ರವಿ ಹಂಜ ಅವರಿಗೆ 2026ರ ಪ್ರತಿಷ್ಠಿತ ‘ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ ಘೋಷಣೆ
- by Suddi Team
- February 22, 2026
- 7 Views
ಬಾಳೆಹೊನ್ನೂರು: ನವ್ಯ ಸಾಹಿತ್ಯ ಲೋಕದ ಖ್ಯಾತ ಬರಹಗಾರ ಮತ್ತು ಅನುಭಾವಿ ಚಿಂತಕರಾದ ಶ್ರೀ ರವಿ ಹಂಜ ಅವರು 2026ನೇ ಸಾಲಿನ ಅತ್ಯುನ್ನತ ‘ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ವಿಶ್ವಧರ್ಮದ ಪ್ರತಿಪಾದಕರಾದ ಶ್ರೀ ಜಗದ್ಗುರು ರೇಣುಕ ಭಗವತ್ಪಾದರ ಸತ್ಯ ಶುದ್ಧ ತತ್ವಗಳನ್ನು ತಮ್ಮ ಸಾಹಿತ್ಯದ ಮೂಲಕ ಪಸರಿಸುತ್ತಿರುವ ರವಿ ಹಂಜ ಅವರ ಸುದೀರ್ಘ ಸೇವೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯಾಂಶಗಳು:
ದಿನಾಂಕ ಮತ್ತು ಸಮಯ: 01 ಮಾರ್ಚ್ 2026, ಭಾನುವಾರ.
ಸ್ಥಳ: ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ, ಬಾಳೆಹೊನ್ನೂರು.
ದಿವ್ಯ ಸಾನ್ನಿಧ್ಯ: ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರರಾದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು.
ಕಾರ್ಯಕ್ರಮದ ವಿಶೇಷತೆ: ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಶಿವಾದ್ವೈತ ಸಮಾವೇಶದ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿಯ ಸ್ವರೂಪ:
ಈ ಪುರಸ್ಕಾರವು ಒಂದು ಲಕ್ಷ ರೂಪಾಯಿ ನಗದು, ಕಲಾತ್ಮಕ ಕಂಚಿನ ಫಲಕ ಹಾಗೂ ವಿಶೇಷ ಸ್ಮರಣಿಕೆಯನ್ನು ಒಳಗೊಂಡಿದೆ.
ನಾಡಿನ ವಿವಿಧ ಮಠಾಧೀಶರು, ರಾಜಕೀಯ ಗಣ್ಯರು ಹಾಗೂ ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ನಡೆಯಲಿರುವ ಈ ಭವ್ಯ ಸಮಾರಂಭದಲ್ಲಿ ರವಿ ಹಂಜ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶ್ರೀಪೀಠದ ಪ್ರಕಟಣೆ ತಿಳಿಸಿದೆ.
ಪುರಸ್ಕೃತರ ಪರಿಚಯ:
