಕಾರ್ಯದರ್ಶಿಯಾಗಿ ಪದಗ್ರಹಣ ಮಾಡಿದರು.

Related Articles

Comments (0)

Leave a Comment