ತುಮಕೂರಿನಲ್ಲಿ ರೆಡಿಯಾಗ್ತಿದೆ ಆಯುರ್ವೆದಿಕ್ ರೈಸ್: ಕೊರೋನಾ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ ಅಂತೆ ಈ ರೈಸ್..?
- by Suddi Team
- June 11, 2020
- 56 Views
ತುಮಕೂರು: ಆಯುರ್ವೇದಿಕ್ ಗುಣವುಳ್ಳ ವಿಶೇಷ ರೈಸ್ ಸಪ್ತಗಿರಿ ರೈಸ್ ಮಿಲ್ ನಲ್ಲಿ ರೆಡಿಯಾಗುತ್ತಿದೆ. ರೋಗ ನಿರೋಧಕ ಶಕ್ತಿಯುಳ್ಳ ಈ ರೈಸ್ ಕ್ಯಾನ್ಸರ್, ಕರೋನಾ ನಿಯಂತ್ರಣಕ್ಕೂ ಸಹಕಾರಿಯಾಗಲಿದೆಯಂತೆ. ವಿಶ್ವದಲ್ಲೇ ತನ್ನದೇ ಆದ ವಿಶೇಷತೆಯನ್ನು ಹೊಂದಿರುವ ತುಮಕೂರಿನ ಅಂತರಸನಹಳ್ಳಿಯ ಸಪ್ತಗಿರಿ ರೈಸ್ ಮಿಲ್ಲಿನಲ್ಲಿ ವಿಶೇಷವಾದಂತಹ ಈ ಅಕ್ಕಿ ತಯಾರಾಗುತ್ತಿದೆ.
ನೈಸರ್ಗಿಕ ವಾದಂತಹ ವಸ್ತುಗಳನ್ನು ಈ ಅಕ್ಕಿಯಲ್ಲಿ ಬೆರೆಸಿ ತಯಾರು ಮಾಡಲಾಗುತ್ತದೆ. ಈ ರೈಸ್ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ ಎನ್ನಲಾಗಿದೆ. ಪ್ರಮುಖವಾಗಿ ಈ ಅಕ್ಕಿ ಸೇವಿಸಿದರೆ ಕ್ಯಾನ್ಸರ್ ಗುಣಮುಖವಾಗುವುದರ ಜೊತೆಗೆ ಕೊರೋನಾ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ ಅನ್ನೋದು ರೈಸ್ ಮಿಲ್ ಮಾಲಿಕ ಶ್ರೀಧರ ಬಾಬು ಅಭಿಪ್ರಾಯ. ಈಗಾಗಲೇ ಪ್ರಾಯೋಗಿಕವಾಗಿ ರೈಸ್ ತಯಾರು ಮಾಡಿ ಮೈಸೂರಿನ ಸಿ ಎಫ್ ಆರ್ ಟಿ ಐ ಲ್ಯಾಬ್ ಗೆ ಕಳುಹಿಸಲಾಗಿದೆ. ಲ್ಯಾಬ್‌ನಿಂದ ಅನುಮೋದನಲ್ಲಿಗೊಂಡರೆ ಈ ರೈಸ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ಆಯುರ್ವೇದಿಕ್ ಮಿಶ್ರಿತ ಸೋನಾಮುಸುರಿ ರೈಸ್ ಕೆಜಿಗರ ಕೇವಲ 32 ರೂ. ಗೆ ಸಿಗಬಹುದು ಅನ್ನೋದು ಮಾಲೀಕರ ಅಭಿಪ್ರಾಯ. ಮಲೇಷಿಯಾ, ಆಸ್ಟ್ರೇಲಿಯಾ, ಸರ್ಜಾ ಸರ್ಕಾರಗಳು ಸಪ್ತಗಿರಿ ಮಿಲ್ ನ ಔಷಧಿ ಗುಣವುಳ್ಳ ರೈಸ್ ಗಳಿಗೆ ಬೇಡಿಕೆ ಇಟ್ಟಿವೆ. ಜೊತೆಗೆ ವಿದೇಶದಲ್ಲೂ ಫ್ಯಾಕ್ಟರಿ ಮಾಡಲು ಆಹ್ವಾನಿಸಿವೆ. ಈ ನಡುವೆ ಸಚಿವ ಗೋಪಾಲಯ್ಯ ಸಪ್ತಗಿರಿ ಫ್ಯಾಕ್ಟರಿಗೆ ಭೇಟಿ ಕೊಟ್ಟು ರೈಸ್ ನ ವಿಶೇಷತೆಗಳನ್ನು ತಿಳಿದುಕೊಂಡಿದ್ದಾರೆ.
Related Articles
Thank you for your comment. It is awaiting moderation.


Comments (0)