ರಾಜ್ಯದಲ್ಲಿ ಇಂದು 4120 ಕರೋನಾ ಕೇಸ್: 63772 ಕ್ಕೆ ತಲುಪಿದ ಸೋಂಕಿತರ ಸಂಖ್ಯೆ
- by Suddi Team
- July 19, 2020
- 112 Views
ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷೆ ಮೀರಿ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು ಇಂದು ದಾಖಲೆಯ 4120 ಹೊಸ ನೋವೆಲ್ ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ,91 ಸೋಂಕಿತರು ಒಂದೇ ದಿನ ಮೃತರಾಗಿದ್ದು ಸಾವಿನ ಸಂಖ್ಯೆಯಲ್ಲಿಯೂ ಪ್ರತಿ ದಿನ ನೂರರ ಗಡಿ ಸಮೀಪವೇ ಇರುವುದು ರಾಜ್ಯದಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ.
ಸಧ್ಯ 39370 ಆಕ್ಟೀವ್ ಕೇಸ್ ಗಳಿದ್ದು, ಸೋಂಕಿತರ ಸಂಖ್ಯೆ 63772 ಕ್ಕೆ ತಲುಪಿದೆ.1331ಸೋಂಕಿತರು ಈವರೆಗೆ ಮೃತರಾಗಿದ್ದಾರೆ. 579 ಸೋಂಕಿತರು ಯುಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು 1290 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದವರ ಸಂಖ್ಯೆ 23065 ಆಗಿದೆ.
ಲಾಕ್‌ಡೌನ್ ಜಾರಿಯಾಗಿದ್ದರೂ ಬೆಂಗಳೂರಿನಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ ಇಂದು ಒಂದೇ ದಿನ ನಗರದಲ್ಲಿ 2156 ಸೋಂಕಿತರು ಪತ್ತೆಯಾಗಿದ್ದಾರೆ, ಅರ್ಧದಷ್ಟು ಪ್ರಮಾಣದಲ್ಲಿ ಬೆಂಗಳೂರಲ್ಲೇ ಸೋಂಕಿತರು ಪತ್ತೆಯಾಗುತ್ತಿರುವುದು ಹೊಸ ಆತಂಕ ಸೃಷ್ಟಿಸಿದೆ.
ಜಿಲ್ಲಾವಾರು ಕೋವಿಡ್ ವಿವರ:
Related Articles
Thank you for your comment. It is awaiting moderation.



Comments (0)