ನಾಡಿನ ಜನತೆಗೆ ಚಿರಪರಿಚಿತರಾಗಿರುವ ದಾವಣಗೆರೆಯ ರವಿ ಹಂಜ್ ಅವರು ಪ್ರಾಜ್ಞ ಮನಸ್ಸಿನ ಚಿಂತಕರು ಮತ್ತು ವಿವೇಚನಾಶೀಲ ಬರಹಗಾರರಾಗಿದ್ದಾರೆ. ಸಧ್ಯ ಅಮೇರಿಕಾದ ಶಿಕಾಗೋ ನಿವಾಸಿಗಳಾದ ರವಿ ಹಂಜ್ ಅವರು ದಾವಣಗೆರೆಯಲ್ಲಿ ಪ್ರಾಥಮಿಕದಿಂದ ಪದವಿಯವರೆಗೆ ಶಿಕ್ಷಣ ಪೂರೈಸಿದರು. ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂ.ಸಿ.ಎ. ಪದವಿ, ಅಮೇರಿಕೆಯ ಹಾರ್ವಡ್್ರ ವಿಶ್ವವಿದ್ಯಾಲಯದಲ್ಲಿ ಡಿಪ್ಲೋಮಾ ಇನ್ ಮ್ಯಾನೇಜಮೆಂಟ್, ಶಿಕಾಗೋದ ಡಿ’ಪೌಲ್ ವಿಶ್ವವಿದ್ಯಾಲಯದಲ್ಲಿ ವೆಬ್ ಕಾಮರ್ಸ್ ವಿಷಯದಲ್ಲಿ ಡಿಪ್ಲೋಮಾ ಕೋರ್ಸ್ ಅಧ್ಯಯನ ಗೈದು ಅಮೇರಿಕಾ ಮೂಲದ ಬೆಂಗಳೂರಿನ ಡಿಜಿಟಲ್ ಎಕ್ಸಿಪೆಂಟ್ ಕಂಪೆನಿಯಲ್ಲಿ ಅಭಿಯಂತರರಾಗಿ ವೃತ್ತಿ ಆರಂಭಿಸಿದವರು. ಶಿಕಾಗೋನಲ್ಲಿ ಹೆಚ್ಚಿನ ಹುದ್ದೆಯೊಂದಿಗೆ ವೃತ್ತಿ ವರ್ಗಾವಣೆಗೊಂಡು ಪ್ರತಿಷ್ಠಿತ ಕಂಪನಿಗಳಲ್ಲಿ ದಕ್ಷತೆಯ ಕಾರ್ಯ ನಿರ್ವಹಿಸಿ, ಹಲವಾರು ಅತ್ಯತ್ತುಮ ಪ್ರಶಸ್ತಿ-ಪ್ರಶಂಸೆಗಳನ್ನು ಪಡೆದಿದ್ದಾರೆ. ರವಿಯವರು ವಿದೇಶದಲ್ಲಿ ನೆಲೆಸಿದ್ದರೂ ಸಹ ಮಾತೃಭೂಮಿಯ ಮೇಲೆ ಅಪಾರ ಭಕ್ತಿ, ಗೌರವದ ಭಾವನೆಗಳನ್ನು ಇರಿಸಿಕೊಂಡವರು. ತಾವು ಎಲ್ಲೇ ಇದ್ದರೂ ದೇಶಾಭಿಮಾನ, ಭಾಷಾಭಿಮಾನ ಮೆರೆದವರು. ತಮ್ಮ ವೃತ್ತಿ ಜೀವನದಲ್ಲಿ ಅನೇಕ ಕಥೆ, ಕಾದಂಬರಿಗಳ ಓದಿನ ಜೊತೆಗೆ ಪ್ರಾಚೀನ ಗ್ರಂಥಗಳ ಅಧ್ಯಯನಶೀಲರಾಗಿ ಅಲ್ಲಲ್ಲಿ ನಡೆಯುತ್ತಿದ್ದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಭೆ-ಸಮಾರಂಭಗಳಲ್ಲಿ ಪಾಲ್ಗೊಂಡು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದ ರವಿಯವರು ಕನ್ನಡದ ಕಂಪನ್ನು ಹೊರದೇಶದಲ್ಲೂ ಸೂಸುವಲ್ಲಿ ಯಶರಾದವರು, ಬೆಂಗಳೂರು ಮೂಲದ ಗಣಕಯಂತ್ರ ತಟ್ಟೆ ಸುನೀತಾ ಅವರನ್ನು ವರಿಸಿದ ರವಿ ಹಂಜ್ ಅವರು ಅನೇಕ ಉತ್ತಮೋತ್ತಮ ಕಾರ್ಯಗಳನ್ನು ಸಮಾಜಕ್ಕೆ ಎಲೆದುರೆಯ ಕಾಯಿಯಂತಿದ್ದು ಕೊಡುಗೆ ಕೊಟ್ಟವರು. ಸಧ್ಯ ಆಡಳಿತ ತಜ್ಞರಾಗಿ ಜೀವನ ನಡೆಸುತ್ತಿದ್ದಾರೆ. ಬರವಣಿಗೆಯನ್ನು ನವ್ವ ಮಾದರಿಯಲ್ಲಿ ರೂಪಿಸಿಕೊಂಡು ತಮ್ಮ ಅನನ್ಯಯುತ ವೈಚಾರಿಕತೆ, ವಿಡಂಬನೆ ಮತ್ತು ಸ್ಥಿತಪ್ರಜ್ಞೆಯ ಮುಖಾಂತರ ಅನೇಕ ಓದುಗರ ಮನ ಗೆದ್ದವರು. ನಿಷ್ಟುರ ನಡೆ, ಸಮಯಪ್ರಜ್ಞೆ, ನಿಸ್ವಾರ್ಥಯುತ ಲೇಪವನ್ನು ಹೊತ್ತು ಅನೇಕ ಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆಯುವುದರ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ನೆಟ್ಟವರು. ಸಂಶೋಧನಾತ್ಮಕ ಕೃತಿಗಳನ್ನು, ಆತ್ಮಕಥನವನ್ನು, ಅನುವಾದಿತ ಕೃತಿಗಳನ್ನು ರಚಿಸಿರುವ ಇವರು ತತ್ವಾದರ್ಶಗಳ ಹೆಜ್ಜೆಯಲ್ಲಿ ನಿಜದ ನಿಲುವನ್ನು ಬಿಂಬಿಸಿದವರು. ಇವರ ಹೂಯನ್‌ತಾಂಗನ ಮಹಾಪಯಣ ಎಂಬ ಕೃತಿಗೆ 2018 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯ ಗರಿ ಸಂದಿದೆ, ವೀರಶೈವ ಧರ್ಮದ ಮೂಲ ಸಿದ್ದಾಂತ ಮತ್ತು ಅದರ ಉದಾತ್ತ ಚಿಂತನೆಗಳನ್ನು ಜನಮಾನಸಕ್ಕೆ ತೀವ್ರತೆ ಮತ್ತು ತೀವ್ರತೆಗೆ ತಕ್ಕಂತೆ ನಿರೂಪಣೆ ಮಾಡಿದ್ದನ್ನು ಮರೆಯಲಾಗದು. ಚುಚ್ಚು ಮಾತುಗಳಿಗೆ, ತುಚ್ಛ ಮನಸ್ಸುಗಳಿಗೆ ತಮ್ಮ ಉಚ್ಛ ಅಕ್ಷರದ ಮೂಲಕವೇ ಸ್ವಚ್ಛತೆ ಮತ್ತು ಸ್ಪಷ್ಟತೆ ನೀಡುತ್ತ ಧಾರ್ಮಿಕ ರಂಗದಲ್ಲಿ ಹೊಸ ಸಂಚಲನ ಮೂಡಿಸಿರುವುದು ಇದರೊಳಗಿನ ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ. ಆಳವಾದ ಅಧ್ಯಯನ, ಪರಿಷ್ಕರಣೆ, ಸಂಶೋಧನೆ ಮತ್ತು ಪ್ರಸ್ತುತಪಡಿಸುವ ಪರಿ ವಿಭಿನ್ನವಾದರೂ ಸಹ ಮೂಲ ಬೇರನ್ನು ಮತ್ತೆ ಮತ್ತೆ ಗಟ್ಟಿಗೊಳಿಸುವುದೇ ಆಗಿರುತ್ತದೆ. ಸಮಷ್ಟಿ ಆಶಯದಲ್ಲಿ ಸಮಾಜಕ್ಕೆ ಸತ್ಯವನ್ನು ಬಿಚ್ಚಿಡುವ ಗಟ್ಟಿ ಗುಂಡಿಗೆಯ ಅನುಭಾವಿಗಳಾದ ಶ್ರೀ ರವಿ ಹಂಜ್ ಅವರು ಭವಿಷ್ಯತ್ತಿನಲ್ಲಿ ವೀರಶೈವ ಧರ್ಮದ ಚಿಂತನಾತ್ಮಕ ವಿಚಾರಧಾರೆಗಳನ್ನು ಮತ್ತು ತಾತ್ವಿಕ ವಿಷಯಗಳನ್ನು ತಮ್ಮ ಅಮೂಲ್ಯ ಬರವಣಿಗೆಯ ಮುಖಾಂತರ ನಾಡಿಗರಿಗೆ ಜಾಗೃತಿ ಮೂಡಿಸುವ ಸಂಕಲ್ಪ ಹೊಂದಿದವರಾಗಿದ್ದಾರೆ. ಶ್ರೀಯುತರ ಅತ್ಯುತ್ತಮ ಕ್ರಿಯಾಶೀಲತೆ, ಆಧ್ಯಾತ್ಮ ಕ್ರಮಬದ್ಧತೆ, ವಿವೇಚನಾಯುಕ್ತ ನಡೆಗಳನ್ನು ಮನಗಂಡ ಆನೇಕ ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ಪ್ರಶಸ್ತಿ, ಪದಕ, ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.
Related Articles
Thank you for your comment. It is awaiting moderation.


Comments (0)