ಡಿಕೆ ಶಿವಕುಮಾರ್ ಕ್ಷಮೆಯಾಚನೆ ಟೀಕಿಸಿದ ಬಿಜೆಪಿ..!
- by Suddi Team
- August 27, 2025
- 123 Views

ಬೆಂಗಳೂರು: ನಮಸ್ತೇ ಸದಾ ವತ್ಸಲೇ ಮಾತೃಭೂಮಿ ಎಂದಿದ್ದೇ ಮಹಾಪರಾಧವನ್ನಾಗಿ ಬಿಂಬಿಸಿ ಕ್ಷಮೆಯಾಚಿಸುವಂತೆ ಮಾಡಿದ್ದು,ದೇಶದ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಲಿದೆ,ಬಂಡೆಯಂಥ ಡಿಕೆ ಶಿವಕುಮಾರ್ ಅವರಿಗೇ ಈ ಗತಿಯಾದರೆ, ಕಾಂಗ್ರೆಸ್ ಪಕ್ಷದಲ್ಲಿರುವ ಅದೆಷ್ಟೋ ದೇಶ ನಿಷ್ಠ ಕಾರ್ಯಕರ್ತರ ಸ್ಥಿತಿ ಹೇಗಿರಬಹುದು? ಎಂಬುದು ಊಹೆಗೂ ನಿಲುಕದ ಪ್ರಶ್ನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಡಿಕೆಶಿ ಅವರು ಸಂಘದ ಗೀತೆ ತಮಗೂ ತಿಳಿದಿದೆ ಎಂಬ ಪಾಂಡಿತ್ಯ ಪ್ರದರ್ಶಿಸಲು ಹೋಗಿ ‘ಸದಾ ವತ್ಸಲೇ ಮಾತೃಭೂಮಿ…’ಪಠಿಸಿದರು,ಇದನ್ನೇ ಮಹದಪರಾಧವೆಂದು ಪರಿಗಣಿಸಿದ ಕಾಂಗ್ರೆಸ್ ಮುಂದಾಳುಗಳು ಡಿಕೆ ಶಿವಕುಮಾರ್ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ‘ರಾ ಕಮಾಂಡ್ ‘ಮುಂದೆ ಕಟಕಟ್ಟೆಯಲ್ಲಿ ನಿಲ್ಲಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ,ಡಿಕೆಶಿ ಅವರು ಬಾಗಿ ಕ್ಷಮಾಪಣೆ ಕೇಳುವವಂತೆ ಮಾಡಿದ್ದಾರೆ. ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದ ಕಾಂಗ್ರೆಸ್ ನ ಆಂತರಿಕ ವಲಯದಲ್ಲಿ ಇವತ್ತಿಗೂ ತುರ್ತುಪರಿಸ್ಥಿತಿ ಕರಾಳ ನೃತ್ಯ ಮಾಡುತ್ತಲೇ ಇದೆ ಎಂಬುದಕ್ಕೆ ಡಿಕೆಶಿ ಅವರ ಕ್ಷಮಾಪಣೆ ಕೇಳಿದ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ. ‘ಮಾತೃಪ್ರೇಮ-ದೇಶ ಭಕ್ತಿ’ಸ್ವಾಭಿಮಾನಿ ಪ್ರಜೆಯ ಹೆಮ್ಮೆಯ ಕಿರೀಟ, ತಾಯ್ನೆಲ್ಲದ ಬದ್ಧತೆಯನ್ನು ತೋರುವುದೇ ಅಪರಾಧವೆಂದು ಪರಿಗಣಿಸಿ ಕ್ಷಮಾಪಣೆ ಕೇಳುವ ಪರಿಸ್ಥಿತಿ ವ್ಯಕ್ತಿ ಒಬ್ಬನನ್ನು ಮುತ್ತುವುದಾದರೆ ಅದಕ್ಕಿಂತ ಘೋರ ದುರಂತ ಇನ್ನೊಂದಿಲ್ಲ ಎಂದಿದ್ದಾರೆ.
ಡಿಕೆ ಶಿವಕುಮಾರ್ ಅವರ ‘ಕ್ಷಮೆ’ ರಾಹುಲ್ ಗಾಂಧಿಯವರನ್ನು ತಣ್ಣಗಾಗಿಸಲು,ಅಧಿಕಾರ ರಾಜಕಾರಣವನ್ನು ಭದ್ರಪಡಿಸಿಕೊಳ್ಳಲು ಅನಿವಾರ್ಯವಾಗುವುದಾದರೆ ಅದು ಕರ್ನಾಟಕದ ಸ್ವಾಭಿಮಾನವನ್ನು ಒತ್ತೆಯಿಟ್ಟಂತೆ.ಈಗಲೂ ಕಾಲ ಮಿಂಚಿಲ್ಲ ಡಿಕೆ ಶಿವಕುಮಾರ್ ಅವರು ನಮಸ್ತೆ ಸದಾ ವತ್ಸಲೇ ಮಾತೃಭೂಮಿ. ಗೀತೆಯ ಅರ್ಥವನ್ನು ರಾಹುಲ್ ಗಾಂಧಿ ಅವರಿಗೆ ತಿಳಿಸಿಕೊಟ್ಟು ತಮ್ಮ ನಡೆಯನ್ನು ಸಮರ್ಥಿಸಿ ಕೊಳ್ಳಲಿ,“ಮಾತೃ ಭೂಮಿಗಿಂತ ಕಾಂಗ್ರೆಸ್ ದೊಡ್ಡದಲ್ಲ”ಎಂಬ ಸಂದೇಶ ದೇಶಕ್ಕೆ ರವಾನಿಸಲಿ, ಆ ಮೂಲಕ ಸ್ವಾಭಿಮಾನಿ ಕನ್ನಡ ನೆಲದ ಘನತೆಯನ್ನು ಎತ್ತಿ ಹಿಡಿಯಲಿ ಎಂದು ಸಲಹೆ ನೀಡಿದ್ದಾರೆ.
ಇಟಲಿ ಮಾತೆಗೆ ಜಯಕಾರ ಹಾಕಬೇಕಾ?
“ನಮಸ್ತೇ ಸದಾ ವತ್ಸಲೇ ಮಾತೃಭೂಮೇ” ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎನ್ನುವುದಾದರೆ, ಕಾಂಗ್ರೆಸ್ ಪಕ್ಷದ ಪ್ರಕಾರ ಭಾರತೀಯರು ಇನ್ಯಾರಿಗೆ ಜಯಕಾರ ಹಾಕಬೇಕು? ಇಟಲಿ ಮಾತೆಗಾ? ಇಟಲಿಯಿಂದ ಬಂದ ಮೇಡಂಗಾ? ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ಕಾಲೆಳೆದಿದ್ದಾರೆ.
ಒಂದು ಕಡೆ ವಿಧಾನಸೌಧದಲ್ಲಿ “ಪಾಕಿಸ್ತಾನ ಜಿಂದಾಬಾದ್” ಎಂದು ಘೋಷಣೆ ಕೂಗಿದವರನ್ನ ಸಮರ್ಥನೆ ಮಾಡಿಕೊಳ್ಳುವ ಕಾಂಗ್ರೆಸ್ ಪಕ್ಷ, ಮತ್ತೊಂದು ಕಡೆ ತಾಯಿ ಭಾರತಾಂಬೆಗೆ ನಮಸ್ಕರಿಸುವವರನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಇದನ್ನು ದೇಶದ್ರೋಹಿ ಮನಸ್ಥಿತಿ ಅನ್ನದೇ ಇನ್ನೇನನ್ನಲು ಸಾಧ್ಯ?ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದಿದ್ದರೆ, ಕಿಂಚಿತ್ತಾದರೂ ಧೈರ್ಯ ಇದ್ದಿದ್ದರೆ, ಕ್ಷಮೆ ಕೇಳಬಾರದಿತ್ತು. ಕೇಳಲೇಬೇಕು ಎನ್ನುವ ಒತ್ತಡ ಇದ್ದಿದ್ದರೆ ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು ಎಂದು ಟಾಂಟ್ ನೀಡಿದ್ದಾರೆ.
Related Articles
Thank you for your comment. It is awaiting moderation.
Comments (0)