ಕೆರೆಗಳ ವೈಭವ ಮರುಳಿ ತರುವುದೇ ನಮ್ಮ ಆದ್ಯ ಕರ್ತವ್ಯ;ಡಿಕೆ ಶಿವಕುಮಾರ್

ಬೆಂಗಳೂರು: ಕೆರೆಗಳು ನಮ್ಮ ಬೆಂಗಳೂರಿನ ಜೀವನಾಡಿ,ನಮ್ಮ ಕೆರೆಗಳ ವೈಭವ ಮರುಳಿ ತರುವುದೇ ನಮ್ಮ ಆದ್ಯ ಕರ್ತವ್ಯ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.ಆ ಮೂಲಕ ರಾಜಧಾನಿಯ ಕರೆಗಳಿಗೆ ಹೊಸ ರೀತಿಯಲ್ಲಿ ಕಾಯಕಲ್ಪದ ಭರವಸೆ ನೀಡಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ನಮ್ಮ ಕೆರೆಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಬೆಂಗಳೂರಿಗೆ ಕೆರೆಗಳು ಜೀವನಾಡಿ ಇದ್ದಂತೆ. ಅದಕ್ಕಾಗಿ, ಕೆರೆಗಳನ್ನು ಉಳಿಸಲು ಬಿಬಿಎಂಪಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಕೆರೆಗಳಿಗೆ ಕಲುಷಿತ ನೀರು ಸೇರದಂತೆ ತಡೆಯಲು, ಒತ್ತುವರಿ ತೆರವುಗೊಳಿಸಲು ಹಾಗೂ ಹೂಳೆತ್ತಿ ಪುನರುಜ್ಜೀವನಗೊಳಿಸಲು ಬಿಬಿಎಂಪಿ ಮುಂದಾಗಿದೆ. ಈ ಮೂಲಕ ನಮ್ಮ ಕೆರೆಗಳ ವೈಭವ ಮರುಳಿ ತರುವುದೇ ನಮ್ಮ ಆದ್ಯ ಕರ್ತವ್ಯ ಎಂದಿದ್ದಾರೆ.ಕೆರೆಗಳು ನಮ್ಮ ನಗರದ ಹೆಮ್ಮೆ, ಜೊತೆಗೆ ನಮ್ಮ ಉತ್ತಮ ಭವಿಷ್ಯಕ್ಕೆ ಆಶಾಕಿರಣವಾಗಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 183 ಕೆರೆಗಳಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಕೆರೆಗಳ ಜಾಗ ಮತ್ತು ರಾಜಕಾಲುವೆಗಳ ಸರ್ವೇ ಕಾರ್ಯ ನಡೆಯುತ್ತಿದೆ. ಒತ್ತುವರಿಗಳನ್ನು ತೆರವುಗೊಳಿಸಲು ನೋಟಿಸ್ ನೀಡಲಾಗುತ್ತಿದೆ. ಕಂದಾಯ ಇಲಾಖೆ ಮತ್ತು ಪೊಲೀಸರ ಸಹಾಯದಿಂದ ಒತ್ತುವರಿಯಾಗಿದ್ದ ಜಾಗವನ್ನು ವಶಪಡಿಸಿಕೊಳ್ಳಲಾಗುತ್ತಿದೆ.

ಇನ್ನು ಕೆರೆಗಳ ಜಾಗದಲ್ಲಿ ಸೌರ ಶಕ್ತಿ ಆಧಾರಿತ ವಿದ್ಯುತ್‌ ಉತ್ಪಾದಿಸಲು ಬಿಬಿಎಂಪಿ ಚಿಂತನೆ ನಡೆಸಿದೆ ಅದಕ್ಕಾಗಿಯೇ ರಾಜಧಾನಿಯ ದೊಡ್ಡಬೊಮ್ಮಸಂದ್ರ ಮತ್ತು ರಾಚೇನಹಳ್ಳಿ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ಈ ಯೋಜನೆಗೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅನುಮೋದನೆಯನ್ನೂ ನೀಡಿದೆ.ಜುಲೈನಲ್ಲಿ’ತೇಲುವ ಸೌರ ವಿದ್ಯುತ್‌ ಫಲಕ (ಪ್ಯಾನೆಲ್‌)’ಗಳನ್ನು ಅಳವಡಿಸಿ, ವಿದ್ಯುತ್‌ ಉತ್ಪಾದನೆಯ ಸಾಧ್ಯಾಸಾಧ್ಯತೆ ಕುರಿತು ಚರ್ಚಿಸಿ ಈಗ ಅಂತಿಮೆ ನಿರ್ಧಾರಕ್ಕೆ ಬಂದಿದೆ.ಬಿಬಿಎಂಪಿ ಹವಾಮಾನ ಕ್ರಿಯಾಕೋಶ (ಕ್ಲೈಮೃಟ್‌ ಆ್ಯಕ್ಷನ್‌ ಸೆಲ್‌)ದ ಮೂಲಕ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

Related Articles

Comments (0)

Leave a Comment