ಹು.ಧಾ. ಮ.ಪಾಲಿಕೆ ಉಪ ಆಯಕ್ತರಾಗಿ ಅನುರಾಧಾ ವಸ್ತ್ರದ ಅಧಿಕಾರ ಸ್ವೀಕಾರ

ಹುಬ್ಬಳ್ಳಿ:  ಕರ್ನಾಟಕ ಆಡಳಿತ ಸೇವೆ (ಕೆ.ಎ.ಎಸ್. ) ಅಧಿಕಾರಿ ಅನುರಾಧಾ ವಸ್ತ್ರದ ಅವರು ಅವಳಿ ನಗರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾಗಿ ಇಂದು ಅಧಿಕಾರ ಸ್ವೀಕರಿಸಿದರು.

ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ, ಖಾನಾಪುರ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಯಾಗಿ, ನಗರದ  ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವರಾಗಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ   ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ, ವಿಜಯಪುರ ಜಿಲ್ಲೆ ಇಂಡಿ  ಉಪವಿಭಾಗಾಧಿಕಾರಿಯಾಗಿ ಮತ್ತು ನಿಕಟಪೂರ್ವದಲ್ಲಿ ಇಂಡಿಯ  ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಸೇವೆಸಲ್ಲಿಸಿದ್ದಾರೆ. ಮಂಗಳವಾರ ಶಂಕರಾನಂದ ಬನಶಂಕರಿ ಅವರಿಂದ  ಪ್ರಭಾರ ಸ್ವೀಕರಿಸಿದರು.

Related Articles

Comments (0)

Leave a Comment