ಚೊಚ್ಚಲ ಬಜೆಟ್ ನಲ್ಲೇ ಸಾಲಮನ್ನಾ ಘೋಷಣೆ ಮಾಡಲಿರುವ ಸಿಎಂ ಹೆಚ್ಡಿಕೆ!
- by Suddi Team
 - June 24, 2018
 - 775 Views
 
ಬೆಂಗಳೂರು:ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಮ್ಮ ಚೊಚ್ಚಲ ಬಜೆಟ್ ನಲ್ಲೇ ಸಾಲಮನ್ನಾ ಘೋಷಿಸುವ ಒತ್ತಡಕ್ಕೆ ಸಿಲುಕಿದ್ದು ಎರಡು ಹಂತದ ಸಾಲಮನ್ನಾ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಸಿಎಂ ಕಚೇರಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ರೀತಿ ಸಾಲಮನ್ನಾ ಮಾಡುವ ಅನಿವಾರ್ಯತೆಗೆ ಸಿಲುಕಿರುವ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಅಪಸ್ವರದ ನಡುವೆಯೂ ಸಾಲಮನ್ನಾ ಘೋಷಿಸಲು ಸಿದ್ದತೆ ನಡೆಸುತ್ತಿದ್ದಾರೆ. ಈಗಾಗಲೇ ಸಾಲಮನ್ನಾ ನಿರ್ಧಾರಕ್ಕೆ ಬದ್ದ ಎಂದಿರುವ ಸಿಎಂ ಬಜೆಟ್ ನಲ್ಲಿ ಮಾತು ಉಳಿಸಿಕೊಳ್ಳುವ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ.
ಒಟ್ಟು 53 ಸಾವಿರ ಕೋಟಿ ಕೃಷಿ ಸಾಲ ಇದ್ದು ರೈತರ ಖಾಸಗಿ ಸಾಲ ಸೇರಿದರೆ ಒಂದ ಲಕ್ಷ ಕೋಟಿ ದಾಟಲಿದೆ.ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಹೇಳಿಕೆಯೇ ಇದೀಗ ಸಿಎಂ ಕುಮಾರಸ್ವಾಮಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.ಹಾಗಾಗಿ ಮೊದಲು ಕೃಷಿ ಸಾಲಮನ್ನಾ ನಿರ್ಧಾರವನ್ನು ಈ ಬಜೆಟ್ ನಲ್ಲಿಯೇ ಘೋಷಣೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೊಕ್ಕಸಕ್ಕೆ ಹೊರೆಯಾಗದ ರೀತಿ ಎರಡು ಹಂತದಲ್ಲಿ ಸಾಲಮನ್ನಾ ಮಾಡಿ ರೈತರನ್ನು ಒಮ್ಮೆ ಋಣಮುಕ್ತರನ್ನಾ ಮಾಡುವ ಚಿಂತನೆ ನಡೆಸಿದ್ದಾರೆ.
ಮೊದಲನೇ ಹಂತರದಲ್ಲಿ ಸಹಕಾರಿ ಸಂಘಗಳು,ಸೊಸೈಟಿಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲಮನ್ನಾ ಹಿಂದಿನಸರ್ಕಸರ ಮಾಡಿದ್ದು ಅಲ್ಲಿನ ಉಳಿದ ಸಾಲವನ್ನೂ ಮನ್ನಾ ಮಾಡಿ ನಂತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ಮಾಡಲು ಚಿಂತನೆ ನಡೆಸಲಾಗಿದೆ, ಆರ್ಥಿಕ ಸಲಹೆಗಾರರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಂತುಗಳ ಮೂಲಕ ಸಾಲದ ಹಣ ಪಾವತಿ ಮಾಡುವ ಸಂಬಂಧ ಬ್ಯಾಂಕ್ ಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರು ಪಡೆದಿರುವ ಸಾಲದ ಬಡ್ಡಿ ಹೊರೆಯನ್ನು ತಗ್ಗಿಸಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆ,ಬಡ್ಡಿ ಮನ್ನಾ ಮಾಡಿದರೆ ರೈತರ ಪರ ಖಾತರಿ ನೀಡಿ ಕಂತುಗಳ ಮೂಲಕ ಅಸಲು ಪಾವತಿ ಮಾಡುವ ಭರವಸೆ ನೀಡಿ ಬ್ಯಾಂಕ್ ಗಳೊಂದಿಗೆ ಮಾತುಕತೆ ನಡೆಸಿದೆ. ಆದರೆ ಬ್ಯಾಂಕ್ ಗಳು ಬಡ್ಡಿ ಮನ್ನಾಗೆ ನಿರಾರಿಸುತ್ತಿದ್ದು ಬಡ್ಡಿಯ ಹಣದಲ್ಲಿ ಕಡಿತಗೊಳಿಸುವ ಸಾಧ್ಯತೆ ಇದೆ ಎನ್ನವ ಮಾಹಿತಿ ಲಭ್ಯವಾಗಿದೆ.
ಒಟ್ಟಿನಲ್ಲಿ ಜುಲೈ 5 ರಂದು ಸಿಎಂ ಕುಮಾರಸ್ವಾಮಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದು ಎಲ್ಲರ ಸೃಷ್ಠಿ ಇದೀಗ ಹೆಚ್ಡಿಕೆ ಬಜೆಟ್ ನತ್ತ ನೆಡುವಂತೆ ಮಾಡಿದೆ.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)