ಗಲ್ಲಿ ಹುಡುಗರ ಜೊತೆ ಮಸ್ತ್ ಕ್ರಿಕೆಟ್ ಆಡಿದ ಸಚಿನ್: ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ?
- by Suddi Team
- June 25, 2026
- 4 Views
ಬೆಂಗಳೂರು:ಸೋಶಿಯಲ್ ಮೀಡಿಯಾದಲ್ಲಿ ಈಗ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರದ್ದೇ ಹವಾ! ಹೌದು, ಮಾಸ್ಟರ್ ಬ್ಲಾಸ್ಟರ್ ಮುಂಬೈನ ರಸ್ತೆಯೊಂದರಲ್ಲಿ ಲೋಕಲ್ ಹುಡುಗರ ಜೊತೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಇಂಟರ್ನೆಟ್ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ.
ವಿಶ್ವ ಕ್ರಿಕೆಟ್ನ ಘಟಾನುಘಟಿ ಬೌಲರ್ಗಳನ್ನು ಬೆಂಡೆತ್ತಿ, ನೂರು ಅಂತರರಾಷ್ಟ್ರೀಯ ಶತಕ ಬಾರಿಸಿರುವ ಸಚಿನ್, ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮುದ್ದಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮುಂಬೈ ರಸ್ತೆಯಲ್ಲಿ ಹೋಗುತ್ತಿದ್ದ ಸಚಿನ್, ಅಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರನ್ನು ನೋಡಿ ಕಾರು ನಿಲ್ಲಿಸಿದ್ದಾರೆ. ಯಾವುದೇ ಹಮ್ಮು-ಬಿಮ್ಮಿಲ್ಲದೆ ರಸ್ತೆಗಿಳಿದು, ಯುವಕರ ಕೈಲಿದ್ದ ಪ್ಲಾಸ್ಟಿಕ್ ಬ್ಯಾಟ್ ಹಿಡಿದು ಮಸ್ತ್ ಆಗಿ ಬ್ಯಾಟಿಂಗ್ ಮಾಡಿದ್ದಾರೆ.
ನೆಟ್ಟಿಗರ ಕಮೆಂಟ್ಸ್ ಧೂಳ್!
“ನನ್ನ ಬದುಕಿನ ಅತ್ಯಂತ ಸಂತೋಷದ ಕ್ರಿಕೆಟ್ ನೆನಪುಗಳಿಗೆ ಎಂದಿಗೂ ಸ್ಕೋರ್ಕಾರ್ಡ್ ಇರಲಿಲ್ಲ…” ಎಂದು ಸಚಿನ್ ಕ್ಯಾಪ್ಷನ್ ಕೊಡುತ್ತಿದ್ದಂತೆ, ಇತ್ತ ನೆಟ್ಟಿಗರು ಕಮೆಂಟ್ ಬಾಕ್ಸ್ನಲ್ಲಿ ಧೂಳೆಬ್ಬಿಸುತ್ತಿದ್ದಾರೆ.
ಕ್ರೇಜಿಯಾಗಿ ಕಮೆಂಟ್ ಮಾಡಿರುವ ಅಭಿಮಾನಿಗಳು, “ಸಚಿನ್ ಸರ್, ನಿಮ್ಮ ಗಲ್ಲಿ ಕ್ರಿಕೆಟ್ನಲ್ಲಿ ಒನ್ ಪಿಚ್ ಕ್ಯಾಚ್ ಔಟ್ ಇತ್ತಾ?” ಎಂದು ಕೇಳಿದರೆ, ಇನ್ನೊಬ್ಬರು “ಲೆದರ್ ಬಾಲ್ನಲ್ಲಿ 100 ಸೆಂಚುರಿ ಹೊಡೆದ ದೇವರಿಗೆ ಟೆನ್ನಿಸ್ ಬಾಲ್ ಆಟ ಸಲೀಸು” ಎಂದು ಕೊಂಡಾಡಿದ್ದಾರೆ. ಇನ್ನು ಕೆಲವು ಅಭಿಮಾನಿಗಳು “ಸಚಿನ್ ಜೊತೆ ಆಡಿದ ಆ ಹುಡುಗರೇ ಅದೃಷ್ಟವಂತರು” ಎಂದು ಭಾವುಕರಾಗಿದ್ದಾರೆ.
ಕ್ರಿಕೆಟ್ನ ಗಾಡ್ ಸ್ವತಃ ಅಪ್ರೂವ್ ಮಾಡಿರುವ ಈ ವಿಡಿಯೋ ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದ ಟ್ರೆಂಡಿಂಗ್ ಲಿಸ್ಟ್ನಲ್ಲಿದೆ.
https://www.instagram.com/reel/DZ_4bhjT8FQ/?igsh=MXhhMGMzMGZ5NnVuag==
Related Articles
Thank you for your comment. It is awaiting moderation.


Comments (0)