ಜಿಎಸ್ ಟಿ ಎರಡು ಸ್ಲ್ಯಾಬ್ ನಿಂದ ಪ್ರತಿ ವರ್ಷ 15 ಸಾವಿರ ಕೋಟಿ ನಷ್ಟ;ಸಿಎಂ..!
- by Suddi Team
- August 31, 2025
- 101 Views

ಮೈಸೂರು: ಕೇಂದ್ರ ಸರ್ಕಾರ ಜಿ.ಎಸ್.ಟಿ ಎರಡು ಸ್ಲ್ಯಾಬ್ ಮಾಡುವುದರಿಂದ ಪ್ರತಿ ವರ್ಷ 15 ಸಾವಿರ ಕೋಟಿ ನಷ್ಟವಾಗಬಹುದೆಂದು ಅಂದಾಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರ್ಕಬದ್ಧಗೊಳಿಸುವುದನ್ನು ಸ್ವಾಗತಿಸುತ್ತೇವೆ ಆದರೆ ಹಣಕಾಸಿನ(Revenue Protection) ರಕ್ಷಣೆಯಾಗಬೇಕೆನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ ಎಂಟು ರಾಜ್ಯಗಳು ದೆಹಲಿಯಲ್ಲಿ ಚರ್ಚೆ ಮಾಡಿದ್ದು, 2.50 ಲಕ್ಷ ಕೋಟಿ ರೂ. ಇಡೀ ರಾಜ್ಯದಲ್ಲಿ ಸಂಗ್ರಹವಾಗುತ್ತದೆ. 15 ಸಾವಿರ ಕೋಟಿ ನಷ್ಟವಾಗುವುದು ದೊಡ್ಡ ಮೊತ್ತ ಎಂದರು.
ಸಿನ್ ಗೂಡ್ಸ್ ಮೇಲೆ ಸೆಸ್ ಹಾಕಿ ಪರಿಹಾರ ಒದಗಿಸಲು ಜಿಎಸ್ ಟಿ ಮಂಡಳಿಗೆ ಸಲಹೆ:
2017 ರಲ್ಲಿ ಜಿಎಸ್ ಟಿ ಜಾರಿಯಾದಾಗ 5 ವರ್ಷ ಮಾತ್ರ ಪರಿಹಾರ ನೀಡುವುದಾಗಿ ಹೇಳಿದ್ದರು. ಈಗ ಸುಮಾರು 12% ತೆರಿಗೆ ಬೆಳವಣಿಗೆಯಾಗಿದೆ. ಲಕ್ಷುರಿ(ಸಿನ್ ಗೂಡ್ಸ್ ) ವಸ್ತುಗಳಾದ ಸಿಗರೇಟ್, ಗುಟ್ಕಾ, ಪಾನ್ ಮಸಾಲಾ ಬೆಂಜ್ ಕಾರುಗಳಲ್ಲಿ ಓಡಾಡುವವ ಮೇಲೆ ಸೆಸ್ ಹಾಕಿ ನಮಗೆ ಪರಿಹಾರ ಕೊಡಿ ಎಂದು ಸಲಹೆ ನೀಡಿದ್ದೇವೆ. ಸಚಿವ ಕೃಷ್ಣಭೈರೇಗೌಡ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರೇ ಈಗ ಎಂಟು ರಾಜ್ಯಗಳ ಆರ್ಥಿಕ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಸೆಪ್ಟೆಂಬರ್ 3 ಮತ್ತು 4 ರಂದು ನಡೆಯಲಿರುವ ಸಭೆಯಲ್ಲಿ ಇದನ್ನು ಪ್ರಸ್ತಾಪ ಮಾಡಲಿದ್ದಾರೆ ಎಂದರು.
ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ಬಿಜೆಪಿ ಯಾವಾಗ ಧ್ವನಿ ಎತ್ತಿದ್ದಾರೆ?:
ಜಿಎಸ್‌ಟಿ ವಿಚಾರವಾಗಿ ರಾಜ್ಯದ ಸಚಿವರು ಹಾಗೂ ಸಂಸದರು ನಿಯೋಗ ತರಳಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಬಿಜೆಪಿಯ ಸಂಸದರು ಎಂದಿಗೂ ಇದನ್ನು ಒತ್ತಾಯಿಸುವುದಿಲ್ಲ. ಕರ್ನಾಟಕಕ್ಕೆ 11950 ಕೋಟಿಗಳು ನಷ್ಟವಾಯಿತು. ಬಿಜೆಪಿ ಸಂಸದರು ಈ ಬಗ್ಗೆ ಮಾತನಾಡಿಯೇ ಇಲ್ಲ. ಧರ್ಮಸ್ಥಳಕ್ಕೆ ಧರ್ಮಯಾತ್ರೆ ಕೈಗೊಂಡಿದ್ದಾರೆ. ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ಯಾವಾಗ ಮಾತನಾಡಿದ್ದಾರೆ? ಧರ್ಮಸ್ಥಳದ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಸಮನಾಗಿ ಆಸ್ತಿ ನೋಂದಣಿ ಹೆಚ್ಚಳ:
ಆಸ್ತಿ ನೋಂದಣಿ ಶುಲ್ಕ ಹೆಚ್ಚಳವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಸಮಾನವಾಗಿ ಶೇಕಡ ಒಂದರಷ್ಟನ್ನು ಹೆಚ್ಚಿಸಲಾಗಿದೆ ಎಂದರು.
ಧರ್ಮಸ್ಥಳ ಪ್ರಕರಣ:ಬೇರೆ ತನಿಖೆ ಅಗತ್ಯವಿಲ್ಲ:
ಧರ್ಮಸ್ಥಳದ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂಬ ಬಿಜೆಪಿ ಒತ್ತಾಯವಿರುವ ಬಗ್ಗೆ ಮಾತನಾಡಿ ಬಿಜೆಪಿ ಅಧಿಕಾರದಲ್ಲಿದ್ದು, ಸಿಬಿಐ ಗೆ ಯಾವ ಪ್ರಕರಣವನ್ನು ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು. ಎಸ್.ಐ.ಟಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ತನಿಖೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ ಎಂದರು. ಬೇರೆ ತನಿಖೆ ಅಗತ್ಯವಿಲ್ಲ ಎಂದು ನಾನು ಭಾವಿಸಿದ್ದೇನೆ ಎಂದರು.
ಧರ್ಮಸ್ಥಳ: ಸತ್ಯ ತಿಳಿಯಬೇಕಿದೆ:
ತನಿಖೆ ನಡೆಯುವಾಗ ಎಲ್ಲಾ ಪಕ್ಷಗಳು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿರುವ ಬಗ್ಗೆ ಮಾತನಾಡಿ ಧರ್ಮದ ಪರವಾಗಿ ಯಾತ್ರೆ ಮಾಡುತ್ತಿದ್ದು, ದೂರಿನ ಆಧಾರದ ಮೇಲೆ ಸತ್ಯವನ್ನು ತಿಳಿಯಬೇಕಾಗಿದೆ ಎಂದರು.
Related Articles
Thank you for your comment. It is awaiting moderation.
Comments (0)