ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಹಾವೇರಿ: ಪ್ರಜಾಪಭುತ್ತದ ಯಶಸ್ಸು ನ್ಯಾಯಾಂಗ ವ್ಯವಸ್ಥೆಯ ಮೇಲೆ ಇದೆ. ನಾವೆಲ್ಲರೂ ಸೇರಿ ಇದನ್ನು ಗೌರವಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಇಂದು ಹಾವೇರಿಯ ಜಿಲ್ಲಾ ನ್ಯಾಯವಾದಿಗಳ ಸಂಘದ ಕಟ್ಟಡದಲ್ಲಿ ಜಿಲ್ಲಾ ನ್ಯಾಯಾಂಗ ಹಾವೇರಿ, ಲೋಕೋಪಯೋಗಿ ಇಲಾಖೆ, ಹಾವೇರಿ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಅಂಚೆ ಕಛೇರಿ ಹಾವೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನೂತನ ಅಂಚೆ ಕಛೇರಿ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ, ಮಾತನಾಡಿದರು.
ಹಾವೇರಿಯಲ್ಲಿ ಅತ್ಯಂತ ಅವಶ್ಯಕತೆ ಇರುವ ಅಂಚೆ ಕಚೇರಿ ಉದ್ಘಾಟನೆಯಾಗುತ್ತಿರುವುದು ನಾವೆಲ್ಲರೂ ಸಂತೋಷ ಪಡುವ ವಿಚಾರ. ಆಧುನೀಕರಣ, ತಂತ್ರಜ್ಞಾನ ಹೊಸದಾಗಿ ಬಂದಿದ್ದರೂ ಕೂಡ ಅಂಚೆಗೆ ತನ್ನದೆ ಆದ ಮಹತ್ವ ಇದೆ. ನೀವು ಯಾರಿಗಾದರೂ ನೊಟೀಸ್ ಕಳುಹಿಸಿದರೆ ಅದರ ಕಾನೂನು ಮಾನ್ಯತೆ ಅಂಚೆ ಪತ್ರದ ಮೇಲೆ ಇರುತ್ತದೆ. ಇದು ಎಲ್ಲರಿಗೂ ಬಹಳ ಉಪಯುಕ್ತವಾಗಿದೆ. ಇದನ್ನು ಎಲ್ಲರೂ ಸದುಪಯೋಗ ಪಡೆಸಿಕೊಳ್ಳುವ ವಿಶ್ವಾಸ ಇದೆ ಎಂದರು.
