ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿರುತ್ತೇನೆ: ಎಚ್.ಡಿ ದೇವೇಗೌಡ
- by Suddi Team
- November 17, 2018
- 411 Views

ಬೆಂಗಳೂರು: ನಾನು ರಾಜಕೀಯ ಬಿಡೋದಿಲ್ಲ.ಶಕ್ತಿ ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ.ಆಗಲ್ಲ ಅಂದಾಗ ವಿಶ್ರಾಂತಿ ಪಡೆಯುತ್ತೇನೆ.ಯಾರಿಗೂ ಮೋಸ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ, ವಂಚನೆ ಮಾಡಿಲ್ಲ.ನಾನು ಬಯಸೋದು ಒಂದೆ.ನನಗೆ ಅನಾಯಾಸ ಮರಣ ಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡ್ರು,ಹಣದಿಂದ ರಾಜಕೀಯ ಮಾಡೋರು ಇದಾರೆ ದೈವೇಚ್ಚೆಯಿಂದ ರಾಜಕೀಯ ಮಾಡಿದೋನು,ನಾನು ಯಾವುದೇ ಜಾತಿ ಯ ವಿರೋಧಿ ಅಲ್ಲ.ಇವತ್ತು ದೇವೇಗೌಡರ ಬಗ್ಗೆ ಭಾರತದ ಯಾವುದೇ ಪ್ರದೇಶಕ್ಕೆ ಹೋದರೂ ಗೌರವ ಕೊಡ್ತಾರೆ.ಪಂಜಾಬ್, ಉತ್ತರ ಪ್ರದೇಶ, ಮಿಜೋರಾಂ ಯಾವುದೇ ಸ್ಥಳಕ್ಕೆ ಹೋದರೂ ಗೌಡ ಅಚ್ಚಾ ಹೈ ಅಂತಾರೆ.ಆದರೆ ಇಲ್ಲಿ ನಮ್ಮ ಮಾದ್ಯಮ ಸ್ನೇಹಿತರು ಕುಮಾರಸ್ವಾಮಿ ಸರ್ಕಾರ ಯಾವಾಗ ಬೀಳುತ್ತೋ ಅಂತಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ರು.
ನಮ್ಮಲ್ಲಿ ಮೂರು ಪ್ರಮುಖ ಪಕ್ಷಗಳಿವೆ.ಎರಡು ರಾಷ್ಟ್ರೀಯ ಪಕ್ಷಗಳು ಇವೆ.ಬಿಜೆಪಿಯನ್ನು ಮಣಿಸಲು ಸಾದ್ಯವಿಲ್ಲ.
ಪ್ರತಿಯೊಬ್ಬರನ್ನೂ ಬಳಸಿಕೊಳ್ತಾರೆ , ಆಮೇಲೆ ಕೈ ಬಿಟ್ಟು ಬಿಡ್ತಾರೆ.ಕೃಷ್ಣ ಅವರನ್ನು ಕರೆದು ಕೊಂಡು ಹೋದ್ರು.ರಾಜಶೇಖರನ್ ಅವರನ್ನು ಕರೆದುಕೊಂಡರು.ಬಂಗಾರಪ್ಪ ಅವರನ್ನು ಕರೆದುಕೊಂಡರು ಒಂದು ದಿನ ಮೆರೆಸಿ ಆಮೇಲೆ ಬಿಟ್ಟೇ ಬಿಟ್ಟರು.
ದೇಶಕ್ಕೆ ಏನು ಬೇಕು ಅಂತಾ ನಾವು ಮೊದಲು ಯೋಚಿಸಬೇಕು.ರಾಜ್ಯದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶ ಇದೆ. ಇದಕ್ಕೆ ಕೇಂದ್ರದ ಸಹಕಾರ ಬೇಕು. ನಾನು ಮತ್ತು ಕುಮಾರಸ್ವಾಮಿ ದಿಲ್ಲಿಗೆ ಹೋಗಿ ಎಲ್ಲ ಸಂಸದರನ್ನು ಭೇಟಿ ಮಾಡಿ ಸಹಕಾರ ನೀಡಿ ಅಂತ ಕೇಳಿದೆ. ಅನಂತ್‌ಕುಮಾರ್, ಸದಾನಂದ ಗೌಡ ಎಲ್ಲರೂ ಇದ್ದರು. ಆದ್ರೆ ಏನೂ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.
ಅಧಿಕಾರ ದಾಹ ಅನ್ನೋದು ಎಲ್ಲರಲ್ಲೂ ಇದೆ.ನಾನು ಶಾಸಕನಾದಾಗ ಇಪ್ಪತ್ತ ಮೂರು ವರ್ಷ. ಸಚಿವ ಆದಾಗಲೂ ಸಣ್ಣ ವಯಸ್ಸೇ.ಆದ್ರೆ ಈಗಲೂ ನಾನು ಹೋರಾಟ ಮಾಡಿಕೊಂಡು ಬರ್ತಿದ್ದೇನೆ.ಒಮ್ಮೆ ಶೋಬಾ ಕರಂದ್ಲಾಜೆ ನಮ್ಮ ಮನೆಗೆ ಬಂದಿದ್ರು.ಯಡಿಯೂರಪ್ಪ ಅವರಿಗೆ ಒಂದು ಮಂತ್ರಿ ಸ್ಥಾನ ಕೊಡಿ ಅಂತಾ ಕೇಳಿದ್ರು. ನನ್ನನ್ನು ಎಂ ಎಲ್ ಸಿ ಮಾಡಿ ೨೩ ಶಾಸಕರು ನಮ್ಮ ಜತೆ ಇದ್ದಾರೆ ಅಂದ್ರು.ತಾಳ್ಮೆಯಿಂದ ಇರಿ, ಒಳ್ಳೆ ಕಾಲ ಬರುತ್ತೆ ಅಂತಾ ಸಲಹೆ ನೀಡಿ ಕಳಿಸಿದ್ದೆ. ನಾನು ಯಾರಿಗೂ ತಪ್ಪು ಸಂದೇಶ ನೀಡಲು ಹೋಗಲ್ಲ.ಇವರ್ಯಾರೂ ಮಾತು ಕೇಳಲ್ಲ.ನಾನೇನು ಮಾಡ್ಲಿ ಎಂದ್ರು.
