ಪ್ರವಾಸಿಗರೇ ಗಮನಿಸಿ:ನಾಲ್ಕು ದಿನ ನಂದಿಬೆಟ್ಟಕ್ಕೆ ನೋ ಎಂಟ್ರಿ
- by Suddi Team
- June 11, 2025
- 108 Views
ಚಿಕ್ಕಬಳ್ಳಾಪುರ:ರಾಜ್ಯ ರಾಜಧಾನಿ ಬೆಂಗಳೂರು ಸಮೀಪದ ಹಿಲ್ ಸ್ಟೇಷನ್ ನಂದಿ ಗಿರಿಧಾಮಕ್ಕೆ ಪ್ರವಾಸ ಕೈಗೊಳ್ಳಲು ಪ್ಲಾನ್ ಮಾಡಿದ್ರೆ ಒಮ್ಮೆ ಚೆಕ್ ಮಾಡಿಕೊಳ್ಳಿ, ಜೂನ್ 16 ರಿಂದ 20 ರವರೆಗೆ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನೋ ಎಂಟ್ರಿ.ಈಗಾಗಲೇ ದಿನಾಂಕ ನಿಗಧಿಪಡಿಸಿಕೊಂಡು ಪ್ರವಾಸಕ್ಕೆ ಸಿದ್ದತೆ ಮಾಡಿಕೊಂಡಿದ್ರೆ ಕೂಡಲೇ ದಿನಾಂಕ ಬದಲಿಸಿಕೊಂಡು ಪ್ಲಾನ್ ಮಾಡಿಕೊಳ್ಳಿ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದಲ್ಲಿ ಜೂನ್ 19ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ಜೂನ್ 16ರ ಸಂಜೆ 6 ರಿಂದ ಜೂನ್ 20ರ ಬೆಳಗ್ಗೆ 5ರ ವರೆಗೆ ಪ್ರವಾಸಿಗರು, ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಜೂನ್ 17ರಿಂದ 19ರ ವರೆಗೆ ಗಿರಿಧಾಮದಲ್ಲಿನ ವಸತಿ ನಿಲಯದ ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸುವಿಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಬಿನೆಟ್ ಮೀಟಿಂಗ್ ಹಿನ್ನಲೆಯಲ್ಲಿ ಪ್ರವಾಸಿಗರಿಗೆ ನಾಲ್ಕು ದಿನ ನಂದಿಬೆಟ್ಟ ಬಂದ್ ಆಗಲಿದೆ,ಗಿರಿಧಾನ ರಾಜಕೀಯಧಾಮವಾಗಲಿದೆ ಹಾಗಾಗಿ ಪ್ರವಾಸಿಗರು ಬೇರೆ ದಿನಗಳಂದು ನಂದಿಬೆಟ್ಟಕ್ಕೆ ಬರಲು ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು, ಇಲ್ಲದೇ ಇದ್ದಲ್ಲಿ, ಬೆಟ್ಟದ ತಪ್ಪಲು ನೋಡಿಕೊಂಡು ವಾಪಸ್ ಬರಬೇಲಾದ ಸ್ಥಿತಿ ಎದುರಾಗಲಿದೆ.
Related Articles
Thank you for your comment. It is awaiting moderation.


Comments (0)