ಕುಮಾರಸ್ವಾಮಿ ಅಂದ್ರೆ ವಚನ ಭ್ರಷ್ಟತೆ, ಅವಕಾಶವಾದಿಗೆ ಮತ್ತೊಂದು ಹೆಸರು: ತೇಜಸ್ವಿನಿ
- by Suddi Team
 - June 30, 2018
 - 612 Views
 
ದಾವಣಗೆರೆ: ಕುಮಾರಸ್ವಾಮಿ ಎಂದರೆ ವಚನಭ್ರಷ್ಟತೆ ಹಾಗು ಅವಕಾಶವಾದಿಗೆ ಮತ್ತೊಂದು ಹೆಸರು ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದ ಬೆಳ್ಳೂಡಿಯಲ್ಲಿರುವ ಕಾಗಿನೆಲೆ ಕನಕ ಗುರುಪೀಠಕ್ಕೆ ತೇಜಸ್ವಿನಿ ಗೌಡ ಭೇಟಿ ನೀಡಿದ್ರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿ ನನ್ನ ರಾಜಕೀಯ ಜೀವನದ ಎರಡನೆ ಇನ್ನಿಂಗ್ಸ್ ಆರಂಭಿಸುತ್ತಿದ್ದೇನೆ ಅದಕ್ಕೆ ಎಲ್ಲಾ ಮಠಾಧೀಶರ ಆರ್ಶೀವಾದ ಪಡೆಯುತ್ತಿದ್ದೇನೆ ಎಂದು ಮಠದ ಭೇಟಿಯ ಕಾರಣವನ್ನು ತಿಳಿಸಿದ್ರು.
ಮುಖ್ಯಮಂತ್ರಿ ಕುಮಾರಸ್ವಾಮಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ತೇಜಸ್ವನಿ ಗೌಡ ವಾಗ್ದಾಳಿ ಕುಮಾರಸ್ವಾಮಿ ಎಂದರೆ ವಚನಭ್ರಷ್ಟತೆ,ಅವಕಾಶವಾದಿಗೆ ಮತ್ತೊಂದು ಹೆಸರು.ಅಧಿಕಾರಕ್ಕರ ಬಂದ 24 ಗಂಟೆಯೊಳಗೆ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ರು. ಆದ್ರೆ ಕುಮಾರಸ್ವಾಮಿ ಈಗ ಏನು ಮಾಡುತ್ತಿದ್ದಾರೆ.ಅವರಿಗೆ ಕುರ್ಚಿ ಮುಖ್ಯ ಕುರ್ಚಿಗೋಸ್ಕರ ಏನು ಬೇಕಾದ್ರು ಮಾಡ್ತಾರೆ ಎಂದು ಟೀಕಿಸಿದ್ರು.
ರಾಜ್ಯದ ರೈತರು ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ ಆದರೆ ಸರ್ಕಾರಕ್ಕೆ ಅದರ ಪರಿವೇ ಇಲ್ಲ, ಸರ್ಕಾರ ಇನ್ನು ಟೇಕ್ ಆಪ್ ಆಗಿಲ್ಲ , ಯಾವಾಗ ಬೇಕಾದರು ಬಿದ್ದುಹೋಗಬಹುದು ಕುಮಾರಸ್ಚಾಮಿಯವರ ಮುಖವಾಡ ಕಳಚುವ ಕೆಲಸವನ್ನು ರಾಜ್ಯದ ಜನರು ಶೀಘ್ರ ಮಾಡುತ್ತಾರೆ.ರಾಜ್ಯದ ಜನರಿಗೆ ಅನಿಶ್ಚಿತತೆ ಕಾಡುತ್ತಿದೆ.ಗಟ್ಟಿ ಸರ್ಕಾರ ಕೊಟ್ಟಂತಹ ಹೆಗ್ಗಳಿಕೆ ನಮ್ಮ ರಾಜ್ಯಕ್ಕಿದೆ.ಆದರೆ ಈ ಬಾರಿ ರಾಜ್ಯದ ಜನರಿಗೆ ದೌರ್ಭಾಗ್ಯ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)