ಎಚ್ಡಿಡಿಗೆ 88ನೇ ಹುಟ್ಟುಹಬ್ಬದ ಸಂಭ್ರಮ
- by Suddi Team
- May 18, 2020
- 101 Views
ಬೆಂಗಳೂರು: ಇಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ 88 ನೇ ಹುಟ್ಟುಹಬ್ಬದ ಸಂಭ್ರಮ. ಕೊರೋನಾ ಹಿನ್ನಲೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಎಚ್ಡಿಡಿ ನಿರ್ಧರಿಸಿದ್ದಾರೆ. ಇಂದು ಇಡೀ ದಿನ ಮನೆಯಲ್ಲಿಯೇ ಕುಟುಂಬಸ್ಥರ ಜೊತೆ ಕಾಲ ಕಳೆಯಲಿದ್ದಾರೆ.
ತಮ್ಮ ನೆಚ್ಚಿನ ನಾಯಕ ಹುಟ್ಟುಹಬ್ಬ ಆಚರಿಸಲು ಮನೆ ಬಳಿ ಬರೋ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಮನೆ ಬಳಿ ಬಾರದಂತೆ ದೊಡ್ಡ ಗೌಡರು ಮನವಿ ಮಾಡಿದ್ದಾರೆ. ಕೊರೋನಾ ಹಿನ್ನಲೆಯಲ್ಲಿ ಜನ ಸೇರುವುದು ಅಪಾಯಕಾರಿ. ಹಾಗಾಗಿ ಯಾರೂ ಕೂಡಾ ಮನೆ ಬಳಿ ಬಾರದಂತೆ ಮನವಿ ಮಾಡಿದ್ದಾರೆ. ತಾವೆಲ್ಲರೂ ಇದ್ದಲ್ಲಿಂದಲೇ ಹರಸಿ, ಮನೆ ಬಳಿ ಜನಸ್ತೋಮ ಸೇರುವುದು ಬೇಡ. ದೇಶದ ಇಂದಿನ ಸ್ಥಿತಿ ಆತಂಕಕಾರಿಯಾಗಿದೆ ಎಂದು ಕಾರ್ಯಕರ್ತರಿಗೆ ಗೌಡರು ಮನವಿ ಮಾಡಿದ್ದಾರೆ.
ಇನ್ನೂ ಮಾಜಿ ಪ್ರಧಾನಿಗಳ ಹುಟ್ಟು ಹಬ್ಬದ ಪ್ರಯುಕ್ತ ಜೆಡಿಎಸ್ ಕಛೇರಿಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನ ಎಚ್ಡಿಡಿ ಉದ್ಘಾಟನೆ ಮಾಡಲಿದ್ದಾರೆ. ನಂತರ ಇಡೀ ದಿನ ಮನೆಯಲ್ಲೇ ಕಾಲ ಕಳೆಯಲಿರುವ ಮಾಜಿ ಪ್ರಧಾನಿ..
Related Articles
Thank you for your comment. It is awaiting moderation.


Comments (0)