ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಕೊಡಗು:ಕರಾವಳಿ ಹಾಗು ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಗಾಳಿ ಕಡಿಮೆಯಾಗದ ಕಾರಣ ಶಾಲಾ ಕಾಲೇಜುಗಳಿಗೆ ರಜೆಯನ್ನು ಮತ್ತೆರಡು ದಿನ ವಿಸ್ತರಿಸಿ ಜಿಲ್ಲಾಡಳಿತ ಆದೇಶಿಸಿದೆ.
ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು ನದಿ ತೋರೆಗಳು ತುಂಬಿ ಹರಿಯುತ್ತಿವೆ, ಕರಾವಳ ಹಾಗು ಕೊಡಗಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಕೇಂದ್ರ ನೀಡಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಅಂಗನವಾಡಿ ಸೇರಿದಂತೆ ಶಾಲಾ ಕಾಲೇಜುಗಳಿಗೆ ರಜೆಯನ್ನು ಶನಿವಾರದವರೆಗೆ ವಿಸ್ತರಿಸಲಾಗಿದೆ.
ಈಗಾಗಲೇ ಒಂದು ಬಾರಿ ರಜೆ ವಿಸ್ತರಣೆ ಮಾಡಿದ್ದ ಜಿಲ್ಲಾಎಳಿತ ಇದೀಗ ಎರಡನೇ ಬಾರಿ ರಜೆ ವಿಸ್ತರಿಸಿದ್ದು ಶನಿವಾರದವರೆಗೆ ರಜೆ ಘೋಷಿಸಿದೆ ಹಾಗಾಗಿ ಸೋಮವಾರದವರೆಗೆ ಕೊಡಗು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳು ಮುಚ್ಚಿರಲಿವೆ.
Comments (0)