ಕಾಶಿ ಜ್ಞಾನ ಪೀಠದ ಡಾ.ಚಂದ್ರಶೇಖರ ಜಗದ್ಗುರುಗಳ 36 ನೆಯ ಪೀಠಾರೋಹಣ ವರ್ಧಂತಿ ಮಹೋತ್ಸವ

ಬೆಂಗಳೂರು :ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ 86ನೆಯ ಪೀಠಾಚಾರ್ಯರಾದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 36ನೆಯ ಪೀಠಾರೋಹಣ ವರ್ಧಂತಿ ಮಹೋತ್ಸವ ಮಹಾರಾಷ್ಟçದ ಸೊಲ್ಲಾಪುರ ನಗರದ ಸೇಳಗಿಯ ಡಾ.ಶೈಲೇಶ್ ಜಗದೀಶ ಪಾಟೀಲ ಗಾರ್ಡನ್‌ದಲ್ಲಿ ನವೆಂಬರ್ 10 ರಂದು ಜರುಗಲಿದೆ.

ಮೂಲತಃ ಬಾಗಲಕೋಟ ಜಿಲ್ಲೆ ಶೇಗುಣಸಿ ಗ್ರಾಮದವರಾದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕಳೆದ 35 ವರ್ಷಗಳಿಂದ ಕಾಶಿ ಜ್ಞಾನ ಪೀಠದ ಪೀಠಾಚಾರ್ಯರಾಗಿದ್ದು, ವೀರಶೈವ ಸಾಹಿತ್ಯದ ಶಕ್ತಿವಿಶಿಷ್ಟಾದ್ವೆತ ಸಿದ್ಧಾಂತದಲ್ಲಿ ಆಳವಾದ ಅಧ್ಯಯನ ಮಾಡಿ ಡಾಕ್ಟರೇಟ್ ಮತ್ತು ಡಿ.ಲಿಟ್ ಪದವಿಗಳನ್ನು ಪಡೆದಿದ್ದಾರೆ. ಇವರು ಬರೆದು ಮಂಡಿಸಿದ ಮಹಾಪ್ರಬಂಧಗಳು ಕಾಶಿ ಹಿಂದೂ ವಿಶ್ವವಿದ್ಯಾಲಯದ ಧರ್ಮಾಗಮ ವಿಭಾಗ ಮತ್ತು ಸಂಪೂರ್ಣಾನ0ದ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದಲ್ಲಿ ಶಾಸ್ತಿç ಮತ್ತು ಆಚಾರ್ಯ ಪದವಿಗಳಿಗೆ ಪಠ್ಯಪುಸ್ತಕಗಳಾಗಿ ಅಂಗೀಕರಿಸಲ್ಪಟ್ಟಿವೆ.

ವೀರಶೈವ ತತ್ವಶಾಸ್ತçದ ಮೇರು ಕೃತಿ ‘ಶ್ರೀಸಿದ್ಧಾಂತ ಶಿಖಾಮಣಿ’ಯನ್ನು ಭಾರತದ ಮತ್ತು ಪರದೇಶಗಳ ಭಾಷೆಗಳೂ ಸೇರಿ ಒಟ್ಟು 20 ಭಾಷೆಗಳಿಗೆ ಭಾಷಾಂತರಿಸಿ ಮುದ್ರಿಸಿ ಪ್ರಕಟಿಸಿದ್ದಾರೆ. ‘ಶ್ರೀಸಿದ್ಧಾಂತ ಶಿಖಾಮಣಿ’ ಹಾಗೂ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಬರೆದ ‘ವೀರಶೈವ ಪಂಚಸೂತ್ರಾಣಿ’ ಕೃತಿ ಸೇರಿದಂತೆ ಎಲ್ಲಾ ಮೇರು ಕೃತಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಅನುಭಾವವನ್ನು ಕೇಂದ್ರೀಕರಿಸಿದ ಅನೇಕ ಮಹತ್ವದ ಕೃತಿಗಳನ್ನು ಕಾಶಿ ಜ್ಞಾನ ಪೀಠದಿಂದ ಪ್ರಕಟಿಸಿ ವಿದ್ವಾಂಸರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕರ್ನಾಟಕವೂ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಧರ್ಮ ಜಾಗೃತಿ ಯಾತ್ರೆಗಳನ್ನು ಕೈಕೊಂಡು ‘ಶ್ರೀಸಿದ್ಧಾಂತ ಶಿಖಾಮಣಿ’ಯ ಎಲ್ಲಾ ಜನಕಲ್ಯಾಣ ಆಶಯಗಳನ್ನು ಸಾರ್ವತ್ರಿಕಗೊಳಿಸಿದ್ದಾರೆ.

