ಚಾಮುಂಡೇಶ್ವರಿ ಮೇಲಿನ ಕೋಪ ಕಾವೇರಿ ಮೇಲೆ ತೀರಿಸಿಕೊಂಡ್ರಾ ಸಿದ್ದರಾಮಯ್ಯ?
- by Suddi Team
 - June 30, 2018
 - 101 Views
 
ಬೆಂಗಳೂರು: ಚಾಮುಂಡೇಶ್ವರಿ ಮೇಲಿನ ಕೋಪವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ಮೇಲೆ ತೀರಿಸಿಕೊಳ್ಳುತ್ತಿದ್ದಾರಾ ಎನ್ನುವ ಅನುಮಾನ ಸೃಷ್ಠಿಯಾಗಿದೆ.ಅಧಿಕೃತ ಆಹ್ವಾನವಿದ್ದರೂ ಸರ್ವಪಕ್ಷ ಸಭೆಗೆ ಗೈರಾಗಿ ಇಂತಹ ಪ್ರಶ್ನೆ ಉದ್ಭವಿಸುವಂತೆ ಮಾಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ವಿವಾದ ಸಂಬಂಧ ಸರ್ವಪಕ್ಷ ಸಭೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡರು. ಅಧಿಕೃತ ನಿವಾಸ ಕಾವೇರಿಯಲ್ಲಿಯೇ ಇದ್ದರೂ ಕೂಗಳತೆ ದೂರದ ವಿಧಾನಸೌಧದತ್ತಾ ಮುಖ ಮಾಡ್ಲಿಲ್ಲ.
ರಾಜ್ಯದ ಜ್ವಲಂತ ಸಮಸ್ಯೆಗಳಲ್ಲಿ ಕಾವೇರಿ ವಿವಾದ ಪ್ರಮುಖವಾಗಿದ್ದರೂ ಕೂಡ ಸಿದ್ದರಾಮಯ್ಯ ಅತ್ತ ತಲೆಹಾಕಲಿಲ್ಲ,ಹಿಂದೆ ಅವರೇ ಸಿಎಂ ಆಗಿದ್ದಾಗ ಸಾಕಷ್ಡು ಬಾರಿ ಸರ್ವಪಕ್ಷ ಸಭೆ ಕರೆದು ತೋರಿದ್ದ ಕಾಳಜಿಯನ್ನು ಇಂದು ಮರೆತಿದ್ದೇಕೆ ಎನ್ನುವ ಪ್ರಶ್ನೆ ಎದ್ದಿದೆ.
ಇದಕ್ಕೆಲ್ಲಾ ಚಾಮುಂಡೇಶ್ವರಿ ಮೇಲಿನ ಮುನಿಸೇ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಚಾಮುಂಡೇಶ್ವರಿ ಕ್ಷೇತ್ರ ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ಬರಲಿದೆ.ಆದರೆ ಆ ಕ್ಷೇತ್ರದಲ್ಲಿ ಜನರು ತಿರಸ್ಕಾರ ಮಾಡಿದ್ದಕ್ಕೆ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ.ಅವರೀಗ ಬಾದಾಮಿ ಜನಪ್ರತಿನಿಧಿ ಹಾಗಾಗಿ ಕಾವೇರಿ ಸಭೆಗೆ ಗೈರಾಗಿದ್ದಾರೆ ಎನ್ನಲಾಗಿದೆ.
ಬಾದಾಮಿ ಕೆರೆಗಳಿಗೆ ನೀರು ಹರಿಸಿ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಸಿದ್ದರಾಮಯ್ಯಗೆ ತಮ್ಮ ಹಿಂದಿನ ತವರು ಕ್ಷೇತ್ರ ಕಾವೇರಿ ಕೊಳ್ಳ ಈಗ ಬೇಡವಾಯಿತಾ ಎನ್ನುವ ಪ್ರಶ್ನೆ ಕಾವೇರಿ ಕೊಳ್ಳದ ಜನರಲ್ಲಿ ಮೂಡಿದೆ.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)