ಜೆಡಿಎಸ್ ಮುಗಿಸೋದೆ ಕಾಂಗ್ರೆಸ್ ನಾಯಕರ ಅಜೆಂಡಾ: ಎಚ್ಡಿಕೆ ಕಿಡಿ

ಬೆಂಗಳೂರು: ಕಾಂಗ್ರೆಸ್ ನಾಯಕರ ಮೊದಲ ಟಾರ್ಗೆಟ್ ಜೆಡಿಎಸ್. ಬಿಜೆಪಿಗಿಂತ ನಮ್ಮ ಪಕ್ಷದ ಮೇಲೆ ಅಸೂಯೆ ಜಾಸ್ತಿ. ಜೆಡಿಎಸ್ ಮುಗಿಸೋದೆ ಕಾಂಗ್ರೆಸ್ ಮೊದಲ ಅಜೆಂಡಾ ಅಂತಾ ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.

ಆರ್.ಆರ್. ನಗರ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಮಾಡಿದ ಎಚ್ಡಿಕೆ ಕಾಂಗ್ರೆಸ್ ಅಜೆಂಡಾವನ್ನು ಎಳೆ ಎಳೆಯಾಗಿ ಬಿಡಿಸಿಟ್ರು. 2004 ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರಲಿಲ್ಲ. ಆಗ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಸರ್ಕಾರ ರಚನೆ ಮಾಡಿದ್ವಿ.ಆದರೆ,‌ ಆರು ತಿಂಗಳಾದ್ರೂ ಸಂಪುಟ ವಿಸ್ತರಣೆ ಮಾಡಲೇ ಇಲ್ಲ. ಕಾಂಗ್ರೆಸ್ ಪಕ್ಷವನ್ನ ಜನತೆ ತಿರಸ್ಕರಿಸಿದ್ದರು. ಜಾತ್ಯಾತೀತ ಸಿದ್ದಾಂತದ ಮೇಲೆ ಮೈತ್ರಿ ಇತ್ತು. ಅಂದೆ ಜೆಡಿಎಸ್ ಮುಗಿಸಲು ಹೊರಟಿದ್ದರು. ಅದೇ ಕಾರಣಕ್ಕೆ ಕಾಂಗ್ರೆಸ್ ಜೊತೆ ಸರ್ಕಾರ ರಚನೆಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಒಬ್ಬ ಸಿಎಂ ಆಗಿ ನಾನು ಕಣ್ಣೀರು ಹಾಕಿದ್ದೆಅಂತಾ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾಡಿದ್ರು.

ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಅಂತಾ ಅಪಪ್ರಚಾರಮಾಡ್ತಿದಾರೆ. ನನ್ನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ನಡೆಯುತ್ತಿದೆ. ಇದಕ್ಕೆ ಉತ್ತರ ಕೊಡುವ ಶಕ್ತಿ ನಮ್ಮ ಮತದಾರರ ಕೈಯಲ್ಲಿದೆ. ದೇವೇಗೌಡರ ಕುಟುಂಬವನ್ನ ಯಾರೂ ಹಣದಿಂದ ಕೊಂಡುಕೊಳ್ಳಲು ಸಾಧ್ಯ ಇಲ್ಲ. ಅದಕ್ಕೆ ನಾವು ಧೈರ್ಯವಾಗಿರೋದು. ಐಟಿ, ಇಡಿ ಬರುತ್ತಾರೆಂದು ಹೆದರಿ ಕೂತಿಲ್ಲ. ನಮ್ಮ ಕುಟುಂಬಕ್ಕೆ ಕೊಟ್ಟ ಅಭ್ಯಾಸವೇ ಹೊರತು ತೆಗೆದುಕೊಂಡಿಲ್ಲಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದ್ರು.

ಕುಟುಂಬ ರಾಜಕಾರಣದ ಬಗ್ಗೆ ಮಾತನಾಡ್ತಾರೆ, ಯಡಿಯೂರಪ್ಪ ಮತ್ತು ಅವರ ಮಕ್ಕಳು, ಸಿದ್ದರಾಮಯ್ಯ ಮತ್ತು ಅವರ ಪುತ್ರ, ಜಾರಕಿಹೊಳಿ ಮತ್ತು ಅವರ ಸಹೋದರರು, ಡಿಕೆ ಸಹೋದರರು ಎಲ್ಲರೂ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ನಮ್ಮ ಕುಟುಂಬದ ಮೇಲೆ ಮಾತ್ರ ಆರೋಪ ಮಾಡುತ್ತಾರೆ. ಯಾಕೆ ನಮ್ಮ ಕುಟುಂಬ ರಾಜ್ಯಕ್ಕೆ ಕೊಡುಗೆ ಕೊಟ್ಟಿಲ್ವಾ. ಪ್ರಧಾನಿಯಾಗಿ ದೇವೇಗೌಡರು, ಮುಖ್ಯಮಂತ್ರಿಯಾಗಿ ನಾನು ಹಾಗೂ ಮಂತ್ರಿಯಾಗಿ ರೇವಣ್ಣ ಕೊಡುಗೆ ಕೊಟ್ಟಿಲ್ವಾ. ನಮ್ಮಕುಟುಂಬದ ಮೇಲೆ ಧೂಷಣೆ ಮಾಡುವುದು ಬಿಡಿ ಎಂದರು.

Related Articles

Comments (0)

Leave a Comment