ಕಾವೇರಿ ಆರತಿ ವೀಕ್ಷಿಸುವವರಿಗೆ ಗುಡ್ ನ್ಯೂಸ್: ಟೋಲ್, ನಿಲುಗಡೆ ಶುಲ್ಕ, ಬೃಂದಾವನ ಪ್ರವೇಶ ಶುಲ್ಕ ಎಲ್ಲಾ ಫ್ರೀ

ಮಂಡ್ಯ: ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 2 ರವರೆಗೆ ಕೆ.ಆರ್.ಎಸ್ ಬೃಂದಾವನಕ್ಕೆ ಆಗಮಿಸುವ ಸಾರ್ವಜನಿಕರ ವಾಹನಗಳಿಗೆ ಟೋಲ್,ಪಾರ್ಕಿಂಗ್ ಹಾಗೂ ಬೃಂದಾವನ ವೀಕ್ಷಣೆಯ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ‌ ರಮೇಶ ಬಾಬು ಬಂಡಿಸಿದ್ದೇಗೌಡ ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್ 26 ರ ಶುಕ್ರವಾರ ಸಂಜೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ “ಕಾವೇರಿ ಆರತಿ” ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ.ಕಾರ್ಯಕ್ರಮದ ವೀಕ್ಷಣೆಗೆ ಪ್ರತಿ ನಿತ್ಯ 8 ರಿಂದ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ರಾಜ್ಯ, ಹೊರರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ನಿರೀಕ್ಷೆ ಇದ್ದು, ಬರುವ ಎಲ್ಲ ಸಾರ್ವಜನಿಕರಿಗೂ ಸರ್ಕಾರ ಟೋಲ್ ಶುಲ್ಕ,ಬೃಂದಾವನ ಪ್ರವೇಶ ಶುಲ್ಕ,ಪಾರ್ಕಿಂಗ್ ಶುಲ್ಕವನ್ನು ವಿಧಿಸದಿರುವ ನಿರ್ಧಾರ ಕೈಗೊಂಡಿದೆ.

Related Articles

Comments (0)

Leave a Comment