ಇರುಮುಡಿ ಕಟ್ಟಿದ ಡಿ.ಕೆ ಶಿವಕುಮಾರ್
- by Suddi Team
- July 21, 2018
- 818 Views

ರಾಮನಗರ: ರಾಜ್ಯ ಕಾಂಗ್ರೆಸ್ ನಲ್ಲಿ ಮ್ಯಾರಥಾನ್ ಸಭೆಗಳು ನಡೆಯುತ್ತಿದ್ದರೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತ್ರ ಮಾಲೆ ಧರಿಸಿ ಸ್ವಾಮಿಯೈ ಶರಣಂ ಅಯ್ಯಪ್ಪ ಎನ್ನುತ್ತಾ ಇರುಮುಡಿ ಕಟ್ಟಿ ಶಬರಿಮಲೈಗೆ ತೆರಳಿದ್ದಾರೆ.
ಸಿ.ಎಂ.ಕುಮಾರಸ್ವಾಮಿ ಜೊತೆಯಲ್ಲಿ ಹಲವು ಪ್ರಮುಖ ರಾಜ್ಯದ ಜಲಾಶಯಗಳಿಗೆ ಬಾಗೀನ ಅರ್ಪಿಸಿದ್ದ ಡಿ.ಕೆ.ಶಿವಕುಮಾರ್ ಅಲ್ಲಿಂದ ನೇರವಾಗಿ ಮೈಸೂರಿಗೆ ಆಗಮಿಸಿ ಕೇರಳದತ್ತ ಪ್ರಯಾಣ ಬೆಳೆಸಿದರು ಪಂಪಾದಲ್ಲಿ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಇರುಮುಡಿ ಕಟ್ಟಿದರು.ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತಾ ಶಬರಿಮಲೈ ಬೆಟ್ಟ ಏರಿದರು.ಆಪ್ತ ಸ್ನೇಹಿತರ ಜೊತೆ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದರು.
ಇಂದು ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ಮತ್ತೆ ವಾಪಸ್ ಆಗುತ್ತಿದ್ದಾರೆ.ಬಿಡುವಿಲ್ಲದ ರಾಜಕೀಯದ ನಡುವೆಯೂ ಡಿಕೆಶಿ ಇರುಮುಡಿ ಕಟ್ಟಿದ್ದು ಅಚ್ಚರಿ ಮೂಡಿಸಿದೆ.ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಈ ಸಂಕಷ್ಟದಿಂದ ಪಾರು ಮಾಡುವಂತೆ ಸಚಿವ ಡಿಕೆಶಿ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತುಕೊಂಡಿದ್ದು ಅದರಂತೆ ಇಂದು ಹರಕೆ ತೀರಿಸಿದ್ದಾರೆ ಎಂದು ಸಚಿವರ ಆಪ್ತರು ತಿಳಿಸಿದ್ದಾರೆ.
Related Articles
Thank you for your comment. It is awaiting moderation.
Comments (0)