ದಸರಾ ಉತ್ಸವದಂತೆ ಕಾವೇರಿ ಆರತಿಯೂ ವಿಶ್ವವಿಖ್ಯಾತ ಹೊಂದಬೇಕು; ಎನ್. ಚಲುವರಾಯಸ್ವಾಮಿ
- by Suddi Team
- September 26, 2025
- 81 Views

ಮಂಡ್ಯ:ಜಂಬೂ ಸವಾರಿ ಮೂಲಕ ಮೈಸೂರು ದಸರಾ ಉತ್ಸವ ವಿಶ್ವವಿಖ್ಯಾತವಾಗಿದ್ದು, ಇಂದಿನಿಂದ ಆರಂಭಗೊಂಡಿರುವ ಕಾವೇರಿ ಆರತಿಯನ್ನೂ ವಿಶ್ವವಿಖ್ಯಾತವಾನ್ನಾಗಿಸಬೇಕು ಎನ್ನುವುದು ನಮ್ಮ ಕನಸು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಸಾಂಕೇತಿಕ ಕಾವೇರಿ ಆರತಿ ಉದ್ಘಾಟಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಉತ್ತರ ಭಾಗದಲ್ಲಿ ಹೇಗೆ ಗಂಗಾ ಆರತಿ ನಡೆಯುತ್ತದೆ ಹಾಗೆ ನಮ್ಮ ದಕ್ಷಿಣ ಭಾಗದಲ್ಲಿ ಕಾವೇರಿ ನಡೆಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಕಾವೇರಿ ಆರತಿ ಯೋಜನೆಯಿಂದ ಅನೇಕ ಯುವಕರಿಗೆ ಉದ್ಯೋಗ ಅವಕಾಶ ದೊರೆಯಲಿದೆ ಮತ್ತು ಅನೇಕ ಪ್ರವಾಸಿಗರನ್ನು ಆಕರ್ಷಸಲಿದೆ. ಮುಂದಿನ ದಿನಗಳಲ್ಲಿ ಪ್ರತಿ ವರ್ಷ ಕಾವೇರಿ ನಡೆಸಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾವೇರಿ ಮಾತೆಯನ್ನು ಧಾರ್ಮಿಕವಾಗಿ ಗೌರವಸಲು ಕಾವೇರಿ ಆರತಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಮೈಸೂರಿನಿಂದ ತಮಿಳುನಾಡಿನವರೆಗೂ ಕುಡಿಯುವ ನೀರಿನಿಂದ ಹಿಡಿದು ಕೃಷಿ ಹಾಗೂ ಇತರೆ ಜೀವನೋಪಾಯಕ್ಕೆ ಅನುಕೂಲವಾಗುತ್ತಿರುವ ನಮ್ಮ ರಾಜ್ಯದ ಹೆಮ್ಮೆ ಕಾವೇರಿ ನದಿಗೆ ಆರತಿ ಸಲ್ಲಿಸಿ ಗೌರವಿಸಲಾಗುತ್ತಿದೆ ಎಂದರು.
ಪ್ರಾರಂಭಿಕವಾಗಿ ಈ ಭಾರಿ ಕಾವೇರಿ ಆರತಿ ನಡೆಸಿದ್ದು ಸಮಸ್ಯೆಗಳ ಪರಿಹಾರದ ನಂತರ ಪ್ರತಿವರ್ಷ ವಿಜೃಂಭಣೆಯಿಂದ ಕಾವೇರಿ ಆರತಿ ನಡೆಸಲಾಗುವುದು. ಪ್ರತಿಯೊಬ್ಬರೂ ಸಹಕರಿಸಿ ಕನ್ನಡ ಜೀವನಾಡಿ ಕಾವೇರಿ ಮಾತೆಯನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
Related Articles
Thank you for your comment. It is awaiting moderation.
Comments (0)