ಎಐ ಬಂದ ಮೇಲೆ ನಮ್ಮ ಬದುಕು ಇನ್ನಷ್ಟು ಬದಲಾವಣೆಯಾಗಿದೆ. ಈ ಸಂದರ್ಭದಲ್ಲಿ ನಮ್ಮ ಮೌಲ್ಯಗಳು ಬದಲಾವಣೆಯಾಗದಂತೆ ನೋಡಿಕೊಳ್ಳುವುದು ಮುಖ್ಯ ಮೌಲ್ಯಗಳು ಅಂದರೆ, ಧಾರ್ಮಿಕ, ಸಾಮಾಜಿಕ ಮೌಲ್ಯಗಳು ಅಷ್ಟೇ ಅಲ್ಲ. ನ್ಯಾಯಾಂಗದ ಮೌಲ್ಯ ಕೂಡ ಸಾತ್ವಿಕವಾಗಿರಬೇಕು. ನ್ಯಾಯಾಂಗ ತನ್ನದೇ ಆದ ಇತಿಹಾಸ ಹೊಂದಿದೆ. ಮಾನವನ ಬೆಳವಣಿಗೆಗೆ ನ್ಯಾಯ, ನೀತಿ, ಧರ್ಮ ಎನ್ನುವಂಥದ್ದು ಜೊತೆ ಜೊತೆಗೆ ಬೆಳೆಯುತ್ತದೆ. ಒಂದು ವ್ಯವಸ್ಥಿತವಾಗಿರುವ ಸಮಾಜ, ಶಾಂತಿಯುತವಾಗಿರುವ ಪರಿಸರ, ಅಭಿವೃದ್ಧಿಶೀಲವಾಗಿರುವ ರಾಷ್ಟ್ರ ಇರಬೇಕಾದರೆ ನ್ಯಾಯಾಂಗ ಮುಖ್ಯ. ಸತ್ಯದ ಪರೀಕ್ಷೆ ಮತ್ತು ಅದರ ಪರಿಣಾಮ ನ್ಯಾಯದ ಮೇಲೆ ನಿಂತಿದೆ. ನ್ಯಾಯ ನೀತಿ ಧರ್ಮದಲ್ಲಿ ನ್ಯಾಯ ಬಹಳ ಶ್ರೇಷ್ಠ ಯಾಕೆಂದರೆ ಯಾವಾಗ, ಎಲ್ಲಿ ಅನ್ಯಾಯ ಆಗುತ್ತದೆಯೋ ಅಲ್ಲಿ ನ್ಯಾಯ ಸಿಗಬೇಕು. ಆದರ್ಶಪ್ರಾಯ ಸಮಾಜದಲ್ಲಿ ನಮ್ಮ ಆಧುನಿಕ ಸಮಾಜದಲ್ಲಿ ನೈಸರ್ಗಿಕ ಕಾನೂನು ಮತ್ತು ಮಾನವ ಲಾದಲ್ಲಿ ವ್ಯತ್ಯಾಸ ಇಷ್ಟೆ ನೈಸರ್ಗಿಕ ಕಾನೂನಿನಲ್ಲಿ ನೀವು ಸತ್ಯ ಹೇಳಿದರೆ ನಿಮಗೆ ಪುಣ್ಯ ಬರುತ್ತದೆ. ಮಾನವ ನಿರ್ಮಿತ ಕಾನೂನಿನಲ್ಲಿ ಸುಳ್ಳು ಹೇಳಿದರೆ ಈ ಶಿಕ್ಷೆ ಅಂತ ಇರುತ್ತದೆ. ಈ ಎರಡರ ಮಧ್ಯ ನಮ್ಮೆಲ್ಲರ ಕರ್ತವ್ಯ ಎರಡನ್ನೂ ನಮ್ಮ ನಡೆ ನುಡಿಯಿಂದ ಹತ್ತಿರ ತರುವ ಪಯತ್ನ ಮಾಡಬೇಕು. ನಮ್ಮ ನ್ಯಾಯಾಲಯಗಳು ಯಾವಾಗ ನ್ಯಾಯಸಮ್ಮತವಾಗಿ ನಡೆದುಕೊಳ್ಳುತ್ತವೆಯೋ ಆಗ ನ್ಯಾಯಾಂಗದ ಕೀರ್ತಿ ಎತ್ತರಕ್ಕೆ ಏರುತ್ತದೆ ಎಂದು ಹೇಳಿದರು.
