ಸುಳ್ಳು ಹೇಳೋದನ್ನು ಮೊದ್ಲು ನಿಲ್ಸಿ: ಸಿಎಂಗೆ ಬಿಎಸ್ವೈ ತಿರುಗೇಟು
- by Suddi Team
 - July 4, 2018
 - 126 Views
 
ಬೆಂಗಳೂರು :ನಾನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿ ರೈತರಿಗೆ ಏನು ಮಾಡಬೇಕೋ ಮಾಡಿದ್ದೀನಿ.ಮೊದಲು ನೀವು ಸುಳ್ಳು ಹೇಳುವುದನ್ನ ನಿಲ್ಲಿಸಿ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ರು.
ನಗರದಲ್ಲಿ ಮಾತನಾಡಿದ ಬಿಎಸ್ವೈ,ದೇವೇಗೌಡರು ಮನೆಗೆ ಕರೆಸಿ ರೈತರ ಬಡ್ಡಿ ಮನ್ನಾ ಮಾಡಲು ವಿರೋಧ ಮಾಡಿದ್ರು.ಹಾಸನದಲ್ಲಿ ಕೂಡ ಇದೇ ರೀತಿ ಮಾಡಿದ್ರು.ಆಗ ನಾನು ಪ್ರತಿಭಟಿಸಿದ್ದೇನೆ.ಆಗ ನಾನು ಮಾದ್ಯಮಗಳಿಗೆ ಕೂಡ ತಿಳಿಸಿದ್ದೇನೆ.ಮೊದಲು 53 ಸಾವಿರ ಕೋಟಿ ಸಾಲ ಮನ್ನಾ ಮಾಡ್ತೀನಿ ಎಂದಿದ್ದೀರಿ ನಾಳೆ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಾಲ ಮನ್ನಾ ಮಾಡಿ ಧರ್ಮಸ್ಥಳದಲ್ಲಿ ಆಡಿದ ಮಾತನ್ನು ಕುಮಾರಸ್ವಾಮಿ ಉಳಿಸಿಕೊಳ್ಳಲಿ ಎಂದರು.
ನಾಳೆ ರೈತರ ಸಾಲದ ಬಗ್ಗೆ ಸ್ಪಷ್ಟತೆ ಸಿಗದೆ ಹೋದ್ರೆ ನಮ್ಮ ಕರ್ತವ್ಯ ನಾವು ಮಾಡ್ತೇವೆ.ರಾಜ್ಯದ ಜನರ ಮನೆ ಮನೆಗೆ ಹೋಗಿ ಜನರನ್ನ ಸರ್ಕಾರದ ಬಗ್ಗೆ ಎಚ್ಚರಿಸ್ತೇವೆ ಎಂದ್ರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)