ರಾಜಕೀಯದಲ್ಲಿ ತಾಳ್ಮೆ ಮುಖ್ಯ. ವೇಗವಾಗಿ ಹೋದ್ರೆ ಆಗಲ್ಲ. ನನಗೆ ಯಾರ ಮೇಲೂ ದ್ವೇಷ ಇಲ್ಲ. ರಾಜ್ಯದ ಅಭಿವೃದ್ಧಿ ಗಾಗಿ, ರೈತರಿಗಾಗಿ ಯಾರ ಮನೆ ಬಾಗಿಲಿಗೆ ಹೋಗಲೂ ಸಿದ್ದ ಎಂದ್ರು.
ಸಾಲಮನ್ನ ವಿಚಾರ ನಾಲ್ಕಾರು ಕಡೆ ಕೆಲ ರೈತರು ಸಾಲ ಮಾಡಿಕೊಂಡಿದ್ದಾರೆ ಅದು 8-10.ಲಕ್ಷ ರೂ. ದಾಟಿದೆ ಹೀಗಾಗಿ ಕೆಲ ರೈತರು ಆತ್ಮಹತ್ಯೆಗೆ ಶರಣಾಗ್ತಿದ್ದಾರೆ ಕುಮಾರಸ್ವಾಮಿ ಅವರು ಅನೇಕ ರೀತಿಯ ಸಾಲಮನ್ನ ಮಾಡಬೇಕು ಅಂದುಕೊಂಡಿದ್ದಾರೆ ಇದಕ್ಕೆ ಸಂಪನ್ಮೂಲಕ ಕ್ರೂಢೀಕರಣ ಆಗಬೇಕು.ರೈತರು ತಾಳ್ಮೆಯಿಂದ ಇರಬೇಕು ಎಂದು ದೇವೇಗೌಡ ಕಿವಿಮಾತು ಹೇಳಿದ್ರು.
ಎಲ್ಲರಿಗೂ ತೆರಿಗೆ ವಿಧಿಸುವ ಅಗತ್ಯ ಇಲ್ಲ. ಅಕ್ರಮವಾಗಿ ಆಸ್ತಿ ಮಾಡಿರುವ ಮಂದಿಗೆ ತೆರಿಗೆ ಹಾಕಿದ್ರೂ ಸಾಕು. ವ್ಯವಸ್ಥೆ ನಡೆಸಬಹುದು. ಆದ್ರೆ ವ್ಯವಸ್ಥೆಯೇ ಕೆಟ್ಟು ಹೋಗಿದೆ. ನಮ್ಮ ಪಕ್ಷದಲ್ಲಿ ಎಲ್ಲರೂ ಸತ್ಯ ಹರಿಶ್ಚಂದ್ರ ರಿಲ್ಲ ಎನ್ನುವುದೂ ನನಗೆ ಗೊತ್ತು.ಚುನಾವಣೆ ಗೆಲ್ಲುವವರೆಗೆ ಹೋರಾಟ ಮಾಡಿ ಗೆದ್ದ ಮೇಲೆ ವಿರೋಧ ಪಕ್ಷದವರೂ ಸಹಕಾರ ನೀಡಬೇಕು ಮೈತ್ರಿ ಸರ್ಕಾರದ ಗೊಂದಲ, ಆಪರೇಷನ್ ಕಮಲದ ಬಗ್ಗೆ ಪರೋಕ್ಷವಾಗಿ ಸಲಹೆ ನೀಡಿದ್ರು.
ಆಡಳಿತ ನಡೆಸಲು ಆಕ್ಸ್ಫರ್ಡ್ ಯುನಿವರ್ಸಿಟಿಯಲ್ಲಿ ಓದಬೇಕಿಲ್ಲ ಬುದ್ದಿ ಇರಬೇಕು, ಕಾಮನ್ ಸೆನ್ಸ್ ಇರಬೇಕು
ಕಾವೇರಿ ನೀರಿಗಾಗಿ ಅಂದಿನ ಸಿಎಂ ಜಯಲಲಿತಾ ಒಣಗಿದ ಭತ್ತ ಪ್ರದರ್ಶನ ಮಾಡಿದ್ರು ನಾನು ಮೊದಲೇ ವಾಸ್ತವ ಚಿತ್ರಣದ ವಿಡಿಯೋ ಮಾಡಿದ್ದೆ ಆ ಸಿಡಿ ನೋಡಿ ಎಂದಾಗ ಜಯಲಲಿತಾ ಸಭೆಯಿಂದ ಹೊರ ನಡೆದಿದ್ರು ಬಳಿಕ 31 ಟಿಎಂಸಿ ಬದಲು 11 ಟಿಎಂಸಿ ನೀರು ಬಿಟ್ಟರೆ ಸಾಕು ಎಂದ್ರು ಹಳೆಯ ನೆನಪು ಮೆಲುಕು ಹಾಕಿದ್ರು.
Related Articles
Thank you for your comment. It is awaiting moderation.
Comments (0)