ಜೀವನ ಶೈಲಿ, ಆಹಾರ ಪದ್ಧತಿ ಬದಲಾಯಿಸಿಕೊಂಡು ಉತ್ತಮ ಆರೋಗ್ಯವಂತರಾಗಿ: ವೆಂಕಯ್ಯ ನಾಯ್ಡು
- by Suddi Team
 - June 28, 2018
 - 87 Views
 
ಬೆಂಗಳೂರು: ಹಳೆ ಕಾಲದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಜನರು ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ ನೀಡಿದರು.
ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ವೆಂಕಯ್ಯ ನಾಯ್ಡು, ಕನ್ನಡದಲೇ ಮಾತು ಆರಂಭಿಸಿದರು. ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕ್ಯಾನ್ಸರ್ ಜಾಗೃತಿ ಕಾರ್ಯ ಹೆಚ್ಚಾಗಬೇಕು. ಮೊದಲ ಹಂತದಲ್ಲಿ ಕ್ಯಾನ್ಸರ್ ರೋಗವಿರೋದು ಗೊತ್ತಾದ್ರೆ ಸಮರ್ಪಕ ಚಿಕಿತ್ಸೆ ಪಡೆದು ಕ್ಯಾನ್ಸರ್ ಗುಣಪಡಿಸಿಕೊಳ್ಳ ಬಹುದಾಗಿದೆ ಎಂದು ಹೇಳಿದರು.
ಜನರ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಾವಣೆಯಾಗಬೇಕಿದೆ. ಜಂಕ್ ಫುಡ್, ಫಿಜ್ಜಾ ಬರ್ಗರ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುವವರ ಸಂಖ್ಯೆ ಕಡಿಮೆಯಾಗಿದೆ. ಕೆಲಸದ ಬ್ಯುಸಿ ನಡುವೆ ದಿನನಿತ್ಯ ವ್ಯಾಯಾಮ ಮಾಡದೆ ದೇಹದ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದ ಜೊತೆ ನಾಲ್ಕು ದಶಕಗಳಿಂದ ನಂಟು ಹೊಂದಿದ್ದೇನೆ. ಅದ್ಭುತವಾದ, ಆರೋಗ್ಯಕರ ಅಡುಗೆ ಸಿಗುತ್ತದೆ. ಮುದ್ದೆ ನಾಟಿ ಕೋಳಿ ಸಾರು ರುಚಿಯಾಗಿರುತ್ತೆ ಎಂದರು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)