ಕ್ವೀನ್ಸ್ ಪ್ರೀಮಿಯರ್ ಲೀಗ್ 2.0; ಲೋಗೋ ಲಾಂಚ್ ಮಾಡಿದ ಮೋಹಕತಾರೆ ರಮ್ಯಾ

ಬೆಂಗಳೂರು: ಮೊದಲ ಆವೃತ್ತಿಯ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಬಹು ನಿರೀಕ್ಷಿತ ಕ್ವೀನ್ಸ್ ಪ್ರೀಮಿಯರ್ ಲೀಗ್ (QPL)2.0 ಲೋಗೋ ಅನಾವರಣಗೊಂಡಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಮಹಿಳಾ ಕ್ರೀಡಾಪಟುಗಳ ಸ್ಪರ್ಧೆಯ ಹವಾ ಸೃಷ್ಟಿಸಲು ವೇದಿಕೆ ಸಜ್ಜುಗೊಂಡಿದೆ.

ರಾಜ್ಯ ರಾಜಧಾನಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಕ್ವೀನ್ಸ್ ಪ್ರೀಮಿಯರ್ ಲೀಗ್ ದ್ವಿತೀಯ ಆವೃತ್ತಿಯ ‘ಕ್ರೀಡೋತ್ಸವ’ ಲೋಗೋವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಮೋಹಕತಾರೆ ರಮ್ಯಾ ಲೋಗೋ ಲಾಂಚ್ ಮಾಡಿದರು. ಕ್ಯೂಪಿಎಲ್ ಸ್ಥಾಪಕ ಮಹೇಶ್ ಗೌಡ, ನಟ ಪ್ರಮೋದ್ ಶೆಟ್ಟಿ, ಬಾಲಿವುಡ್ ನಟಿ ಎಲಿ ಎವ್ರಾಮ್ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಕ್ರೀಡಾಲೋಕ, ಫ್ಯಾಷನ್ ಜಗತ್ತು ಮತ್ತು ಚಲನಚಿತ್ರರಂಗದ ಗಣ್ಯರು ಹಾಜರಿದ್ದರು.

ಈ ವೇಳೆ ಮಾತನಾಡಿದ ನಟಿ ರಮ್ಯಾ, ತಮ್ಮ ಬಾಲ್ಯದ ದಿನಗಳ ಬಗ್ಗೆ ಮೆಲುಕು ಹಾಕಿದರು. ಬಡವ, ಶ್ರೀಮಂತ ಎನ್ನದೇ ಆಡೋ ಆಟ ಅಂದರೆ ಅದು ಕ್ರೀಡೆ. ನಾನು ಬಾಸ್ಕೆಟ್‌ ಬಾಲ್ ಪ್ಲೇಯರ್. ಅದರಲ್ಲಿ ನಾನು ಪ್ರವೀಣೆ. ನಾನು ಹೈಟ್ ಕಡಿಮೆ ಇದೀನಿ ಅಂತಾ ಅಲ್ಲ. ಸ್ಪೋರ್ಟ್ಸ್‌ಗೆ ಹೈಟ್ ಮ್ಯಾಟರ್ ಆಗೋದೇ ಇಲ್ಲ. ಅಪ್ಪು ಹಾಗೂ ನಾನು ಇಬ್ಬರು ಆರ್‌ಸಿಬಿ ತಂಡಕ್ಕೆ ರಾಯಭಾರಿ ಆಗಿದ್ದೆವು. ಈಗ ಕ್ಯೂಪಿಎಲ್ ರಾಯಭಾರಿ ಆಗಿದ್ದೇನೆ ಎಂದರು.

ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಕಾಣಿಸುತ್ತಿಲ್ಲ. ಈ ರೀತಿ ಸ್ಪೋರ್ಟ್ಸ್ ಹಮ್ಮಿಕೊಂಡರೆ ಎಲ್ಲರೂ ಒಟ್ಡಿಗೆ ಸೇರಲು ಸಹಕಾರಿಯಾಗಲಿದೆ. ಆಗಲಾದ್ರೂ ಒಗ್ಗಟ್ಟು ಕಾಣಿಸಬಹುದು ಎಂದು ಅಭಿಪ್ರಾಯಪಟ್ಟರು.

ಕ್ಯೂಪಿಎಲ್ ಮಹಿಳಾ ಕಲಾವಿದರ ಬೆಂಬಲಿಸಿ, ಅವರನ್ನು ಉತ್ತೇಜಿಸುತ್ತಿರುವ ರೀತಿ ನನಗೆ ತುಂಬ ಇಷ್ಟವಾಗಿದೆ. ಈ ವೇದಿಕೆಯ ಮೂಲಕ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಜತೆಗೆ ಮಹಿಳೆಯರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿತರಾಗಬೇಕು. ಇದು ನಮಗೆ ದೈಹಿಕವಾಗಿ ಆರೋಗ್ಯಕರವಾಗಿರುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಆನ್ಲೈನ್ ಗೇಮಿಂಗ್ ಹಾಗೂ ಸೋಷಲ್ ಮೀಡಿಯಾದಿಂದ ದೂರವಿರಲು ನೆರವಾಗುತ್ತದೆ. ಕ್ಯೂಪಿಎಲ್‌ನೊಂದಿಗೆ ನನ್ನ ಸಹಯೋಗ ಇರುವುದಕ್ಕೆ ನನಗೆ ಸಂತೋಷವಾಗಿದೆ ಎಂದರು.

ಪ್ರಮೋದ್ ಶೆಟ್ಟಿ ಮಾತನಾಡಿ, ಕ್ಯೂಪಿಎಲ್ ಎಂದರೆ ಕ್ರೀಡೆ ಒಂದೇ ಇಲ್ಲ. ಇದು ಗುರಿಯನ್ನು ಹೊಂದಿರುವ ಮನರಂಜನೆ. ಇದು ಚಲನಚಿತ್ರ ಕ್ಷೇತ್ರ ಮತ್ತು ಕಾರ್ಪೊರೇಟ್ ಜಗತ್ತನ್ನು ಒಂದು ವೇದಿಕೆಯಲ್ಲಿ ತಂದುಕೊಂಡು, ಫಿಟ್ನೆಸ್, ಮಹಿಳಾ ಸಬಲೀಕರಣ ಮತ್ತು ಚೈತನ್ಯಮಯ ಒಗ್ಗಟ್ಟು ಒದಗಿಸುತ್ತದೆ ಎಂದರು.

Related Articles

Comments (0)

Leave a Comment