ಸಿಎಂ ತೆರಿಗೆ ಇಳಿಸುವರೇ?; ಬಸವರಾಜ ಬೊಮ್ಮಾಯಿ

ಬೆಂಗಳೂರು:ಇದೊಂದು ತೆರಿಗೆ ಭಾರ ಹಾಕಿರುವ  ಜನ ವಿರೋಧಿ ಸರ್ಕಾರ ಎನ್ನುವುದು ಸ್ಪಷ್ಟವಾಗಿದ್ದು,ಕೇಂದ್ರ ಸರ್ಕಾರ ಜಿಎಸ್ಟಿ ದರ ಕಡಿತಗೊಳಿಸಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಸಿಎಂ ಸಿದ್ಸರಾಮಯ್ಯ ತೆರಿಗೆ ಇಳಿಸಲಿದ್ದಾರಾ ಎಂದು ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್ ಟಿ ತೆರಿಗೆ ಇಳಿಸಿ ಜನ ಸಾಮಾನ್ಯರಿಗೆ ಬಹಳ ದೊಡ್ಡ ಹಬ್ಬದ ಕೊಡುಗೆ ಕೊಟ್ಟ ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಕಳೆದ ಎರಡು ವರ್ಷದಲ್ಲಿ ಒಂದು ಲಕ್ಷ. ಕೋಟಿ ಹೊಸ  ತೆರಿಗೆಯನ್ನು ಜನರ ಮೇಲೆ  ಹಾಕಿರುವ ಅಪಖ್ಯಾತಿ ಕರ್ನಾಟಕ  ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರದ ಮೇಲಿದೆ. ಇವರು ಬಂದ ತಕ್ಷಣವೇ ಪೆಟ್ರೊಲ್, ಮೊಟರ್ ವೆಹಿಕಲ್ ತೆರಿಗೆ, ಸ್ಟ್ಯಾಂಪ್ ಡ್ಯೂಟಿ, ಅಬಕಾರಿಗೆ ಅತಿ ಹೆಚ್ಚು ತೆರಿಗೆ ಹಾಕಿದ್ದು, ಇದರಿಂದ ಹಾಲು, ನೀರು ಜನಸಾಮಾನ್ಯರು ಬಳಕೆ  ಮಾಡುವ ವಸ್ತುಗಳು ದುಬಾರಿಯಾಗಿವೆ. ಇವರು ನೀರೀನ ಮೇಲೂ, ಗಾಳಿಯ ಮೇಲೂ ತೆರಿಗೆ ಹಾಕಿದ್ದಾರೆ‌. ಅಷ್ಟೆಯಲ್ಲ ಬೆಂಗಳೂರಿನಲ್ಲಿ ಕಸದ ಮೇಲೂ ವಿಶೇಷ  ತೆರಿಗೆ ಹಾಕಿದ್ದಾರೆ. ಇದೊಂದು ತೆರಿಗೆ ಭಾರ ಹಾಕಿರುವ  ಜನ ವಿರೋಧಿ ಸರ್ಕಾರ ಎನ್ನುವುದು ಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಾವು ಹಾಕಿರುವ ತೆರಿಗೆಗಳನ್ನು ಕಡಿಮೆ ಮಾಡುತ್ತಾರೆಯೇ ಎಂಬ ಪ್ರಶ್ನೆಯನ್ನು ಜನ ಸಾಮಾನ್ಯರು ಕೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

 2017 ರಲ್ಲಿ ಪ್ರಾರಂಭವಾಗಿರುವ ಜಿಎಸ್ ಟಿ ದಿಟ್ಟ ನಿರ್ಧಾರ. ಕೊವಿಡ್ ಸಂದರ್ಭದಲ್ಲಿಯೂ ಯಾವ ರಾಜ್ಯಕ್ಕೂ ತೊಂದರೆ ಆದಗಂತೆ ನೋಡಿಕೊಂಡಿರುವ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಈಗ ಆರ್ಥಿಕ ಸುಭದ್ರತೆಯ ಹಿನ್ನೆಲೆಯಲ್ಲಿ ಬಹಳಷ್ಟು ವಸ್ತುಗಳಿಗೆ ತೆರಿಗೆ ವಿನಾಯತಿ ಮಾಡಿದ್ದಾರೆ. ಶೇ. 90 ರಷ್ಟು ವಸ್ತುಗಳ ಮೇಲಿನ ತೆರಿಗೆಯನ್ನು ಶೇ  ೫% ಕ್ಕೆ ಇಳಿಸಿದ್ದಾರೆ. ಕೆಲವು ವಸ್ತುಗಳಿಗೆ ಶೇ 18%  ರಷ್ಟು  ತೆರಿಗೆ ಮಾಡಿ ಕೇವಲ ಎರಡೇ ಸ್ಲ್ಯಾಬ್ ಮಾಡಿ ತೆರಿಗೆ ಸರಳೀಕರಣ ಮಾಡಿರುವ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ  ಸಲ್ಲುತ್ತದೆ. ಇದರಿಂದ ರೈತರು ಬಳಕೆ ಮಾಡುವ ಟ್ರ್ಯಾಕ್ಟರ್, ಟೈಲರ್ ಮತ್ತು  ಇತರ ಕೃಷಿ ಸಲಕರಣೆಗಳು, ಗೊಬ್ಬರ ಮೇಲಿನ ತೆರಿಗೆ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಜನ ಸಾಮಾನ್ಯರು  ಬಳಕೆ ಮಾಡುವ ಮೊಸರು, ಹಾಲು, ತುಪ್ಪ ಸೇರಿದಂತೆ ಬಹುತೇಕ ಎಲ್ಲ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ. ಇದು ನಿಜವಾಗಲೂ ಬಡವರ ಪರ ಸರ್ಕಾರ ಎನ್ನುವುದನ್ನು ತೋರಿಸಿದ್ದಾರೆ. ಇದಲ್ಲದೇ ಆರ್ಥಿಕತೆಗೆ ಎಲ್ಲ ರೀತಿಯ ಪ್ರೋತ್ಸಾಹ ಸಿಗುತ್ತದೆ ಎನ್ನುವ ವಿಶ್ವಾಸದೊಂದಿಗೆ. ಭಾರತ ಅತ್ಯಂತ ವೇಗದಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ  ಆಗಲು ಇದು ಬಹಳ ದೊಡ್ಡ ಸಹಾಯ ಆಗಲಿದೆ. ಅಲ್ಲದೇ  2 ಲಕ್ಷ ಕೋಟಿ ರೂ. ಜನರ ಬಳಿ ತೆರಿಗೆ ಹಣ ಉಳಿಯಲಿದೆ. ತೆರಿಗೆ ಸರಳೀಕರಣ ಮಾಡಿ ಇನ್ವರ್ಟೆಡ್ ಡ್ಯೂಟಿ ಸ್ಟ್ರಕ್ಚರ್ ತೆಗೆದು ಹಾಕಿದ್ದಾರೆ. ನೇರವಾಗಿ ಎಲ್ಲ ಲಾಭವು ವಿಶೆಷವಾಗಿ ಸಣ್ಣ ಕೈಗಾರಿಕೆಗೆ ಸಿಗಲಿದೆ ಎಂದು ಹೇಳಿದ್ದಾರೆ.

Related Articles

Comments (0)

Leave a Comment