ಬೆಂಗಳೂರು ಒನ್ ಸೆಂಟರ್ ಮೂಲಕ ಬ್ಲಾಕ್ ಅಂಡ್ ವೈಟ್ ದಂದೆ:ಸಿದ್ದರಾಮಯ್ಯ,ಜಾರ್ಜ್,ಬೈರತಿ ವಿರುದ್ಧ ಆರೋಪ
- by Suddi Team
 - June 30, 2018
 - 274 Views
 
ಬೆಂಗಳೂರು:ಗರಿಷ್ಠ ಮುಖಬೆಲೆಯ ನೋಟುಗಳ ಅಪನಗದೀಕರಣದ ಬಳಿಕ ಬೆಂಗಳೂರು ಒನ್ ಕೇಂದ್ರಗಳಲ್ಲಿ 410 ಕೋಟಿ ಮೌಲ್ಯದ ಹಳೆ ನೋಟುಗಳ ಎಕ್ಸ್ ಚೆಂಜ್ ಹಗರಣ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ ಚಾರ್ಜ್ ಹಾಗೂ ಕೆಲ ಶಾಸಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದರು.
ನಗರದ ವಿ.ಟಿ ಪ್ಯಾರಡೈದ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್,ಹಳೆ ನೋಟು ಬದಲಾವಣೆಯಲ್ಲಿ ಈ ಜನ ಪ್ರತಿನಿಧಿಗಳು ಭಾಗಿಯಾಗಿದ್ದಾರೆ.ನವೆಂಬರ್ 2016 ರಿಂದ 141 ದಿನಗಳಲ್ಲಿ 500,1000 ಮುಖ ಬೆಲೆ ಹಳೆಯ ನೋಟು ಬದಲಾವಣೆಗೆ ಬೆಂಗಳೂರು ಒನ್ ಕಲೆಕ್ಷನ್ ಹಣವನ್ನು ಬಳಸಿಕೊಳ್ಳಲಾಗಿದೆ ಎಂದು 235 ಪುಟಗಳ ದಾಖಲೆ ಬಿಡುಗಡೆ ಮಾಡಿದರು.
ಬೆಂಗಳೂರು ಒನ್ ಕೇಂದ್ರದಲ್ಲಿ ಹೆಚ್ಚು ಮುಖಬೆಲೆಯ ನೋಟಿಗೆ ಬದಲಾಗಿ 100 ಮತ್ತು 50 ರೂ ನೋಟುಗಳ ಬದಲಾವಣೆ ಮಾಡಿಕೊಡಲಾಗಿದೆ ಬೆಂಗಳೂರು ಒನ್ನಲ್ಲಿ 96 ವಿವಿಧ ಇಲಾಖೆಗಳ ಸೇವೆ ಮತ್ತು ಹಣ ಪಾವತಿ ವ್ಯವಸ್ಥೆ ಇದೆ ನೂರಾರು ಕೋಟಿ ಹಣ ಬದಲಾವಣೆ ಹಗರಣ ನಡೆದಿದ್ದು ಈ ಬಗ್ಗೆ ಲೋಕಾಯುಕ್ತ,ಎಸಿಬಿ, ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿರುವುದಾಗಿ ತಿಳಿಸಿದರು.
ಪ್ರತಿನಿತ್ಯ ಬೆಂಗಳೂರು ಒನ್ ನಲ್ಲಿ ಸಂಗ್ರಹವಾಗೋ ಮೊತ್ತವನ್ನು ಬ್ಯಾಂಕ್ ಗೆ ಪಾವತಿಸದೇ ವಂಚನೆ ನಡೆಸಲಾಗಿದ.ನವೆಂಬರ್ 10, 2016 ರಿಂದ 31 ಮಾರ್ಚ್ 2017 ರವರೆಗೆ 544 ಕೋಟಿ ಸಂಗ್ರಹವಾಗಿದ್ದು 544 ಕೋಟಿ ಹಣದಲ್ಲಿ 410 ಕೋಟಿ ಅಕ್ರಮವಾಗಿ ನೋಟು ಬದಲಾವಣೆ ಮಾಡಲಾಗಿದೆ.ಅಂದಿನ ಸಿಎಂ ಸಿದ್ರಾಮಯ್ಯ, ಸಚಿವ ಕೆ.ಜೆ ಜಾರ್ಜ್ ಮತ್ತು ಭೈರತಿ ಬಸವರಾಜ್ ಕುಟುಂಬಕ್ಕೆ ಬೆಂಗಳೂರು ಒನ್ ಸಾಥ್ ನೀಡಿದೆ.141 ದಿನಗಳ ಕಾಲ ಬ್ಯಾಂಕ್ ಗೆ ಸಂಗ್ರಹಗೊಂಡ ಹಣ ಪಾವತಿ ಮಾಡದೆ ಹಣ ಬದಲಾಯಿಸಿ ಅಕ್ರಮ ಎಸಗಿದೆ.ಅಕ್ರಮ ನೋಟು ಬದಲಾವಣೆಗೆ ಬೆಂಗಳೂರು ಒನ್ ಮಾಲಿಕತ್ವದ ಸಿಎಂಎಸ್ ಕಂಪ್ಯೂಟರ್ಸ್ ಕೂಡ ಸಹಕಾರ ನೀಡಿದೆ ಎಂದು ಆರೋಪಿಸಿದರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)