ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ಗೆ ಬರ್ತ್ ಡೇ ಸಂಭ್ರಮ…ಸಿದ್ದವಾಗುತ್ತಿದೆ ಕನಸುಗಾರನ ಮತ್ತೊಂದು ಕನಸು

ಬೆಂಗಳೂರು: ಕನ್ನಡ ಚಿತ್ರರಂಗದ ಕನಸುಗಾರ ವಿ. ರವಿಚಂದ್ರನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 59 ವಸಂತಗಳನ್ನು ಪೂರೈಸುತ್ತಿರುವ ರವಿಮಾಮ ಲಾಕ್ ಡೌನ್ ಕಾರಣದಿಂದ ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ

ಸಿನಿಮಾವನ್ನೇ ಬದುಕಾಗಿಸಿಕೊಂಡಿರುವ ರವಿಮಾಮನ ಸಿನಿ ಪ್ರಯೋಗ ಪ್ರೇಮಲೋಕದಿಂದ ಆರಂಭಗೊಂಡು ರಣಧೀರ,ಅಂಜದಗಂಡು,ಶಾಂತಿಕ್ರಾಂತಿ,ರಾಮಾಚಾರಿ,ಏಕಾಂಗಿ,ಮಲ್ಲ,ಅಪೂರ್ವ ಹೀಗೆ ಸಾಲು ಸಾಲಾಗಿ ಬೆಳ್ಳಿ ಪರದೆ ಮೇಲೆ ಬಂದಿದ್ದು ಪ್ರಯೋಗ ಇನ್ನೂ ನಡೆಯುತ್ತಲೇ ಇದೆ ಸಿನಿಮಾ ಗೆಲ್ಲಲಿ ಸೋಲಲಿ ತಲೆಕೆಡಿಸಿಕೊಳ್ಳದ ರಣಧೀರ ಅಂದುಕೊಂಡ ರೀತಿ ಚಿತ್ರ ಮಾಡುತ್ತಾರೆ ಅಂದುಕೊಂಡ ರೀತಿ ಚಿತ್ರ ಬರಲಿಲ್ಲ ಎಂದರೆ ಆ ಸಿನಿಮಾ ನಿಲ್ಲಿಸಿಬಿಡುತ್ತಾರೆ ಅದಕ್ಕೆ ಮಂಜಿನ ಹನಿ ಉದಾಹರಣೆ.

ಸದ್ಯ ರವಿ ಬೋಪಣ್ಣ ಚಿತ್ರ ಸಂಪೂರ್ಣ ಮುಕ್ತಾಯಗೊಂಡಿದ್ದು ಇನ್ನೇನು ಬಿಡುಗಡೆಯ ಸನಿಹದಲ್ಲಿದೆ ಇದೊಂದು ರೀತಿಯ ಪತ್ತೇದಾರಿ ಸಿನಿಮಾವಾಗಿದ್ದು ಹೊಸ ಪ್ರಯೋಗ ಮಾಡಿದ್ದಾರೆ ರವಿಚಂದ್ರನ್.ಇನ್ನೂ ರಾಜೇಂದ್ರ ಪೊನ್ನಪ್ಪ ಚಿತ್ರ ಅರ್ಧ ಚಿತ್ರೀಕರಣಗೊಂಡಿದ್ದು ಲಾಕ್ಡೌನ್ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಂಡಿದೆ ಈ 2 ಚಿತ್ರದಲ್ಲಿ ರವಿಚಂದ್ರನ್ ಬಿಜಿಯಾಗಿದ್ದಾರೆ.

ಕಳೆದ ಬಾರಿ ಮಗಳ ಮದುವೆ ಎನ್ನುವ ಕಾರಣಕ್ಕೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ರವಿಮಾಮ ಈ ಬಾರಿ ಕೊರೋನಾ ಕಾರಣದಿಂದ ಅಭಿಮಾನಿಗಳಿಂದ ದೂರವು ಉಳಿದಿದ್ದಾರೆ. ಆದರೂ ಅಭಿಮಾನಿಗಳಿಗಾಗಿ ಹೊಸ ಕನಸು ಕಂಡಿದ್ದಾರೆ ರವಿಚಂದ್ರನ್. ಆ್ಯಫ್ ಮೂಲಕ ಅಭಿಮಾನಿಗಳನ್ನು ತಲುಪಲು ಸಿದ್ಧತೆ ನಡೆಸುತ್ತಿದ್ದಾರೆ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕಕ್ಕೆ ಮುಂದಾಗಿದ್ದಾರೆ.ಈಶ್ವರಿ ಸಂಸ್ಥೆಯ ಹೆಜ್ಜೆಗುರುತುಗಳು ಸೇರಿದಂತೆ ತಮ್ಮ ಸಿನಿ ಬದುಕಿನ ಸಂಪೂರ್ಣ ಮಾಹಿತಿ ಈ ಆ್ಯಪ್ ನಲ್ಲಿ ಇರಲಿದೆ ಇಷ್ಟು ಮಾತ್ರವಲ್ಲದೇ ತಮ್ಮದೇ ಓಟಿಟಿ ಪ್ಲಾಟ್ ಫಾರಂ ಅನ್ನು ಹೊಂದಲು ರವಿಚಂದ್ರನ್ ಚಿಂತಿಸುತ್ತಿದ್ದಾರೆ ಇದಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ.

ಏನೇ ಆಗಲಿ ಕನ್ನಡ ಚಿತ್ರರಂಗದ ಶೋ ಮ್ಯಾನ್,ಸದಾ ಹೊಸ ಹೊಸ ಪ್ರಯೋಗ ಮಾಡುವ ಕನಸುಗಾರನಿಗೆ ಸುದ್ದಿಲೋಕ ತಂಡದಿಂದ ಹುಟ್ಟುಹಬ್ಬದ ಶುಭಾಶಯಗಳು…

Related Articles

Comments (0)

Leave a Comment