ಚುನಾವಣಾ ರಾಜಕೀಯಕ್ಕೆ ಕಾಗೋಡು ತಿಮ್ಮಪ್ಪ ಗುಡ್ ಬೈ
- by Suddi Team
- July 31, 2018
- 105 Views
ಬೆಂಗಳೂರು: ಚುನಾವಣಾ ರಾಜಕೀಯಕ್ಕೆ ಕಾಂಗ್ರೆಸ್ ನ ಹಿರಿಯ ನಾಯಕ,ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಗುಡ್ ಬೈ ಹೇಳಿದ್ದಾರೆ.ಚುನಾವಣೆ ರಾಜಕೀಯ ಸಾಕಾಗಿದೆ.ಇಷ್ಟು ವರ್ಷ ಹೋರಾಟ ಮಾಡಿದ್ದಾಯ್ತು.ಈಗ ವಯಸ್ಸಾಗಿದೆ. ಹೋರಾಟ ಸಾಧ್ಯವಿಲ್ಲ.ಹಾಗಾಗಿಯೇ ರಾಜಕೀಯ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಪ್ರಕಟಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸಂಘಟನೆಗೆ ಹಿನ್ನೆಡೆಯಾಗುವ ಸೂಚನೆ ಸಿಕ್ಕಿದೆ.ಲೋಕಸಭೆ ಚುನಾವಣೆ ಸನಿಹದಲ್ಲಿ ಕೈ ಪಡೆ ಸಂಕಷ್ಠಕ್ಕೆ ಸಿಲುಕುವ ಸಾಧ್ಯತೆ ಎದುರಾಗಿದೆ.ಯಾಕಂದ್ರೆ ಸಕ್ರೀಯ ರಾಜಕೀಯದಿಂದ ಕೈ ನಾಯಕರು ದೂರವಾಗ್ತಿದ್ದಾರಾ ಎನ್ನುವ ಅನುಮಾನಕ್ಕೆ ಸಕ್ರೀಯ ರಾಜಕಾರಣದಿಂದ ದೂರ ಸರಿದ ಕಾಗೋಡು ನಿರ್ಧಾರ ಎಡೆಮಾಡಿಕೊಟ್ಟಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಇಂದು ವಿಧಾನಸೌಧದಲ್ಲಿ ಸ್ಪಷ್ಟಪಡಿಸಿದ್ರು. ಸಂಪೂರ್ಣವಾಗಿ ರಾಜಕೀಯ ನಿವೃತ್ತಿ ಘೋಷಿಸಿದ ಅವರು,ನನಗೆ ವಯಸ್ಸಾಯ್ತು. ಬೇರೆ ರೂಪದಲ್ಲಿ ಸಮಾಜದಲ್ಲಿ ತೊಡಗಿಸಿಕೊಳ್ತೀನಿ ಎಂದ್ರು.
ಈಡಿಗ ಸಮೂದಾಯದ ಪ್ರಬಲ ಮುಖಂಡ ಕಾಗೋಡು ತಿಮ್ಮಪ್ಪ ಆಗಿದ್ದು ಇದೀಗ ಕಾಂಗ್ರೆಸ್ ನಲ್ಲಿ ಈಡಿಗ ಸಮಾಜದ ನಾಯಕರೇ ಇಲ್ಲದಂತಾಗಿದೆ.ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಈಡಿಗ ಸಮುದಾಯದ ಪ್ರಮುಖ ನಾಯಕರಾಗಿದ್ದು,ಬಂಗಾರಪ್ಪ ನಂತರ ಕಾಗೋಡು ತಿಮ್ಮಪ್ಪ ನಾಯಕರಾಗಿದ್ರು.ಇದೀಗ ಅವರು ನಿವೃತ್ತಿ ಘೋಷಿಸಿದ್ದಾರೆ.ಬಂಗಾರಪ್ಪ ಪುತ್ರ ಕುಮಾರ್ ಬಂಗಾರಪ್ಪ ಕೂಡ ಬಿಜೆಪಿ ಸೇರಿದ್ದು ಮಧು ಬಂಗಾರಪ್ಪ ಜೆಡಿಎಸ್ ನಲ್ಲಿದ್ದಾರೆ.ಹರತಾಳು ಹಾಲಪ್ಪ ಕೂಡ ಬಿಜೆಪಿಯಲ್ಲಿದ್ದು ಸಧ್ಯ ಬೇಳೂರು ಗೋಪಾಲಕೃಷ್ಣ ಮಾತ್ರ ಕಾಂಗ್ರೆಸ್ ನಲ್ಲಿರುವ ಈಡಿನ ನಾಯಕರಾಗಿದ್ದಾರೆ.
ಕಾಗೋಡು ತಿಮ್ಮಪ್ಪ ಅವರ ಪುತ್ರಿ ರಾಜಕೀಯ ಪ್ರವೇಶಿಸುತ್ತಾರೆ, ಕಾಗೋಡು ಉತ್ತರಾಧಿಕಾರಿಯಾಗಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದ್ದವಾದರೂ ಕೂಡ ಅದು ಅಲ್ಲಿಗೆ ನಿಂತಿದೆ.ಇದೀಗ ಕಾಗೋಡು ರಾಜಕೀಯಕ್ಕೆ ಗುಡ್ ಬೈ ಹೇಳಿದ್ದು ಕೈ ಪಾಳಯದಲ್ಲಿ ಈಡಿಗ ಸಮುದಾಯದ ನಾಯಕ ಯಾರು ಎನ್ನುವ ಪ್ರಶ್ನೆ ಹುಟ್ಟಿಸಿದೆ.
Related Articles
Thank you for your comment. It is awaiting moderation.


Comments (0)