ಶತಮಾನ ಪೂರೈಸಿದ ಬೆಂಗಳೂರಿನ ಕೃಷ್ಣ ಭವನ ಹೋಟೆಲ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶತಮಾನ ಪೂರೈಸಿದ ಹೋಟೆಲ್ ಇಂದಿಗೂ ಸಕ್ರೀಯವಾಗಿ ನಡೆದುಕೊಂಡು ಬರುತ್ತಿದೆ.ಅದೇ ಹಳೆಯ ವರ್ಚಸ್ಸನ್ನು ಇನ್ನೂ ಉಳಿಸಿಕೊಂಡು ಬಂದಿರುವುದು ವಿಶೇಷ.

ಹೌದು, ಬೆಂಗಳೂರಿನ ಬಳೆಪೇಟೆಯಲ್ಲಿನ ಪ್ರಸಿದ್ಧ ಶ್ರೀ ಉಡುಪಿ ಕೃಷ್ಣ ಭವನ್ ಹೋಟೆಲ್ ಗೆ ನೂರು ವರ್ಷಗಳು(1926 -2026)  ಪೂರೈಸಿದ ಸಂಭ್ರಮ ಮನ ಮಾಡಿದೆ. ಈ ಕುರಿತು ಮಾಜಿ ಸಚಿವ ಸುರೇಶ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ. 1981 ರಲ್ಲಿ ನಾನು ವಕೀಲ ವೃತ್ತಿ ಪ್ರಾರಂಭ ಮಾಡಿದಾಗ ನನ್ನ ಸೀನಿಯರ್ ಪ್ರಸಿದ್ಧ ವಕೀಲರಾಗಿದ್ದ ಶ್ರೀ ಎಸ್ ವಿ ರಾಘವಾಚಾರ್ ರವರ ಕಚೇರಿ ಎದುರುಗಡೆಯೇ ಈ ಹೋಟೆಲ್ ಇದ್ದದ್ದು.  ಸಾಗು ಮಸಾಲೆ ದೋಸೆಯಿಂದ ಹಿಡಿದು  ಅನೇಕ ರೀತಿಗಳಲ್ಲಿ ತನ್ನದೇ ಆದ  ಅಚ್ಚುಕಟ್ಟಾದ ವೈಶಿಷ್ಟ್ಯಗಳಿಂದ ಅಪಾರ ಗ್ರಾಹಕರ ಬೆಂಬಲವನ್ನು ಪಡೆದುಕೊಂಡಿರುವ ಒಂದು ರೀತಿಯ Iconic ಹೋಟೆಲ್ ಇದು ಎಂದಿದ್ದಾರೆ.

ಇಂದು ಆ ಹೋಟೆಲ್ ನ ಸಿಬ್ಬಂದಿ ನೂರು ವರ್ಷದ ಸಂಭ್ರಮದ ಈ ಸಂದರ್ಭದಲ್ಲಿ ನನ್ನನ್ನು ಪ್ರೀತಿಯಿಂದ ಹೋಟೆಲ್ ಫಲಕದ ಬಳಿ ನಿಲ್ಲಿಸಿ ಫೋಟೋ ತೆಗೆದುಕೊಂಡರು ಎಂದು ಶತಮಾನ ಪೂರೈಸಿದ ಹೋಟೆಲ್ ನ ಕಾರ್ಯವೈಖರಿಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

Related Articles

Comments (0)

Leave a Comment