ಕಾಶಿ ಪೀಠದಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆ ಪ್ರಾರಂಭಿಸಿದ್ದು, ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲಗಳನ್ನು ಕಲ್ಪಿಸಿದ್ದು, ಈ ಮೂಲಕ ಹಲವಾರು ವೈದ್ಯರು, ಅಧಿಕಾರಿಗಳು, ಕಲಾವಿದರು ಹಾಗೂ ಮಠಾಧೀಶರಾಗಿ ಹೊರಹೊಮ್ಮಿದ್ದಾರೆ. ವೇದ, ಸಂಸ್ಕೃತ ಹಾಗೂ ಯೋಗ ಪಾಠಶಾಲೆಗಳನ್ನು ಸ್ಥಾಪಿಸಿದ್ದು, ಗದಗ ಮತ್ತು ಹಾವೇರಿ ಜಿಲ್ಲೆ ಬಿಸನಳ್ಳಿಯಲ್ಲಿ 2 ಗುರುಕುಲಗಳಿವೆ. ಭಾರತವಷ್ಟೇ ಅಲ್ಲದೇ ಮಾಸ್ಕೋ ನಗರದ ಹಠಯೋಗ ತಜ್ಞ ಡ್ಯಾನಿಶ್ ಸೇರಿದಂತೆ ರಷ್ಯಾ ದೇಶದ ಅನೇಕ ಭಕ್ತರಿಗೆ ಇಷ್ಟಲಿಂಗ ದೀಕ್ಷೆ ನೀಡಿ ಅನುಗ್ರಹಿಸಿದ್ದಾರೆ.

ಕಾಶಿ ಪೀಠದಲ್ಲಿ 5 ಸಾವಿರ ಭಕ್ತರಿಗೆ ವಸತಿ ಮತ್ತು ದಾಸೋಹದ ವ್ಯವಸ್ಥೆ ಕಲ್ಪಿಸಿದ್ದು, ಪ್ರಯಾಗರಾಜ ಶಾಖಾಮಠದಲ್ಲಿಯೂ ಭಕ್ತರಿಗೆ ಅನುಕೂಲ ಕಲ್ಪಿಸಿದ್ದಾರೆ. ಪ್ರಸ್ತುತ ರಾಮೇಶ್ವರದಲ್ಲಿಯೂ ಭಕ್ತರ ವಾಸ್ತವ್ಯಕ್ಕೆ ಬೃಹತ್ ಭವನವನ್ನು ನಿರ್ಮಿಸಲಾಗುತ್ತಿದೆ. ಪ್ರತೀ ವರ್ಷ ವಿದ್ವಾಂಸರಿಗೆ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಿ ಆಶೀರ್ವದಿಸುವ ಸಂಪ್ರದಾಯವನ್ನು ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆರಂಭಿಸಿದ್ದಾರೆ.

ಸೋಮವಾರ ಜರುಗುವ 36ನೆಯ ಪೀಠಾರೋಹಣ ವರ್ಧಂತಿ ಮಹೋತ್ಸವದಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟç ರಾಜ್ಯಗಳ ಅನೇಖ ಶಿವಾಚಾರ್ಯ ಸ್ವಾಮೀಜಿಯವರು, ಸೊಲ್ಲಾಪೂರ ಮತ್ತು ಅಕ್ಕಲಕೋಟ ಶಾಸಕರು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳುವರು.

Related Articles

Comments (0)

Leave a Comment