ಯೂತ್ ಒಲಿಂಪಿಕ್ಸ್ನಲ್ಲಿ ವುಶು ಪದಕ ಗೆದ್ದ ಮೊದಲ ಭಾರತೀಯಳಾಗಿ ರಾಜಕುಮಾರಿ ಲಾಂಚೆನ್ಬಿ ಚಾನು ಇತಿಹಾಸ
- by Suddi Loka
- November 4, 2026
- 2 Views
ಡಾಕರ್: ಯೂತ್ ಒಲಿಂಪಿಕ್ಸ್ನಲ್ಲಿ ವುಶು ಕ್ರೀಡೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಣಿಪುರದ ರಾಜಕುಮಾರಿ ಲಾಂಚೆನ್ಬಿ ಚಾನು ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಡಾಕರ್ನಲ್ಲಿ ನಡೆದ ಮಹಿಳೆಯರ ಚಾಂಗ್ಕ್ವಾನ್ ಕಾಂಬೈನ್ಡ್ ವಿಭಾಗದಲ್ಲಿ ಅವರು ಕಂಚಿನ ಪದಕ ಗೆದ್ದಿದ್ದಾರೆ.
ಚಾನು ಒಟ್ಟು 18.039 ಅಂಕ ಗಳಿಸಿ ಮೂರನೇ ಸ್ಥಾನ ಪಡೆದರು. ಚಾಂಗ್ಕ್ವಾನ್ ವಿಭಾಗದಲ್ಲಿ 9.316 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದ ಅವರು, ಗುನ್ಶು ವಿಭಾಗದಲ್ಲಿ 8.723 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು.

ಈಜಿಪ್ಟ್ನ ಸೋಂಡೋಸ್ ಸೋನ್ಬೋಲ್ ಚಿನ್ನದ ಪದಕ ಗೆದ್ದರೆ, ವೆನೆಜುವೆಲಾದ ವಲೇರಿಯಾ ಡುಡಮೆಲ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಡಾಕರ್ ಯೂತ್ ಒಲಿಂಪಿಕ್ಸ್ನಲ್ಲಿ ಭಾರತ ಈವರೆಗೆ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಸೇರಿದಂತೆ ಒಟ್ಟು ಮೂರು ಪದಕಗಳನ್ನು ಗೆದ್ದಿದೆ. ಜೂಡೋದಲ್ಲಿ ಖುಷ್ಬು ರಾಜಕ್ಭಾಯ್ ಬೆಳ್ಳಿ ಪದಕ ಗೆದ್ದಿದ್ದರೆ, ಮಹಿಳೆಯರ 100 ಮೀಟರ್ ಫ್ರೀಸ್ಟೈಲ್ ಈಜಿನಲ್ಲಿ ಧಿನಿಧಿ ದೇಸಿಂಗು ಕಂಚಿನ ಪದಕ ಸಾಧನೆ ಮಾಡಿದ್ದಾರೆ.


Comments (0)