ಎ ಖಾತಾ ಮಾಡಿಸಿಕೊಳ್ಳುವವರಿಗೆ ಗುಡ್ ನ್ಯೂಸ್ ನೀಡಿದ ಬಿಬಿಎಂಪಿ..!
- by Suddi Team
- July 29, 2025
- 52 Views

ಬೆಂಗಳೂರು: ಬಿ ಖಾತಾವನ್ನು ಎ ಖಾತಾಗಳಾಗಿ ಪರಿವರ್ತಿಸಲು ಆತುರ ಬೇಡ,ಬಿಬಿಎಂಪಿ ಕಚೇರಿಗೆ ಅಲೆದಾಡುವುದೂ ಬೇಡ,ಮಧ್ಯವರ್ತಿಗಳನ್ನೂ ಸಂಪರ್ಕಿಸಬೇಡಿ, ಸಧ್ಯದಲ್ಲೇ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಎ-ಖಾತಾಗಳನ್ನು ನೀಡುವ ಸಲುವಾಗಿ ಕರ್ನಾಟಕ ಸರ್ಕಾರ ಹೊರಡಿಸುವ ಆದೇಶ(GO)ದ ಪ್ರಕಾರ, ನಾಗರಿಕರು ಎ-ಖಾತಾಗೆ ಹೇಗೆ ಅರ್ಜಿ ಸಲ್ಲಿಸಬಹುದು ಮತ್ತು ಪಡೆದುಕೊಳ್ಳಬಹುದು? ಎನ್ನುವ ಗೊಂದಲ ಬೆಂಗಳೂರು ಜನತೆಯಲ್ಲಿದೆ ಯಾರೂ ಕೂಡ ಗೊಂದಲಗೊಳ್ಳುವುದು ಬೇಡ, ಆನ್ಲೈನ್ ವ್ಯವಸ್ಥೆಯನ್ನು ಸುಮಾರು 15 ದಿನಗಳಲ್ಲಿ ಆರಂಭಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ.
ಯಾರೂ ಕೂಡ ಆತುರಕ್ಕೆ ಒಳಗಾಗಬೇಡಿ ದಯವಿಟ್ಟು ಕಾಯಿರಿ, ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದ ನಂತರ ನಾಗರಿಕರು
(i) ಬಿ-ಖಾತಾವನ್ನು ಎ-ಖಾತಾಕ್ಕೆ ಪರಿವರ್ತನೆ ಮಾಡುವುದುಅ ಥವಾ (ii) ಈಗ ಯಾವುದೇ ಖಾತಾ ಇಲ್ಲದಿದ್ದರೆ ಹೊಸ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು ಎಂದು ಮನವಿ ಮಾಡಿದ್ದಾರೆ.
ಯಾವುದೇ ಬಿಬಿಎಂಪಿ ಕಚೇರಿಗೆ ಹೋಗಬೇಡಿ ಮತ್ತು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ ಯಾರಿಗೂ ಲಂಚ ನೀಡಬೇಡಿ ಆನ್‌ಲೈನ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು, ಎಲ್ಲವೂ ಸರಳವಾಗಿ ಆಗಲಿದೆ ಎಂದುಎಂ ಮಹೇಶ್ವರ ರಾವ್ ತಿಳಿಸಿದ್ದಾರೆ.
Related Articles
Thank you for your comment. It is awaiting moderation.
Comments (0)