- ಮುಖ್ಯ ಮಾಹಿತಿ
- ರಾಜ್ಯ
- Like this post: 0
Special Story-ಬೇಲೂರಿನಲ್ಲಿ ಮ್ಯೂಸಿಯಂ: ಸಾಲುಮರದ ತಿಮ್ಮಕ್ಕರ ಕಡೆಯ ಆಸೆ ಈಡೇರಿಕೆಗೆ ಒಪ್ಪಿದ ಸರ್ಕಾರ
- by Suddi Team
- November 14, 2025
- 7 Views
ಬೆಂಗಳೂರು: ತಮಗೆ ಸಂದ ಪ್ರಶಸ್ತಿಗಳು ಮತ್ತು ಸಾಧನೆಗಳನ್ನು ದಾಖಲಿಸಿ ಸಂರಕ್ಷಿಸುವ ಸಲುವಾಗಿ ಬಳ್ಳೂರಿನಲ್ಲಿ ವಸ್ತುಸಂಗ್ರಹಾಲಯ ಮಾಡಬೇಕು ಎನ್ನುವ ಸಾಲಮುರದ ತಿಮ್ಮಕ್ಕ ಅವರ ಕಡೆಯ ಆಸೆಯನ್ನು ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ,ತಿಮ್ಮಕ್ಕ ಅವರ ಕೊನೆ ಆಸೆಯ ಪತ್ರ ಕೊಟ್ಟಿದ್ದಾರೆ. ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯವನ್ನು ಮಾಡಬೇಕು ಎಂದು ಹೇಳಿದ್ದು, ಈ ಬಗ್ಗೆ ಸರ್ಕಾರ ಪರಿಶೀಲಿಸಿ ಪರಿಗಣಿಸಲಿದೆ ಎಂದು ಭರವಸೆ ನೀಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಲುಮರದ ತಿಮ್ಮಕ್ಕನವರ ಸಾಧನೆ, ಅವರ ಕಾರ್ಯಗಳ ದಾಖಲೀಕರಣ ಆಗಬೇಕು ಹಾಗೂ ಅವರಿಗೆ ಸಿಕ್ಕ ಪ್ರಶಸ್ತಿಗಳನ್ನು ಕಾಪಾಡಬೇಕು. ಇದಕ್ಕಾಗಿ ಅವರ ಗ್ರಾಮ ಬಳ್ಳೂರಿನ ಅಭಿವೃದ್ಧಿಗೆ 2 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಸ್ಥಳೀಯ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದರು.
ಸಾಲುಮರದ ತಿಮ್ಮಕ್ಕನವರಿಗೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಅವರ ಜೀವನಗಾಥೆ ಕುರಿತು ಅನೇಕ ಡಾಕ್ಯುಮೆಂಟರಿಗಳನ್ನು ಮಾಡಿದ್ದಾರೆ. ಲೇಖನಗಳು ಪ್ರಕಟವಾಗಿವೆ. ಎಲ್ಲವನ್ನೂ ಜತನದಿಂದ ಕಾಪಾಡಬೇಕು. ಇದಕ್ಕೆ ವಸ್ತು ಸಂಗ್ರಹಾಲಯ ಮಾಡಬೇಕಾಗಿದೆ. ಇದನ್ನು ಅವರ ಗ್ರಾಮದಲ್ಲೇ ಮಾಡಿದರೆ ಅನುಕೂಲ ಎಂದು ಪ್ರತಿಪಾದಿಸಿದ್ದರು.
ಮತ್ತೊಂದು ಕಡೆ ಸ್ವತಃ ಸಾಲುಮರದ ತಿಮ್ಮಕ್ಕ ಅವರೇ ಸಾಗರೋತ್ತರ ಕನ್ನಡಿಗರ ಒಕ್ಕೂಟಕ್ಕೆ ಮನವಿ ಮಾಡಿದ್ದರು. ನನಗೆ ಬಂದಿರುವ ಪ್ರಶಸ್ತಿ,ದಾಖಲೆಗಳನ್ನು ಇಡಲು ಸ್ಥಳವಿಲ್ಲ ಹಾಗಾಗಿ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಸಹಕರಿಸಿ ಎಂದಿದ್ದರು ಇದಕ್ಕೆ ಪ್ರಕ್ರಿಯೆ ನೀಡಿದ್ದ ಒಕ್ಕೂಟ, ಸಾಲುಮರದ ತಿಮ್ಮಕ್ಕ ಅವರಿಗೆ ಸಮರ್ಪಿತವಾದ ವಸ್ತುಸಂಗ್ರಹಾಲಯವನ್ನು ಸ್ಥಾಪಿಸುವ ಯೋಜನೆಗೆ ಸಹಮತಿಸಿತ್ತು. ತಿಮ್ಮಕ್ಕ ಅವರಿಗೆ ಸಂದ ಪ್ರಶಸ್ತಿಗಳು ಮತ್ತು ಅವರ ಸಾಧನೆಗಳನ್ನು ದಾಖಲಿಸಿ ಸಂರಕ್ಷಿಸುವ ಗುರಿಯೊಂದಿಗೆ ವಸ್ತುಸಂಗ್ರಹಾಲಯವನ್ನು ಬಳ್ಳೂರು ಗ್ರಾಮದಲ್ಲಿ ಸ್ಥಾಪಿಸುವ ಪ್ರಸ್ತಾವನೆಯೂ ಮಾಡಿತ್ತು ಆದರೆ ಅದು ಕೈಗೂಡಲಿಲ್ಲ.
ಅಂತಿಮವಾಗಿ ಸಾಲುಮರದ ತಿಮ್ಮಕ್ಕ ತಮ್ಮ ಕಡೆಯ ಆಸೆಯಾಗಿ ತಿಮ್ಮಕ್ಕ ಅವರು ತಮ್ಮ ಕೊನೆ ಆಸೆಯ ಪತ್ರವನ್ನು ಸರ್ಕಾರಕ್ಕೆ ಕೊಟ್ಟಿದ್ದರು. ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯವನ್ನು ಮಾಡಬೇಕು ಎಂದು ಮನವಿ ಮಾಡಿದ್ದರು. ಅವರು ಕಾಲವಾದ ನಂತರ ಇದಕ್ಕೆ ಕಾಲ ಕೂಡಿಬರುವಂತಾಗಿದೆ.
Related Articles
Thank you for your comment. It is awaiting moderation.


Comments (0)