ಬಿಜೆಪಿ ವಿರುದ್ಧ ರಾಹುಲ್ ನೇತೃತ್ವದಲ್ಲಿ ಹೋರಾಟ: ಈಶ್ವರ್ ಖಂಡ್ರೆ
- by Suddi Team
- August 9, 2018
- 89 Views
ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಅಧಿಕಾರ ಬಿಟ್ಟು ತೊಲಗಿ ಎಂಬ ಹೋರಾಟ ಮಾಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿ ಅಂಗವಾಗಿ ಫ್ಲ್ಯಾಗ್ ಆಫ್ ಮಾಡಿದ ಬಳಿಕ ಮಾತನಾಡಿದ ಈಶ್ವರ್ ಖಂಡ್ರೆ, ರೈತರ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ನೀಡಿಲ್ಲ, ಉದ್ಯೋಗ ಸೃಷ್ಟಿ ಮಾಡಿಲ್ಲ , ರೈತರ ಸಂಕಷ್ಟಗಳಿಗೆ ಮೋದಿ ನೆರವಾಗಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಎಲ್ಲ ಅಂಶಗಳನ್ನು ಆಧಾರವಾಗಿಸಿಕೊಂಡು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೋರಾಟ ನಡೆಸುತ್ತೇವೆ. ಬೀದರ್ನಿಂದ ನಮ್ಮ ಹೋರಾಟ ಆರಂಭ ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಶಾಸಕರು ಕಾಂಗ್ರೆಸ್ ನತ್ತ ಒಲವು ಎಂಬ ವಿಚಾರವು ಸತ್ಯ. ಆದ್ರೆ ಯಾರೆಲ್ಲ ಪಕ್ಷ ಸೇರ್ತಾರೆ ಎಂಬ ಮಾಹಿತಿ ಕೊಡಲು ಸಾಧ್ಯ ಇಲ್ಲ ಎಂದರು.
Related Articles
Thank you for your comment. It is awaiting moderation.
Comments (0)