ಪರಿಷತ್ ಪದವೀಧರರ ಚುನಾವಣೆ: ಇಂದು ಮತದಾನ
- by Suddi Team
- June 8, 2018
- 33 Views
ಬೆಂಗಳೂರು: ವಿಧಾನಸಭಾ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೆ ಇಂದು ವಿಧಾನಪರಿಷತ್ನ 6 ಪದವೀಧರರ ಮತ್ತು ಶಿಕ್ಷಕರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಇಂದು ಮತದಾನ ಪ್ರಕ್ರಿಯೆ ಚುರುಕುಗೊಂಡಿದೆ.
ಬೆಂಗಳೂರು ಪದವೀಧರರ ಕ್ಷೇತ್ರ ವ್ಯಾಪ್ತಿಯಲ್ಲಿ
ಬೆಂಗಳೂರು ನಗರ – ಗ್ರಾಮೀಣ ಮತ್ತು ರಾಮನಗರ ಜಿಲ್ಲೆಗಳ ಪದವೀಧರರು ಮತದಾನ ಮಾಡಲಿದ್ದಾರೆ. ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 65, 354 ಪದವೀಧರ ಮತದಾರಿದ್ದು 38,451 ಪುರುಷರು ಹಾಗೂ 26,891 ಮಹಿಳಾ ಮತದಾರಿದ್ದಾರೆ.
ಪದವೀಧರರ ಕ್ಷೇತ್ರದಲ್ಲಿ 82 ಮುಖ್ಯ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. 46 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ 36 ಮುಖ್ಯ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವವರಿಗೆ ಮಾತ್ರ ಮತ ಚಲಾಹಿಸಲು ಅವಕಾಶ ವಿದ್ದು, ನಗರದ ಆರ್.ಸಿ ಕಾಲೇಜಿನಲ್ಲಿ ಜೂನ್ 12 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ..
ಬೆಂಗಳೂರು ಪದವೀಧರ ಕ್ಷೇತ್ರದ
ಕಣದಲ್ಲಿ ಬಿಜೆಪಿಯಿಂದ ಅ ದೇವೆಗೌಡ, ಕಾಂಗ್ರೆಸ್ ನಿಂದ ರಾಮೋಜಿಗೌಡ, ಜೆಡಿಎಸ್ ನಿಂದ ಅಚ್ಚೇಗೌಡ ಶಿವಣ್ಣ, ಸಿಪಿಐ ನಿಂದ ಪ್ರಕಾಶ ಕೆ, ಭಾರತೀಯ ಜನತಾದಳ ಪಕ್ಷದಿಂದ ವಿ.ಸುರೇಶ್ ಬಾಬು ಸ್ಪರ್ಧಿಸಿದ್ದು, ಒಟ್ಟು
17 ಮಂದಿ ಪಕ್ಷೇತರರು ಅಭ್ಯರ್ಥಿಗಳು ಕಣಕ್ಕಿಳಿದ್ದಿದಾರೆ.
Related Articles
Thank you for your comment. It is awaiting moderation.
Comments (0)