ಈ ಬಾರಿಯೂ ಅಭಿಮಾನಿಗಳ ಜೊತೆ ಕ್ರೇಜಿಸ್ಟಾರ್ ಹುಟ್ಟುಹಬ್ಬ ಆಚರಣೆ ಇಲ್ಲ

ಬೆಂಗಳೂರು: ಕಳೆದ ಬಾರಿ ಮಗಳ ಮದುವೆ ಕಾರಣಕ್ಕೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದ ಕನಸುಗಾರ ವೀರಸ್ವಾಮಿ ರವಿಚಂದ್ರನ್ ಈ ಬಾರಿ ಕೋವಿಡ್ ಕಾರಣಕ್ಕೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ನನ್ನ ಪ್ರೀತಿಯ ಅಭಿಮಾನಿಗಳಿಗೆ ಈ ನಿಮ್ಮ ಪ್ರೀತಿಯ ಕನಸುಗಾರನ ಕಡೆಯಿಂದ ಒಂದು ಸಂದೇಶ ಈ ವರ್ಷದ ಹುಟ್ಟು ಹಬ್ಬವನ್ನು ನನ್ನ ಕಡೆಯಿಂದ ಆಚರಿಸುತ್ತಿಲ್ಲ.ಕಾರಣ ಕರೋನ ರೋಗದ ಸಂಬಂಧ ಸರಕಾರ ವಿಧಿಸಿದ ಲಾಕ್ ಡೌನ್ ನಿಯಮವನ್ನು ಪಾಲಿಸೋಣ ದೂರದ ಊರಿನಿಂದ ಬರುವ ನನ್ನ ಪ್ರೀತಿಯ ಅಭಿಮಾನಿಗಳಿಗೆ ತಿಳಿಸುವುದೇನಂದರೆ ಜನನಿಬಿಡ ಪ್ರದೇಶದಲ್ಲಿ ಸ್ವಲ್ಪ ದಿನ ಸೇರದೆ ನಿಮ್ಮ ನಿಮ್ಮ ಮನೆ ಕೆಲಸದ ಸ್ಥಳದಲ್ಲಿ ಅಂತರ ಕಾಯ್ದುಕೊಂಡು ಇರಿ..ನಿಮ್ಮ ಪ್ರೀತಿಯ ಕನಸುಗಾರ ಎಂದು ಸಂದೇಶದ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Related Articles

Comments (0)

Leave a Comment