ಅನುಪಮಾ ರಾಮಚಂದ್ರನ್ಗೆ ಸತತ ಎರಡನೇ ಬಾರಿ ವಿಶ್ವ ಮಹಿಳಾ ಸ್ನೂಕರ್ ಪ್ರಶಸ್ತಿ
- by Suddi Loka
- November 22, 2026
- 9 Views
ಇಂದೋರ್: ಭಾರತದ ಅನುಪಮಾ ರಾಮಚಂದ್ರನ್ ಅವರು ಐಬಿಎಸ್ಎಫ್ ವಿಶ್ವ ಮಹಿಳಾ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದಿದ್ದಾರೆ.
ಶನಿವಾರ ಇಂದೋರ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹಾಂಗ್ಕಾಂಗ್ನ ಸೋ ಮ್ಯಾನ್ ಯಾನ್ ಅವರನ್ನು 3-1 ಅಂತರದಿಂದ ಸೋಲಿಸಿ ಅನುಪಮಾ ಪ್ರಶಸ್ತಿಯನ್ನು ಉಳಿಸಿಕೊಂಡರು.

ಕಳೆದ ವರ್ಷ ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅನುಪಮಾ, ಈ ಬಾರಿ ತವರಿನ ಪ್ರೇಕ್ಷಕರ ಎದುರು ಮತ್ತೊಮ್ಮೆ ಚಾಂಪಿಯನ್ ಆಗಿದ್ದಾರೆ.
ಮೊದಲ ಫ್ರೇಮ್ನಲ್ಲಿ 16-58 ಅಂತರದಿಂದ ಸೋತರೂ ಎದೆಗುಂದದ ಅವರು, ನಂತರದ ಮೂರು ಫ್ರೇಮ್ಗಳನ್ನು ಸತತವಾಗಿ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.


Comments (0)