ಕಣ್ಣಿನ ಸುತ್ತ ಇರುವ ಕಪ್ಪು ಕಲೆಯನ್ನು ನಿವಾರಣೆ ಮಾಡಬೇಕೇ? ಹಾಗಾದ್ರೆ ಈ ಮನೆಮದ್ದು ಉಪಯೋಗಿಸಿ!
- by Suddi Team
 - July 2, 2018
 - 303 Views
 
ಕಣ್ಣಿನ ಸುತ್ತ ಕಪ್ಪು ಕಲೆ ಇದ್ರೆ ಮುಖದ ಅಂದವೇ ಹಾಳಾಗುತ್ತದೆ. ನಿದ್ರಾಹೀನತೆ ಸೇರಿದಂತೆ ಹಲವು ಕಾರಣಗಳಿಂದ ಕಣ್ಣಿನ ಸುತ್ತಾ ಕಪ್ಪು ಕಲೆಗಳು ಉಂಟಾಗುತ್ತವೆ. ಒಮ್ಮೆ ಕಪ್ಪು ಕಲೆಗಳು ಬಂದರೆ ಸುಲಭವಾಗಿ ಹೋಗುವುದಿಲ್ಲ. ಆದರೆ, ಮನೆ ಮದ್ದುಗಳಿಂದಲೇ ಕಪ್ಪು ಕಲೆ ನಿವಾರಣೆ ಮಾಡಬಹುದಾಗಿದೆ.
ಕಪ್ಪು ಕಲೆಗಳನ್ನು ಹೋಗಲಾಡಿಸಲು ಹಲವಾರು ಬಗೆಯ ಔಷಧ ಮತ್ತು ಕ್ರೀಮ್ ಗಳಿವೆ, ಆದರೆ, ಕಡಿಮೆ ಖರ್ಚಿನಲ್ಲಿ ಕೆಮಿಕಲ್ಸ್ ಇಲ್ಲದೆ ಮನೆಯಲ್ಲೇ ಮಾಡುವಂತಹ ಮನೆ ಮದ್ಧುಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.
ಟೀ ಪುಡಿ
ಮನೆಯಲ್ಲಿರುವ ಟೀ ಪುಡಿಯನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ತಣ್ಣಗಾದ ನಂತರ ಹತ್ತಿಯಿಂದ ಕಣ್ಣಿನ ಸುತ್ತಲೂ ಅದನ್ನು ಹಚ್ಚಿ. ಮೂರು ದಿನ ಈ ರೀತಿ ಮಾಡಿದರೆ ಕಣ್ಣಿನ ಸುತ್ತಲಿನ ಕಪ್ಪು ಕಲೆ ನಿವಾರಣೆಯಾಗುತ್ತದೆ.
ಸೌತೆಕಾಯಿ, ಟೊಮೇಟೊ ಮತ್ತು ಲಿಂಬೆಹಣ್ಣಿನ ರಸ
ತಲಾ ಒಂದೊಂದು ಸ್ಪೂನ್ ಸೌತೆಕಾಯಿ ಮತ್ತು ಟೊಮೇಟೊ ರಸಕ್ಕೆ 4 ಹನಿ ನಿಂಬೆರಸವನ್ನು ಮಿಶ್ರಣ ಮಾಡಿ ಕಣ್ಣಿನ ಕೆಳಗಿನ ಕಪ್ಪು ಕಲೆಗಳಿಗೆ ಹಚ್ಚಿ 1/2 ಗಂಟೆಯ ನಂತರ ತೊಳೆಯಿರಿ ಹೀಗೆ ಪ್ರತಿ ನಿತ್ಯ ಮಾಡಿದರೆ 15 ದಿನಗಳಲ್ಲಿ ಕಪ್ಪು ಕಲೆಗಳು ಕಡಿಮೆಯಾಗುತ್ತವೆ. ಈ ಮಿಶ್ರಣವನ್ನು ಮುಖಕ್ಕೂ ಹಚ್ಚಬಹುದಾಗಿದೆ.
ಆಲೋವೆರಾ (ಲೋಳೆಸರ)
ಲೋಳೆಸರದ ರಸವನ್ನು ಕಣ್ಣಿನ ಸುತ್ತ ಹಚ್ಚಿಕೊಂಡು 30 ನಿಮಿಷ ಬಿಟ್ಟು ಮುಖ ತೊಳೆದುಕೊಂಡರೆ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.
ಹಾಲಿನ ಕೆನೆ ಮತ್ತು ಮೊಸರು
ಒಂದು ಚಮಚ ತಾಜಾ ಮೊಸರಿನ ಜೊತೆಗೆ ಅರ್ಧ ಚಮಚ ಹಾಲಿನ ಕೆನೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ಮಾಡಿಕೊಂಡು ಈ ಪೇಸ್ಟ್ ನ್ನು ಕಪ್ಪು ಕಲೆಗಳ ಸುತ್ತ ಹಚ್ಚಿ. 10-15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.
ಈ ರೀತಿ ಮನೆ ಮದ್ದುಗಳನ್ನು ಬಳಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಸಹ ಇರುವುದಿಲ್ಲ.
Related Articles
                            Thank you for your comment. It is awaiting moderation.
                        
                                        
                    
                    
                
                            
                                            

                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)