ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದಾರೆ: ಬಿ.ಸಿ ಪಾಟೀಲ್
- by Suddi Team
- June 5, 2020
- 44 Views

ಕೊಪ್ಪಳ,ಜೂ. 5: ಬಿಜೆಪಿ ಸರ್ಕಾರ ರಚನೆಗೆ ಆರ್.ಶಂಕರ್, ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಅವರ ಕೊಡುಗೆಯೂ ಹೆಚ್ಚಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೊಸಕೋಟೆಯಲ್ಲಿ ಶರತಗ ಬಚ್ಚೇಗೌಡಗೆ ಸ್ಪರ್ಧಿಸುವುದು ಬೇಡ ಎಂದು ಬಿಜೆಪಿ ನಾಯಕರು ಹೇಳಿದ್ದರು.ಆದರೆ ಅವರು ಸ್ಪರ್ಧಿಸಿ ಎಂಟಿಬಿಗೆ ಅನ್ಯಾಯವಾದಂತಾಗಿದೆ ಎಂದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಸಿದ್ದರಾಮಯ್ಯರನ್ನು ಒಂದುಕಡೆ ಮುಖ್ಯಮಂತ್ರಿ ಅವರ ಮಗ ದಿ.ರಾಕೇಶ್ ಅವರನ್ನು ಮತ್ತೊಂದು ಕಡೆ ಮುಖ್ಯಮಂತ್ರಿ ಹಾಗೂ ಕೆಂಪಯ್ಯ ಅವರನ್ನು ಡಿಫ್ಯಾಕ್ಟ್ ಹೋಮ್ಮಿನಿಸ್ಟರ್ ಎನ್ನುತ್ತಿದ್ದರು.ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಎಲ್ಲರನ್ನು ಸರಿಯಾಗಿ ನಡೆಸಿಕೊಂಡಿದ್ದರೆ.ಸರಿಯಾಗಿ ಆಡಳಿತ ನಡೆಸಿದಿದ್ದರೆ ಕಾಂಗ್ರೆಸ್ಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ.ಎಲ್ಲರೂ ತಮ್ಮತಮ್ಮ ಸ್ವಾರ್ಥಕ್ಕೆ ಗೋಡೆಗಳನ್ನು ಕಟ್ಟಿಕೊಂಡು ಸರ್ಕಾರ ಕೆಡವಿದ್ದಾರೆ.ಧರ್ಮಸ್ಥಳದ ಪ್ರಕೃತಿ ಚಿಕಿತ್ಸೆಗೆ ಹೋಗಿದ್ದಾಗಲೇ ಸಿದ್ದರಾಮಯ್ಯ ಮೈತಗರಿ ಸರ್ಕಾರ ಉಳಿಯುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದರಲ್ಲ ಎಂದು ತಿರುಗೇಟು ನೀಡಿದರು.
ಕರ್ನಾಟಕದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ.ಹೊರರಾಜ್ಯದಿಂದ ಬಂದವರಿಂದ ಸೋಂಕು ಹರಡುತ್ತಿದೆಯಷ್ಟೆ.ವಿಪಕ್ಷಗಳು ಸುಕಾಸುಮ್ಮನೆ ದೂರುವುದರಲ್ಲಿ ಅರ್ಥವಿಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.
Related Articles
Thank you for your comment. It is awaiting moderation.
Comments (0)