ನೊಂದಣಿ ಮಾಡಿರುವ ರೈತರ ಜೋಳ ಖರೀದಿಸಲು ಆಹಾರ ಸಚಿವರಿಗೆ ಮನವಿ ಸಲ್ಲಿಸಿದ ರೈತರ ನಿಯೋಗ
- by Suddi Team
- June 3, 2025
- 70 Views
ಬೆಂಗಳೂರು:ಬೆಂಗಳೂರಿನ ನಗರದ ವಸಂತನಗರದಲ್ಲಿರುವ ಆಹಾರ ಭವನದಲ್ಲಿ ರಾಯಚೂರು ಜಿಲ್ಲೆಯ ರೈತ ಮುಖಂಡರ ನಿಯೋಗದೊಂದಿಗೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಸಭೆಯನ್ನು ನಡೆಸಿದರು.
ಶಾಸಕ ಬಸವಣಗೌಡ ಬಾದರ್ಲಿ ಅವರ ನೇತೃತ್ವದಲ್ಲಿ ರೈತರ ನಿಯೋಗವು ಇಂದು ಸಚಿವರನ್ನು ಭೇಟಿ ಮಾಡಿ ಚರ್ಚಿಸಿತು.ಮುಂಗಾರು ಮತ್ತು ಹಿಂಗಾರಿನಲ್ಲಿ ರೈತರು ಹೆಚ್ಚಾಗಿ ಜೋಳ ಬೆಳೆಯುವ ಕಾರಣದಿಂದ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದರೆ ರೈತರಿಗೆ ಅನುಕೂಲಕರ ವಾಗುತ್ತದೆ ಎಂದು ಸಭೆಯಲ್ಲಿ ಮುಖಂಡರು ಪ್ರಸ್ಥಾಪಿಸಿದರು.
ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆಗೆ ಈಗಾಗಲೇ ಕೇಂದ್ರ ಸರ್ಕಾರದ ಗರಿಷ್ಠ ಮಿತಿಯನ್ನೂ ಮೀರಿದ್ದು ಇನ್ನೂ ಎಂಎಸ್ ಪಿ ಯೋಜನೆಯಡಿ ಸರ್ಕಾರಕ್ಕೆ ನೀಡಲು ನೋಂದಣಿ ಮಾಡಿದ ರೈತರ ಹೆಚ್ವುವರಿ ಜೋಳವನ್ನು ಖರೀದಿಸಲು ಮುಂದಿನ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ಆಯುಕ್ತ ವಾಸಿ ರೆಡ್ಡಿ ವಿಜಯ ಜೋತ್ನಾ, ಆಹಾರ ನಿಗಮ ನಿರ್ದೇಶಕ ಚಂದ್ರಕಾಂತ್ ಹಾಗೂ ರೈತ ಮುಖಂಡರಾದ ಹನುಮನಗೌಡ, ರಾಜೇಶ್ ಪಾಟೇಲ್, ಮಲ್ಲೇಶ್ ಗೌಡ, ಉಪಸ್ಥಿತರಿದ್ದರು
Related Articles
Thank you for your comment. It is awaiting moderation.


Comments (0)