ತಂತಜ್ಞಾನ ಬದಲಾವಣೆಯಾದಂತೆ ಅಪರಾಧ ಹೆಚ್ಚಾಗುತ್ತದೆ. ಒಂದು ಮಾತಿದೆ. ಆಲ್ವೇಸ್ ಕ್ರೈಮ್ ಲೀಡ್ಸ್ ದ ಲಾ, ಆದರೆ, ಅಪರಾಧ ಕಾನೂನು ಮೀರಿ ಹೋಗದಂತೆ ನೋಡಿಕೊಳ್ಳಬೇಕು. ನ್ಯಾಯಾಂಗ ವ್ಯವಸ್ಥೆ ಅದನ್ನು ನಿಯಂತ್ರಣ ಮಾಡುವ ಶಕ್ತಿಹೊಂದಿದೆ. ಈ ದೃಷ್ಟಿಯಿಂದ ನೀವು ಮಾಡುವ ಕಾಯಕ ಬಹಳ ಮಹತ್ವ ಪಡೆದಿದೆ. ಪ್ರಜಾಪಭುತ್ತದ ಯಶಸ್ಸು ನ್ಯಾಯಾಂಗ ವ್ಯವಸ್ಥೆಯ ಮೇಲೆ ಇದೆ. ನಾವೆಲ್ಲರೂ ಸೇರಿ ಇದನ್ನು ಗೌರವಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಒಂದು ಕಾಲದಲ್ಲಿ ಮೊದಲು ಯಾರ ಬಳಿ ಭೂಮಿ ಇತ್ತೊ ಅವರು ಜಗತ್ತು ಆಳುತ್ತಿದ್ದರು. ನಂತರ ಯಾರ ಬಳಿ ಬಿಜಿನೆಸ್ಸು, ತಾಕತ್ತು ಇತ್ತೊ ಅವರು ಜಗತ್ತು ಆಳಿದರು. ಈಗ ಇಪ್ಪತ್ತೊಂದನೆ ಶತಮಾನದಲ್ಲಿ ಯಾರ ಬಳಿ ಜ್ಞಾನ ಇದೆಯೋ ಅವರು ಜಗತ್ತನ್ನು ಆಳುತ್ತಾರೆ. ಒಂದು ಸಮೀಕ್ಷೆಯಲ್ಲಿ ಬಿಲ್‌ಗೇಟ್ ಮತ್ತು ಬಿಲ್ ಕ್ಲಿಂಟನ್ ನಡುವೆ ಯಾರು ಪ್ರಸಿದ್ದರು ಅಂತ ಸ್ಪರ್ಧೆ ನಡೆದಾಗ ಬಿಲ್ ಗೇಟ್‌ಗೆ ಜಯ ಸಿಕ್ಕಿತು. ಈಗ ತಂತ್ರಜ್ಞಾನ ಬಂದ ಮೇಲೆ ಪೇಪರ್ ಬಳಕೆ ಕಡಿಮೆಯಾಗಿದೆ. ಸಂಸತ್ತಿನಲ್ಲಿ ಈಗ ಪೇಪರ್ ಬಳಕೆ ಕಡಿಮೆಯಾಗಿದೆ. ಹಾವೇರಿ ತನ್ನದೇ ಆದ ಪರಂಪರೆಹೊಂದಿದೆ. ಪ್ರಸಿದ್ಧ ವಕೀಲರು ಇಲ್ಲಿ ಆಗಿ ಹೋಗಿದ್ದಾರೆ. ನಾವೆಲ್ಲ ಆ ಪರಂಪರೆ ಉಳಿಸಿಕೊಂಡು ಹೋಗೋಣ. ನಾನು ಶಿಗ್ಗಾವಿಗೆ ಒಂದು ಕೋರ್ಟ್ ಬೇಕು ಎಂದು ಹೇಳಿದೆ. ಅವರು ರಾಣೆಬೆನ್ನೂರಿನ ಕೋರ್ಟ್‌ಗೆ ಸಹಾಯ ಕೇಳಿದರು ಖಂಡಿತ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ, ಹಾವೇರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿರಾದಾರ ದೇವಿಂದ್ರಪ್ಪ ಎನ್, ಅಂಚೆ ಅಧೀಕ್ಷಕರಾದ ಮಂಜುನಾಥ ಜಿ ಹುಬ್ಬಳ್ಳಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಹೆಚ್ ಜತ್ತಿ, ಕಾರ್ಯದರ್ಶಿಗಳಾದ ಪಿ.ಎಸ್ ಹೆಬ್ಬಾಳ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ನಿಂಗನಗೌಡ ಎನ್ ಪಾಟೀಲ್ ಸೇರಿದಂತೆ ಪ್ರಮುಖರು ಹಾಗೂ ವಕೀಲರು ಉಪಸ್ಥಿತರಿದ್ದರು.
Comments (0)