ಹುಬ್ಬಳ್ಳಿಯಲ್ಲಿ ಮಟೀರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ಸ್ಥಾಪನೆ ಹೆಮ್ಮೆಯ ವಿಷಯ; ಬೊಮ್ಮಾಯಿ
- by Suddi Team
- July 12, 2025
- 46 Views

ಹುಬ್ಬಳ್ಳಿ: ಉತ್ತರ ಕರ್ನಾಟಕದ ಕೈಗಾರಿಕಾಭಿವೃದ್ಧಿಯಲ್ಲಿ ಹುಬ್ಬಳ್ಳಿ ಧಾರವಾಡ ಕೈಗಾರಿಕೋದ್ಯಮಿಗಳ ಪಾತ್ರ ಬಹಳ ಇದೆ. ಹುಬ್ಬಳ್ಳಿಯಲ್ಲಿ ಮಟೀರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ಸ್ಥಾಪನೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪಾಯ ಪಟ್ಟಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ ಕರ್ನಾಟಕ ಮಟೀರಿಯಲ್ ಟೆಸ್ಟಿಂಗ್ ರಿಸರ್ಚ್ ಸೆಂಟರ್ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾವೆಲ್ಲ ಬಹಳ ದಿನಗಳಿಂದ ಅಪೇಕ್ಷೆ ಪಟ್ಟಂತಹ ಒಂದು ಕಟ್ಟಡ ಮಟೀರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ಉದ್ಘಾಟನೆಯಾಗುತ್ತಿರುವ ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಒಂದು ಸಂಸ್ಥೆ ಬೆಳೆಯಬೇಕಾದರೆ ಅದರ ಹಿಂದೆ ಬಹಳಷ್ಟು ಜನರ ಪರಿಶ್ರಮ ಇರುತ್ತದೆ. ಸತತ ಪ್ರಯತ್ನದ ಫಲವಾಗಿ ಇಂತಹ ಸಂಸ್ಥೆ ಕಟ್ಟಲು ಸಾಧ್ಯ. ಮಟಿರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಲ್ಯಾಬ್ ವಿಶೇಷವಾಗಿದೆ. ಕಾಮನ್ ಟೆಸ್ಟಿಂಗ್ ಭಾರತದಲ್ಲಿ ಇನ್ನೂ ಬೆಳೆಯಬೇಕು. ಚೀನಾದಲ್ಲಿ ಟೆಸ್ಟಿಂಗ್ ಲ್ಯಾಬ್ ಹೆಚ್ಚಿಗೆ ಇವೆ. ಇಂತಹ ಟೆಸ್ಟಿಂಗ್ ಲ್ಯಾಬ್ಗಳು ಇದ್ದರೆ ಉದ್ಯಮಿಗಳು ಉದ್ಯಮ ಸ್ಥಾಪಿಸಿ ಬೆಳೆಯಬಹುದು. ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಇದು ಇರುವುದು.ನಮಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಟೆಸ್ಟಿಂಗ್ ಲ್ಯಾಬ್ ಬಹಳ ಅವಶ್ಯಕತೆ ಇತ್ತು. ನಾನು ಮುಖ್ಯಮಂತ್ರಿಯಾದಾಗ ಎಂ.ಕೆ. ಪಾಟೀಲ ಅವರು ಬಹಳ ಒತ್ತಾಯ ಮಾಡಿದ್ದರು. ಈಗ ಕೈಗಾರಿಕರಣ ಬಹಳ ಆಗಿದೆ. ಸಣ್ಣ ಸೌಲಭ್ಯದಲ್ಲಿ ನಮ್ಮ ಕೈಗಾರಿಕೋದ್ಯಮಿಗಳು ಬಹಳ ಅದ್ಭುತ ಸಾಧನೆ ಮಾಡಿದ್ದಾರೆ. ವಿಶ್ವ ಮಟ್ಟದ ಉತ್ಪನ್ನಗಳನ್ನು ನೀಡಿದ್ದಾರೆ. ಇಂಜನಿಯರಿಂಗ್ ಮತ್ತು ಎಲೆಕ್ಟ್ರಿಕ್, ಅಟೋಮೊಬೈಲ್ ಇರಬಹುದು. ವಾಲ್ನಲ್ಲಿರಬಹುದು ಎಲ್ಲದರಲ್ಲಿಯೂ ವಿಶ್ವ ದರ್ಜೆಯ ಉತ್ಪನ್ನ ನೀಡಿದ್ದಾರೆ. ಉತ್ತರ ಕರ್ನಾಟಕದ ಕೈಗಾರಿಕೋದ್ಯಮ ಬೆಳವಣಿಗೆ ಹುಬ್ಬಳ್ಳಿ ಕೈಗಾರಿಕೋದ್ಯಮಿಗಳ ಪಾತ್ರ ಬಹಳ ಇದೆ ಎಂದರು.
ಹು-ಧಾ ದೊಡ್ಡ ಭವಿಷ್ಯ ಇದೆ:
ಹುಬ್ಬಳ್ಳಿ ಧಾರವಾಡಕ್ಕೆ ಬಹಳ ದೊಡ್ಡ ಭವಿಷ್ಯ ಇದೆ. ಹುಬ್ಬಳ್ಳಿ ಧಾರವಾಡದಲ್ಲಿ ಸಮಗ್ರವಾಗಿ ಅಭಿವೃದ್ಧಿಯಾಗಲು ಇಂದಿನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರಣ. ಹುಬ್ಬಳ್ಳಿ ಧಾರವಾಡದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಸಿಎಸ್ಆರ್ ಫಂಡ್ನಿಂದ ಆಗಿದೆ. ಸುಮಾರು 700 ಕೋಟಿ ರೂ. ಸಿಎಸ್ಆರ್ ಫಂಡ್ ತಂದಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾಡಿದ್ದಾರೆ. ನಮ್ಮ ತಂದೆ ಮೊದಲು ವಿಮಾನ ನಿಲ್ದಾಣ ಸ್ಥಾಪನೆಗೆ ತೀರ್ಮಾನ ಮಾಡಿದ್ದರು. ಈಗ ಅಂತಾರಾಷ್ಟ್ರೀಯ ವಿಮಾನಗಳು ಬರಲು ಅವಕಾಶ ಇದೆ. ಇದೆಲ್ಲ ಮಾಡಲು ನೈಪುಣ್ಯತೆ ಮತ್ತು ಪರಿಶ್ರಮ ಮುಖ್ಯ ಅದು ಪ್ರಲ್ಹಾದ್ ಜೋಶಿ ಅವರ ಬಳಿ ಇದೆ. ಹುಬ್ಬಳ್ಳಿ ರೈಲು ನಿಲ್ದಾಣ ವಿಶ್ವ ಮಟ್ಟಕ್ಕೆ ಏರಿಸಿದ್ದಾರೆ. ಧಾರವಾಡಕ್ಕೆ ಐಐಟಿ ತಂದಿದ್ದಾರೆ. ಅದರಲ್ಲಿ ಟೆಕ್ನಾಲಜಿ ಬರುತ್ತದೆ. ಅದು ಕೈಗಾರಿಕೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಸಮಗ್ರ ಹುಬ್ಬಳ್ಳಿ ಅಭಿವೃದ್ಧಿಯ ಶ್ರೇಯಸ್ಸು ಪ್ರಲ್ಹಾದ್ ಜೋಶಿಯವರಿಗೆ ಸಲ್ಲಬೇಕು ಎಂದರು.
Related Articles
Thank you for your comment. It is awaiting moderation.
Comments (0)