ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ತುಮಕೂರು ದಸರಾ ಯಶಸ್ವಿಗೊಳಿಸಿ; ಡಾ.ಜಿ ಪರಮೇಶ್ವರ್
- September 11, 2025
- 0 Likes
ಮಾಲೂರು: ಸಮಾಜದ ಎಲ್ಲ ರಂಗಗಳಲ್ಲಿ ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಧರ್ಮ ಸಂಸ್ಕೃತಿಗಳ ಮೂಲವನ್ನು ಮರೆತರೆ ಅಪಾಯ ತಪ್ಪಿದ್ದಲ್ಲ, ಮಾನವೀಯ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ರಂಭಾಪುರಿ ಪೀಠದ 1008 ಜಗದ್ಗುರು ಪ್ರಸನ್ನರೇಣುಕ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಬೆಳ್ಳಾವಿ ಶ್ರೀ ಬೆಳ್ಳನಪುರಿ ವೀರಸಿಂಹಾಸನ ಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಮಠಾಧ್ಯಕ್ಷರಾದ ಮಹಾಂತ ಶ್ರೀಗಳವರ ಪಟ್ಟಾಧಿಕಾರದ ವರ್ಧಂತಿ ಮತ್ತು ಜನ್ಮ ದಿನೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ಧರ್ಮ ವೀರಶೈವ ಧರ್ಮ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಮಾನವನ ಜೀವನದ ವಿಕಾಸಕ್ಕೆ ಅಡಿಪಾಯ, ಧರ್ಮದ ದಶವಿಧ ಸೂತ್ರಗಳ ಪರಿಪಾಲನೆಯಿಂದ ಬದುಕು ಬಲಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಬೆಳ್ಳಾವಿ ಮಠದಲ್ಲಿ ಹಮ್ಮಿಕೊಂಡಿರುವುದು ಅಪಾರ ಸಂತಸವನ್ನುಂಟು ಮಾಡಿದೆ. ಇಂದಿನ ಬೆಳ್ಳಾವಿ ಮಠದ ಮಹಾಂತ ಶಿವಾಚಾರ್ಯ ಸ್ವಾಮಿಗಳು ಕ್ರಿಯಾಶೀಲ ಬದುಕು ಅಳವಡಿಸಿಕೊಂಡು ಭಕ್ತ ಸಮುದಾಯಕ್ಕೆ ಮಾರ್ಗದರ್ಶನ ಕೊಡುತ್ತಿರುವುದು ಹೆಮ್ಮೆಯ ಸಂಗತಿ. ಇಂದು ಅವರ ಪಟ್ಟಾಧಿಕಾರದ 39ನೇ ವರ್ಧಂತಿ ಹಾಗೂ 53ನೇ ಜನ್ಮ ದಿನೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಪ್ರಾಪ್ತವಾಗಿದೆ ಎಂದ ಶ್ರೀ ರಂಭಾಪುರಿ ಜಗದ್ಗುರುಗಳು ಮಹಾಂತ ಶ್ರೀಗಳಿಗೆ ಶಾಲು ಫಲ ಪುಷ್ಪ ಸ್ಮರಣಿಕೆ ನೀಡಿ ಆಶೀರ್ವದಿಸಿದರು.
ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜೀವನದ ಉನ್ನತಿಗೆ ಮತ್ತು ಪ್ರಗತಿಗೆ ಧರ್ಮ ದಿಕ್ಸೂಚಿಯಾಗಿದೆ. ಆದರ್ಶ ಜೀವನಕ್ಕೆ ಉತ್ತಮ ಚಿಂತನೆಗಳು ಮುಖ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆ ಸರ್ವ ಕಾಲಕ್ಕೂ ಅನ್ವಯಿಸುತ್ತವೆ ಎಂದರು.
ಬೆಳ್ಳಾವಿ ಮಠದ ಮಹಾಂತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮದ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಜೀವನದ ಉತ್ಕರ್ಷತೆಗೆ ಅಗತ್ಯವಾಗಿವೆ. ಅರಿವು ಆದರ್ಶಗಳಿಂದ ಮಾನವನ ಬದುಕು ಸಮೃದ್ಧಗೊಳ್ಳಬೇಕಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಶುಭಾಗಮನ ನಮ್ಮ ಬಾಳಿನ ಉನ್ನತಿಗೆ ಪ್ರೇರಕ ಶಕ್ತಿಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯರು, ಬಳ್ಳನಪುರ ಪಂಚಾಕ್ಷರಿ ಪಂಚಾಕ್ಷರಿ ಶಿವಾಚಾರ್ಯರು, ಗುಮ್ಮಳಾಪುರದ ಶಿವಾನಂದ ಶಿವಾಚಾರ್ಯರು, ರಾಜಾಪುರ ಡಾ.ರಾಜೇಶ್ವರ ಶಿವಾಚಾರ್ಯರು,ನಾಗಲಾಪುರದ ತೇಜೇಶಲಿಂಗ ಶಿವಾಚಾರ್ಯರು, ಹುಣಸಮಾರನ ಹಳ್ಳಿ ಗುರುನಂಜೇಶ್ವರ ಶಿವಾಚಾರ್ಯರು, ಗುರುವಿನಪುರದ ಜಗದೀಶ ಶಿವಾಚಾರ್ಯರು, ಕಲ್ಲುಬಾಳು ಮಠದ ಶಿವಾನಂದ ಶಿವಾಚಾರ್ಯರು ಉಪಸ್ಥಿತರಿದ್ದರು. ಡಾ. ಸಿ. ಸೋಮಶೇಖರ ಮೊದಲ್ಗೊಂಡು ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಶ್ರೀ ಮಠದ ಆವರಣದಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು. ಸಮಾರಂಭಕ್ಕೂ ಮುನ್ನ ಮಠದ ಹೆಬ್ಬಾಗಿಲಿನಿಂದ ಮಠದವರೆಗೆ ಸಾರೋಟ ಉತ್ಸವದ ಮೂಲಕ ಸಕಲ ವಾದ್ಯ ವೈಭವ ಕಳಸ, ಪೂರ್ಣ ಕುಂಭದೊಂದಿಗೆ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಬರಮಾಡಿಕೊಳ್ಳಲಾಯಿತು.
Comments (0)