ನೂತನ ಸಿಎಸ್ ಆಗಿ ವಿಜಯಭಾಸ್ಕರ್ ಅಧಿಕಾರ ಸ್ವೀಕಾರ: ಒಂದು ದಿನದ ಹಿಂದೆಯೇ ನಿಖರ ಸುದ್ದಿ ಬಿತ್ತರಿಸಿದ್ದ ಸುದ್ದಿಲೋಕ
- by Suddi Team
 - June 30, 2018
 - 230 Views
 
ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯಕಾರ್ಯದರ್ಶಿಯಾಗಿ ಟಿ.ಎಂ ವಿಜಯ್ ಭಾಸ್ಕರ್ ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.ಒಂದು ದಿನದ ಹಿಂದೆಯೇ ಸುದ್ದಿಲೋಕ ವಬ್ ಪೋರ್ಟಲ್ ಈ ಬಗ್ಗೆ ಖಚಿತ ಸುದ್ದಿ ಬಿತ್ತರಿಸಿದ್ದು ಸುದ್ದಿಯ ನಿಖರತೆಗೆ ಇದು ನಿದರ್ಶನವಾಗಿದೆ.
ರತ್ನಪ್ರಭಾ ಅವರ ನಿವೃತ್ತಿಯಿಂದ ತೆರವಾಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹೆಚ್ಚುವರಿ ಮುಖ್ಯ ಕಾರ್ಯದರಾಗಿದ್ದ ಟಿ.ಎಂ ವಿಜಯ ಭಾಸ್ಕರ್ ನೇಮಕಗೊಂಡಿದ್ದು ಮುಖ್ಯಕಾರ್ಯದರ್ಶಿ ಕಚೇರಿಯಲ್ಲಿ ನಿರ್ಗಮಿತ ಮುಖ್ಯ ಕಾರ್ಯದರ್ಶಿ ನೂತನ ಸಿಎಸ್ ಗೆ ಅಧಿಕಾರ ಹಸ್ತಾಂತರ ಮಾಡಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಸಿಎಸ್ ವಿಜಯಭಾಸ್ಕರ್, ಇಂದು ಸರ್ಕಾರ ನನಗೆ ಜವಾಬ್ದಾರಿ ನೀಡಿದೆ
ಸಿಎಂ,ಡಿಸಿಎಂ ಅವರಿಗೆ ಅಬಾರಿಯಾಗಿದ್ದೇನೆ ಸರ್ಕಾರದ ಧ್ಯೇಯೋದ್ದೇಶ ಕಾರ್ಯರೂಪಕ್ಕೆ ತರುತ್ತೇವೆ ಸರ್ಕಾರದ ಆಶಯವನ್ನ ಈಡೇರಿಸುವ ಕೆಲಸ ಮಾಡುವೆ ರಾಜ್ಯವನ್ನ ದೇಶದಲ್ಲಿಯೇ ಮುಂದೆ ಕೊಂಡೊಯ್ಯುತ್ತೇನೆ ಎಂದು ಭರವಸೆ ನೀಡಿದರು.
ಸರ್ಕಾರದ ಕಾರ್ಯಕ್ರಮ,ನೀತಿಗಳ ಅನುಷ್ಠಾನ ಮುಖ್ಯ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಅಧಿಕಾರಿಗಳ ಮೂಲಕ ನಾವು ಕೆಲಸ ಮಾಡಿಸಬೇಕು. ಸರ್ಕಾರ ಉತ್ತಮ ಜವಾಬ್ದಾರಿ ನೀಡಿದೆ ಕೊಟ್ಟ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುತ್ತೇನೆ ಜನಪರ ಕೆಲಸಗಳಿಗೆ ಆಧ್ಯತೆ ನೀಡುತ್ತೇನೆ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪುವಂತೆ ಮಾಡುವೆ ಅಧಿಕಾರಿಗಳಿಂದ ಆ ಕೆಲಸವನ್ನ ಮಾಡಿಸುತ್ತೇನೆ ಎಂದರು.
ನಿರ್ಗಮಿತ ಸಿಎಸ್ ರತ್ನಪ್ರಭಾ ಮಾತನಾಡಿ, ಉತ್ತಮವಾಗಿ ಕೆಲಸ ಮಾಡಿದ್ದೇನೆ 37 ವರ್ಷಗಳಿಂದ ಕೆಲಸ ನಿರ್ವಹಿಸಿದ್ದೇನೆ
ಬೆಳಗಾವಿಯಿಂದ ನನ್ನ ವೃತ್ತಿ ಆರಂಭಿಸಿದ್ದೆ ಜನರ ಸಮಸ್ಯೆಗಳಿಗೆ ನಾನು ಒತ್ತುನೀಡುತ್ತಿದ್ದೆ ಇದೀವ ನಿವೃತ್ತಿಯಾಗುತ್ತಿದ್ದೇನೆ ಮುಂದೆ ಏನು ಮಾಡಬೇಕೆಂಬ ಯೋಚನೆ ಮಾಡಿಲ್ಲ ಕುಮಾರಸ್ವಾಮಿ ಅವಧಿ ವಿಸ್ತರಣೆ ತಡೆ ಹಿಡಿದ ವಿಚಾರ ಯಾವಾಗಲೂ ಸರ್ಕಾರದ ಪರವಾಗಿಯೇ ಕೆಲಸ ಮಾಡಬೇಕು ಯಾವ ಸರ್ಕಾರ ಇದ್ದರೂ ಅದೇ ಮಾಡುತ್ತೇವೆ ಯಾವ ಸಿಎಂ ಇದ್ದರೂ ಅವರು ಹೇಳಿದಂತೆಯೇ ಕೆಲಸ ಮಾಡುತ್ತೆವೆ ಅವರ ಪರ ಇವರ ಪರ ಅಂತ ಕೆಲಸ ಮಾಡಲ್ಲ ಎಂದರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)