ಸಾಮಾನ್ಯ ಆರೋಗ್ಯ ಸಮಸ್ಯೆಗೆ ಬಾಳೆಹಣ್ಣಿನ ಔಷಧಿ: ಉಚಿತ ಔಷಧಿಗೆ ಹೆಸರು ನೋಂದಾಯಿಸಿಕೊಳ್ಳಿ 

ಧಾರವಾಡ : ಜನಸಾಮಾನ್ಯರಲ್ಲಿ ಹೆಚ್ಚು ಕಾಡುವ ಶೀತ, ನೆಗಡಿ, ಕೆಮ್ಮು, ಕಫ, ಅಸ್ತಮಾ ಅಲರ್ಜಿಯ ರೆಸ್ಪಿರೇಟರಿ ಸಮಸ್ಯೆ ನಿವಾರಣೆಗಾಗಿ ಬಾಳೆಹಣ್ಣಿನಲ್ಲಿ ಸೇರಿಸಿದ ಔಷಧಿಯನ್ನು ಡಿಸೆಂಬರ್-3 ರಂದು (ಬುಧವಾರ) ಸಂಜೆ 4 ಗಂಟೆಯಿ0ದ 7 ಗಂಟೆಯವರೆಗೆ ಉಚಿತವಾಗಿ ವಿತರಣೆ ಮಾಡಲಾಗುವುದೆಂದು ಹಿರಿಯ ಆಯುರ್ವೇದ ತಜ್ಞ ಡಾ. ಮಹಾಂತಸ್ವಾಮಿ ಹಿರೇಮಠ ತಿಳಿಸಿದ್ದಾರೆ.

ಪ್ರತೀ ವರ್ಷ ನಗರದ ಸಪ್ತಾಪೂರ ವರಸಿದ್ಧಿವಿನಾಯಕ ಗುಡಿ ಹಿಂದೆ ಮಿಚಿಗಿನ್ ಬಡಾವಣೆಯಲ್ಲಿರುವ ಆಯುರ್ಧಾಮದಲ್ಲಿ 3 ರಿಂದ 70 ವಯಸ್ಸಿನವರಿಗೆ ಒಂದೇ ಕಂತಿನಲ್ಲಿ ನೀಡಲಾಗುವ ಈ ಔಷಧಿ ಸೇವನೆಯಿಂದ ರೆಸ್ಪಿರೇಟರಿ ಸಮಸ್ಯೆ ಸಂಪೂರ್ಣ ನಿವಾರಣೆಯಾಗಲಿದೆ. ಇದು ಬಾಳೆಹಣ್ಣಿನಲ್ಲಿ ಸೇರಿಸಿ ನೀಡಲಾಗುವ ಔಷಧಿಯಾಗಿರುವುದರಿಂದ ನಿರ್ದಿಷ್ಟ ಸಂಖ್ಯೆಗೆ ಅನುಗುಣವಾಗಿ ಬಾಳೆಹಣ್ಣುಗಳನ್ನು ಸಂಗ್ರಹಿಸಿ ಉಚಿತ ಔಷಧಿ ಸಿದ್ಧಪಡಿಸಬೇಕಾಗಿದ್ದು, ಔಷಧಿ ಬೇಕಾದವರು ಡಿಸೆಂಬರ್-2ರ ರಾತ್ರಿ 8 ಗಂಟೆಯ ಒಳಗಾಗಿ ಮೊಬೈಲ್ ಸಂಖ್ಯೆ : 9448157681  ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಕುರಿತು ಖುದ್ಧಾಗಿ ಆಯುರ್ಧಾಮಕ್ಕೆ ಆಗಮಿಸಿಯೂ ಮಾಹಿತಿ ಪಡೆಯಬಹುದಾಗಿದೆ ಎಂದು ಡಾ. ಮಹಾಂತಸ್ವಾಮಿ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Comments (0)

Leave a Comment