ವ್ಯಕ್ತಿ ಶಕುನಿಯಾದರೆ ಧರ್ಮ ಛಿದ್ರಗೊಳ್ಳುತ್ತದೆ, ವೀರಭದ್ರನಾಗಿ ಬಾಳಿದರೆ ಸಮಾಜ ಧರ್ಮ ಭದ್ರಗೊಳ್ಳುತ್ತದೆ; ಶ್ರೀ ರಂಭಾಪುರಿ ಜಗದ್ಗುರುಗಳು

ಹುಬ್ಬಳ್ಳಿ:ವ್ಯಕ್ತಿ ಶಕುನಿಯಾದರೆ ಧರ್ಮ ಛಿದ್ರಗೊಳ್ಳುತ್ತದೆ. ವ್ಯಕ್ತಿ ವೀರಭದ್ರನಾಗಿ ಬಾಳಿದರೆ ಸಮಾಜ ಧರ್ಮ ಭದ್ರಗೊಳ್ಳುತ್ತದೆ. ದುಷ್ಟ ಶಕ್ತಿಗಳ ನಿವಾರಣೆಗಾಗಿ ಮತ್ತೊಮ್ಮೆ ವೀರಭದ್ರಸ್ವಾಮಿ ಅವತರಿಸಿ ಬರುವ ಅಗತ್ಯವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದ್ದಾರೆ.

ಅವರು ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಜರುಗಿದ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು,ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಮಹತ್ವಪೂರ್ಣವಾದ ಆಂಶಗಳನ್ನು ಕಾಣುತ್ತೇವೆ. ಶ್ರೀ ಜಗದ್ಗುರು ರಂಭಾಪುರಿ ಪೀಠದ ಕ್ಷೇತ್ರನಾಥ ಮತ್ತು ಗೋತ್ರ ಪುರುಷನಾದ ಶ್ರೀ ವೀರಭದ್ರ ಸ್ವಾಮಿಯ ಕ್ರಿಯಾ ಕರ್ತೃತ್ವ ಶಕ್ತಿ ಆಮೋಘವಾದದ್ದು, ಧರ್ಮ ಮತ್ತು ಸಂಸ್ಕೃತಿಯ ಸಂರಕ್ಷಕನಾಗಿ ಶ್ರೀ ವೀರಭದ್ರಸ್ವಾಮಿ ಎಲ್ಲರ ಆರಾಧ್ಯ ದೈವನಾಗಿ ಪೂಜೆಗೊಳ್ಳುತ್ತಿದ್ದಾನೆ ಎಂದು ಅಭಿಪ್ರಾಯಪಟ್ಟರು

ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಕಣ್ಣಿಗೆ ಕಾಣದ ವಿಜ್ಞಾನಕ್ಕೂ ನಿಲುಕದ ಆವ್ಯಕ್ತವಾದ ಚೈತನ್ಯ ಶಕ್ತಿಗೆ ದೇವರೆಂದು ನಂಬಿ ನಡೆದವರು ಭಾರತೀಯರು. ನೆಲ ಜಲ ಗಾಳಿ ಬೆಳಕು ದೇವರೆಂದು ಪೂಜಿಸಿದವರು. ದಕ್ಷಬ್ರಹನ ಅಹಂಕಾರ ಮಿತಿಮೀರಿದಾಗ ಶಿವನಿಗೆ ಅವಮಾನಿಸಿದ ಸಂದರ್ಭದಲ್ಲಿ ಪರಶಿವನ ಜಟಾಮುಕಟದಿಂದ ಅವತರಿಸಿ ಬಂದಾತನೆ ಶ್ರೀ ವೀರಭದ್ರಸ್ವಾಮಿ, ದುಷ್ಟರ ಸಂಹಾರ ಶಿಷ್ಯರ ಪರಿಪಾಲನೆ ಈತನ ಮೊದಲ ಕರ್ತವ್ಯ ಶ್ರೀ ವೀರಭದ್ರಸ್ವಾಮಿಯನ್ನು ವೀರಶೈವ ಲಿಂಗಾಯತರಷ್ಟೇ ಅಲ್ಲದೆ ಬೇರೆ ಜನರು ಕೂಡ ಇಂದಿಗೂ ಪೂಜಿಸುತ್ತಾರೆ. ವ್ಯಕ್ತಿ ಶಕುನಿಯಾದರೆ ಧರ್ಮ ಛಿದ್ರಗೊಳ್ಳುತ್ತದೆ. ವ್ಯಕ್ತಿ ವೀರಭದ್ರನಾಗಿ ಬಾಳಿದರೆ ಸಮಾಜ ಧರ್ಮ ಭದ್ರಗೊಳ್ಳುತ್ತದೆ. ದುಷ್ಟ ಶಕ್ತಿಗಳ ನಿವಾರಣೆಗಾಗಿ ಮತ್ತೊಮ್ಮೆ ವೀರಭದ್ರಸ್ವಾಮಿ ಅವತರಿಸಿ ಬರುವ ಅಗತ್ಯವಿದೆ. ಇಂಥ ವೀರಭದ್ರಸ್ವಾಮಿ ಎಲ್ಲೆಡೆಯಲ್ಲಿ ನೆಲೆಸಿದ್ದರೂ ಆತನ ಮೂಲ ಶಕ್ತಿಕೇಂದ್ರ ರಂಭಾಪುರಿ ಪೀಠ ಎಂಬುದನ್ನು ಯಾರು ಮರೆಯುವಂತಿಲ್ಲ ಎಂದರು.

ಈ ಪವಿತ್ರ ಸಮಾರಂಭದಲ್ಲಿ ವಿಶ್ವನಾಥ ಹಿರೇಗೌಡರ, ವಿ.ಜಿ.ಪಾಟೀಲ್, ಜಿ.ವಿ.ಹಿರೇಮಠ, ಚೆನ್ನಯ್ಯ ಹಿರೇಮಠ, ಟಾಕನಗೌಡ ಗಲ್ಲೂರು, ಬಸವರಾಜ್ ಸುಳ್ಳದ, ಚೆನ್ನವೀರ ಹಿರೇಮತ್ ಮೊದಲಾದ ಗಣ್ಯರು ಭಾಗವಹಿಸಿದ್ದರು.

Related Articles

Comments (0)

Leave a Comment