ತೇಜಸ್ ಲಘು ಯುದ್ದ ವಿಮಾನದಲ್ಲಿ ಹಾರಾಟ ನಡೆಸಿದ ಪಿ.ವಿ ಸಿಂಧು!
- by Suddi Team
- February 23, 2019
- 147 Views
ಬೆಂಗಳೂರು: ದೇಸಿ ತಂತ್ರಜ್ಞಾನದ ಮೊದಲ ಲಘು ಯುದ್ದ ವಿಮಾನ ತೇಜಸ್ ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಹಾರಾಟ ನಡೆಸಿದ್ದು,ತೇಜಸ್ ನಲ್ಲಿ ಸಂಚರಿಸಿದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಏರ್ ಶೋದ ನಾಲ್ಕನೇ ದಿನದ ಥೀಮ್ ಮಹಿಳಾ ದಿನ ಹಾಗಾಗಿ ಇಂದಿನ ಶೋ ಹೈಲೈಟ್ ಪಿ.ವಿ ಸಿಂಧು.ಯಲಹಂಕ ವಾಯುನೆಲೆಗೆ ಬಂದ ಸಿಂಧೂ ಪೈಲೆಟ್ ದಿರಿಸು ಧರಿಸಿ ತೇಜಸ್ ಬಳಿ ಬಂದರು,ಭಾರತೀಯ ಹೆಮ್ಮೆಯ ಲಘು ಯುದ್ದ ವಿಮಾನವನ್ನು ಏರಿ ಜನರತ್ತಾ ಕೈಬೀಸುತ್ತಾ ಕಾಕ್ ಪೀಟ್ ನಲ್ಲಿ ಕುಳಿತರು, ಕೋ ಪೈಲಟ್ ಆಗಿ ತೇಜಸ್ ನಲ್ಲಿ 15 ನಿಮಿಷಗಳ ಕಾಲ ಹಾರಾಟ ನಡೆಸಿದರು.
ತೇಜಸ್ ನಲ್ಲಿ ಯಾವುದೇ ಸ್ಟಂಟ್ ಗಳನ್ನು ನಡೆಸದೇ ಸಾಧಾರಣ ಹಾರಾಟ ನಡೆಸಿದರೂ ಕೂಡ ಯುದ್ದ ವಿಮಾನದಲ್ಲಿನ ಹಾರಾಟ ನಿಜಕ್ಕೂ ಹೆಮ್ಮೆಯ ವಿಷಯ.ಇದೇ ಏರ್ ಶೋನಲ್ಲಿ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕೂಡ ಹಾರಾಟ ನಡೆಸಿದ್ದರು ಅದರ ಬೆನ್ನಲ್ಲೇ ಪಿ.ವಿ ಸಿಂಧೂ ಹಾರಾಟ ನಡೆಸಿದ್ದು ಗಮನಾರ್ಹ.
ಇನ್ನು ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಕೀರ್ತಿ ಕೂಡ ಸಿಂಧೂ ಅವರದ್ದಾಗಿದೆ.ತೇಜಸ್ ಲಘು ಯುದ್ದ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ಮಹಿಳಾ ಕ್ರೀಡಾಪಟು ಸಿಂಧೂ ಆಗಿದ್ದು,ತೇಜಸ್ ನಲ್ಲಿನ ಹಾರಾಟಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ತೇಜಸ್ ಯಾನ ರೋಮಾಂಚನ ಅನುಭವವಾಯಿತು,ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ,ತೇಜಸ್ ನಿಜವಾದ ಹೀರೋ ಎಂದು ತಮ್ಮ ಅನುಭವ ಹಂಚಿಕೊಂಡರು.
Related Articles
Thank you for your comment. It is awaiting moderation.


Comments (0)