ರಾಜ್ಯದ ನೀರಾವರಿ ಸಂಕಷ್ಟ ಪರಿಹಾರ ನರೇಂದ್ರ ಮೋದಿ ಒಬ್ಬರಿಂದ ಮಾತ್ರ ಸಾಧ್ಯ; ಎಚ್‌ಡಿ‌ಡಿ

ಬೆಂಗಳೂರು: ಕರ್ನಾಟಕ ರಾಜ್ಯ ಎದುರಿಸುತ್ತಿರುವ ಜ್ವಲಂತ ನೀರಾವರಿ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.

ಬಾಬು ಜಗಜೀವನ್ ರಾಮ್ ಭವನದಲ್ಲಿ ಮಾತನಾಡಿದ ಅವರು, ನರ್ಮದಾ ನದಿ ನೀರು ವಿಚಾರಕ್ಕೆ ನ್ಯಾಯಾಧಿಕರಣಕ್ಕೆ ಪತ್ರ ಬರೆದಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ನ್ಯಾಯಾಧಿಕರಣಕ್ಕೆ ಪತ್ರ ಬರೆದು ಕರ್ನಾಟಕದಲ್ಲಿ ನೀರಿನ ಸಮಸ್ಯೆ ಇಲ್ಲ ಅಂತ ಹೇಳಿದ್ದಾರೆ. ಅದಕ್ಕೆ ನಾನು ಪ್ರಧಾನಿ ಮೋದಿಗೆ ಪತ್ರ‌ ಬರೆದಿದ್ದೇನೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ನನ್ನ ಜತೆಗೆ ಮಾತಾಡಿದರು. ಗೋದಾವರಿ ನದಿ ನೀರಿನಲ್ಲಿ ನಮಗೂ ಪಾಲು ಸಿಗಬೇಕು ಎಂದು ಅವರು ಒತ್ತಿ ಹೇಳಿದರು. ನನ್ನ ನಾಡಿನ ಸಮಸ್ಯೆಗಳು ಪರಿಹಾರ ಕಾಣಬೇಕು ಎಂದು ಆಶಿಸಿದರು.

ನನ್ನ ಜನ ತಲತಲಾಂತರದಿಂದ ಅನುಭವಿಸೋದನ್ನು ಈ ಆತ್ಮ ನೋಡುತ್ತದೆ. ನಾನು ನರಕದಲ್ಲಿರುತ್ತೇನೋ, ಸ್ವರ್ಗದಲ್ಲಿರುತ್ತೇನೋ ಗೊತ್ತಿಲ್ಲ. ಆದರೆ, ನನ್ನ ಆತ್ಮ ನೋಡುತ್ತಿರುತ್ತದೆ. ಆದ್ದರಿಂದ, ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಗೋದಾವರಿ ನೀರಿನ ಕುರಿತು ಮನವರಿಕೆ ಮಾಡಿದ್ದೇನೆ. ಮಹದಾಯಿ‌ ನೀರು ಯೋಜನೆ ಆಗಬೇಕು. ಚಳ್ಳಕೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರದಂತಹ ಬಯಲು ಪ್ರದೇಶಗಳಿಗೆ ನೀರು ಸಿಗಬೇಕು. ರಾಜ್ಯಸಭೆಯಲ್ಲಿ ನನ್ನ ಹೋರಾಟ ಇನ್ನೊಂದು ಕಾಲ ವರ್ಷ ಇರಬಹುದು. ಆದ್ದರಿಂದ, ಎಲ್ಲರೂ ಇವತ್ತು ನನನ್ನು ಎತ್ತಿಕೊಂಡು ಬಂದು ಕೂರಿಸಿದ್ದಾರೆ ಎಂದು ಅವರು ಹೇಳಿದರು.

ನನ್ನ ಕಾಲಿಗೆ ನೋವು ಇರಬಹುದು, ಆದರೆ ತಲೆಗೆ ನೋವಿಲ್ಲ.  ಪಾರ್ಲಿಮೆಂಟ್‌ನಲ್ಲಿ ಹೋರಾಟ ಮಾಡುವ ಶಕ್ತಿ ಇದೆ. ಪ್ರಧಾನಮಂತ್ರಿಗಳನ್ನು ಒಪ್ಪಿಸುವ ಶಕ್ತಿಯಿದೆ ಎಂದು ದೇವೇಗೌಡರು ನುಡಿದರು.

Related Articles

Comments (0)

Leave a Comment